Business News: ಭಾರತೀಯ ಕೆಲ ಮಹಿಳೆಯರು, ಮನಸ್ಸಿಗೆ ಬಂದ ರೀತಿ ಆಹಾರವನ್ನು ವೇಸ್ಟ್ ಮಾಡುವುದಿಲ್ಲ. ಇರುವುದರಲ್ಲೇ ಅಡ್ಜಸ್ಟ್ ಮಾಡೋದು, ಅಥವಾ ಇರುವ ವಸ್ತುವನ್ನು ಬಳಸಿ ತಮ್ಮದೇ ರೆಸಿಪಿ ಮಾಡಿ ಆಹಾರ ಹಾಳಾಗದ ಹಾಗೇ ನೋಡಿಕೊಳ್ಳುತ್ತಾರೆ. ಉದಾಹರಣೆಗೆ ಚಪಾತಿ ಮಾಡಿದ ಹಿಟ್ಟು ಉಳಿದರೆ, ಪೂರಿ ಮಾಡುತ್ತಾರೆ. ಪೂರಿಗೆ ಮಾಡಿದ ಆಲೂ ಪಲ್ಯ ಉಳಿದರೆ, ಬೋಂಡಾ ಮಾಡುತ್ತಾರೆ. ಬೋಂಡಾ ಕಲಿಸಿದ್ದ ಕಡಲೆ ಹಿಟ್ಟು ಉಳಿದರೆ, ಅದರಿಂದ ಇನ್ನೇನನ್ನೋ ಮಾಡುತ್ತಾರೆ. ಆದರೆ ಫುಡ್ ಮಾತ್ರ ಹಾಳು ಮಾಡುವುದಿಲ್ಲ.
ನಾವು ಇದೆಲ್ಲ ಹೇಳ್ತಿರೋದು ಯಾಕೆ ಅಂದ್ರೆ, ಇದೇ ರೂಲ್ಸ್ ಕಿಟ್‌ಕ್ಯಾಟ್ ಕೂಡ ಫಾಲೋ ಮಾಡತ್ತೆ ಅಂದ್ರೆ ನೀವು ನಂಬಲೇಬೇಕು. ಅದು ಹೇಗೆ ಅಂದ್ರೆ, ಚೊಕೋಲೇಟನ್ನು ಫ್ಯಾಕ್ಟರಿಯಲ್ಲಿ ತಯಾರು ಮಾಡುವಾಗ, ಕೆಲವು ಚಾಕೋಲೇಟ್‌ಗಳು ಮುರಿದು ಹೋಗುತ್ತದೆ. ಇಂಥ ಚಾಕೋಲೇಟ್‌ಗಳನ್ನು ಪ್ಯಾಕ್ ಮಾಡಿ ಮಾರಲು ಆಗೋದಿಲ್ಲ. ಆದರೆ ಚಾಕೋಲೇಟ್ ಕಂಪನಿ ಇಂಥ ಚಾಕೋಲೇಟ್‌ಗಳನ್ನು ಹಾಳು ಮಾಡೋದಿಲ್ಲ. ಬದಲಾಗಿ ಉಪಯೋಗಿಸುತ್ತದೆ.
ರಿಜೆಕ್ಟ್ ಆಗಿರುವ ಚಾಕೋಲೇಟನ್ನು ಗ್ರೈಂಡ್ ಮಾಡಿ ಥಿಕ್ ಪೇಸ್ಟ್ ಮಾಡುತ್ತಾರೆ. ಕಿಟ್‌ಕ್ಯಾಟ್ ಚಾಕೋಲೇಟಿನ ಲೇಯರ್‌ಗಳ ಮಧ್ಯಭಾಗದಲ್ಲಿ ನಿಮಗೆ ಒಂದು ಪೇಸ್ಟ್ ಕಾಣಸಿಗುತ್ತದೆ. ಅದು ಇದೇ ಪೇಸ್ಟ್. ಈ ರೀತಿ ರಿಜೆಕ್ಟ್ ಆಗಹೊರಟ ಚಾಕೋಲೇಟ್‌ಗಳ ಪೇಸ್ಟ್‌ಗಳೇ ಕಿಟ್‌ಕ್ಯಾಟ್ ರೆಸಿಪಿಯಲ್ಲಿ ಬಳಸುವ ಸಿಕ್ರೇಟ್ ವಸ್ತು. ಇದರಿಂದಲೇ ಕಿಟ್‌ಕ್ಯಾಟ್ ಕಂಪನಿ ಕೋಟ್ಯಾಂತರ ರೂಪಾಯಿ ಲಾಸ್ ಆಗುವುದನ್ನು ತಡೆಯುತ್ತದೆ.