Web News: ಈ ಪ್ರಪಂಚದಲ್ಲಿ ಅದೆಷ್ಟು ದುಬಾರಿ ಫ್ಯಾಷನ್ ಬ್ರ್ಯಾಂಡ್‌ಗಳಿದೆ. ಬಾಲಿವುಡ್ ಸೆಲೆಬ್ರಿಟಿಗಳು ಬಳಸುವ ಬ್ಯಾಗ್‌ಗಳಂತೂ 3ರಿಂದ 4 ಲಕ್ಷ ಮೇಲ್ಪಟ್ಟ ಬ್ಯಾಗ್‌ಗಳೇ. ಎಷ್ಟೋ ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ಶ್ರೀಮಂತ ಉದ್ಯಮಿಗಳು ಕೋಟಿಗೂ ಮೀರಿದ ಬ್ರ್ಯಾಂಡೇಡ್ ಬ್ಯಾಗ್, ಬೆಲ್ಟ್, ಶೂಸ್, ಕ್ಲಚ್ ಬಳಸುತ್ತಾರೆ. ಆದರೆ ಈ ಬ್ರ್ಯಾಂಡೆಡ್ ಬ್ಯಾಗ್‌ಗಳ ಹಿಂದೆ ದೊಡ್ಡ ಕರಾಳ ಸತ್ಯವೇ ಅಡಗಿದೆ.
ಆ ಕರಾಳ ಸತ್ಯ ಏನೆಂದರೆ, ಅದೆಷ್ಟೋ ಪಾಪದ ಪ್ರಾಣಿಗಳನ್ನು ಇಂಥ ಬ್ರ್ಯಾಂಡೇಡ್ ಬ್ಯಾಗ್ ತಯಾರಿಸಲೆಂದೇ, ಒಂದು ರೂಮ್‌ನಲ್ಲಿ ಕೂಡಿ ಹಾಕಿ, ಒಂದೊಂದಾಗಿ ಅದನ್ನು ಕೊಂದು, ಅದರ ಚರ್ಮದಿಂದ ಬ್ಯಾಗ್, ಶೂಸ್, ಬೆಲ್ಟ್ ತಯಾರಿಸಲಾಗುತ್ತದೆ. ಲೆದರ್ ಬೆಲ್ಟ್, ಲೆದರ್ ಬ್ಯಾಗ್ ಎಂದು ಹೇಳುವುದು, ಚರ್ಮದಿಂದ ಮಾಡಿದ ವಸ್ತುಗಳಿದೆ. ಇನ್ನು ಕೆಲವು ಲೆದರ್ ಪ್ರಾಡಕ್ಟ್‌ಗಳನ್ನು ಹಣ್ಣಿನ ಸಿಪ್ಪೆ ಮತ್ತು ತೆಂಗಿನ ಕಾಯಿಯ ಚಿಪ್ಪಿನಿಂದ ತಯಾರಿಸಲಾಗುತ್ತದೆ.
ಹಸು, ಮೊಲ, ಜಿರಾಫೆ, ಆನೆ ಸೇರಿ ಹಲವು ಪ್ರಾಣಿಗಳನ್ನು ತಂದು, ಹಿಂಸಿಸಿ, ಕೊಂದು, ಅವುಗಳ ಚರ್ಮದಿಂದಲೇ ಈ ಫ್ಯಾಷನ್ ಪ್ರಾಡಕ್ಟ್‌ಗಳನ್ನು ತಯಾರಿಸಲಾಗುತ್ತದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಸೇರಿ ಹಲವು ದೇಶಗಳ 2 ಬಿಲಿಯನ್‌ಗೂ ಅಧಿಕ ಪ್ರಾಣಿಗಳನ್ನು ಫ್ಯಾಷನ್ ಬ್ರ್ಯಾಂಡ್‌ಗಳ ವಸ್ತುಗಳನ್ನು ತಯಾರಿಸಲು ಕೊಲ್ಲಲಾಗುತ್ತಿದೆ.
ಇನ್ನೂ ಶಾಕ್ ಆಗುವಂಥ ವಿಷಯ ಅಂದ್ರೆ, ಈ ರೀತಿ ಪ್ರಾಣಿ ಚರ್ಮ ಬಳಸಿ, ಯಾವ ಫ್ಯಾಕ್ಟರಿಯಲ್ಲಿ ಈ ಎಲ್ಲ ವಸ್ತುಗಳನ್ನು ತಯಾರಿಸುತ್ತಾರೋ. ಆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಎಷ್ಟೋ ಕಾರ್ಮಿಕರು, ರೋಗ ಬಂದು ಸಾಯುತ್ತಿದ್ದಾರೆ. ಏಕೆಂದರೆ, ಈ ರೀತಿ ತರುವ ಚರ್ಮವನ್ನು ಕೆಮಿಕಲ್‌ನಲ್ಲಿ ಹಾಕಿ ತೊಳೆಯಬೇಕಾಗುತ್ತದೆ. ಇಂಥ ಕೆಮಿಕಲ್ ಬಳಕೆಯಿಂದಲೇ, ಕಾರ್ಮಿಕರಿಗೆ ರೋಗ ಬರುತ್ತಿದೆ.
ಒಟ್ಟಾರೆಯಾಗಿ ಮನುಷ್ಯ ಶ್ರೀಮಂತನಾಗಲು, ತನ್ನಷ್ಟಕ್ಕೆ ತಾನು ಜೀವಿಸುವ ಪ್ರಾಣಿಗಳನ್ನು ಬಲಿ ಕೊಡುತ್ತಿದ್ದಾನೆ. ಅದರಲ್ಲೂ ಫ್ಯಾಷನ್, ಶೋಕಿಗಾಗಿ ಈ ರೀತಿಯ ಕರ್ಮ ಮಾಡುತ್ತಿರುವುದು ವಿಪರ್ಯಾಸದ ಸಂಗತಿ.