Sunday, October 5, 2025

Latest Posts

ಯಲ್ಲಾಲಿಂಗ ಸಾವು ಕೊಲೆಯಲ್ಲ, ಆತ್ಮಹತ್ಯೆ – 9 ಆರೋಪಿಗಳಿಗೆ ಕ್ಲೀನ್‌ಚಿಟ್!!!

- Advertisement -

ಕೊಪ್ಪಳ ಜಿಲ್ಲೆಯ ಹುಲಿಹೈದರ ಗ್ರಾಮದ ಯುವಕ ಯಲ್ಲಾಲಿಂಗನ ಸಾವಿಗೆ ಸಂಬಂಧಿಸಿದ 2013ರಲ್ಲಿ ದಾಖಲಾಗಿದ್ದ ಚರ್ಚಿತ ಕೊಲೆ ಪ್ರಕರಣಕ್ಕೆ ಕೊನೆಗೂ ನ್ಯಾಯಾಲಯ ತೀರ್ಪು ನೀಡಿದೆ. ಕೊಲೆಯಲ್ಲ, ಆತ್ಮಹತ್ಯೆ ಎಂದು ಪರಿಗಣಿಸಿರುವ ನ್ಯಾಯಾಲಯ, ಈ ಪ್ರಕರಣದಲ್ಲಿ ಆರೋಪಿತರಾದ ಸಚಿವ ಶಿವರಾಜ್ ತಂಗಡಗಿಯ ಆಪ್ತ ಹನುಮೇಶ ನಾಯಕ ಸೇರಿದಂತೆ ಒಂಬತ್ತು ಮಂದಿಗೆ ಖುಲಾಸೆ ನೀಡಿದೆ.

2015ರಲ್ಲಿ ಯಲ್ಲಾಲಿಂಗನ ಶವ ಕೊಪ್ಪಳದ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ತೀವ್ರ ಅನುಮಾನಗಳು ವ್ಯಕ್ತವಾಗಿದ್ದವು. ಯುವಕ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದ. ಈ ಕಾರಣದ ಮೇಲೆ ಕಿಡಿಕಾರಿದ್ದರು ಎನ್ನುವ ಆರೋಪದ ಹಿನ್ನೆಲೆಯಲ್ಲಿ ಈತನನ್ನು ಕೊಲೆಗೈದು ಶವವನ್ನು ರೈಲು ಹಳಿ ಮೇಲೆ ಬಿಸಾಕಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಹಾಗಾಗಿ ಈ ಪ್ರಕರಣದಲ್ಲಿ ಸಚಿವ ಶಿವರಾಜ್ ತಂಗಡಗಿ ಆಪ್ತ ಹನುಮೇಶ ನಾಯಕ ಸೇರಿ 9 ಜನರ ಮೇಲೆ ಕೊಲೆಯಲ್ಲಿ ಭಾಗಿಯಾದ ಆರೋಪವಿತ್ತು. ತಂಗಡಗಿ ಅವರು ಸಚಿವ ಸ್ಥಾನವನ್ನು ಕೂಡ ಕಳೆದುಕೊಂಡಿದ್ದರು.

ತೀವ್ರ ಜನಪ್ರತಿಭಟನೆ, ರಾಜಕೀಯ ಒತ್ತಡ ಮತ್ತು ತನಿಖಾ ಸಂಸ್ಥೆಗಳ ಅಧ್ಯಯನದ ನಡುವೆಯೂ, ಸಾಕ್ಷ್ಯಾಧಾರಗಳ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೊನೆಗೂ ನ್ಯಾಯಾಲಯವು ಈ ಪ್ರಕರಣವನ್ನು ಕೊಲೆಯಲ್ಲ, ಆತ್ಮಹತ್ಯೆ ಎಂದು ಪರಿಗಣಿಸಿ ತೀರ್ಪು ನೀಡಿದೆ. ವಿಚಾರಣೆಯ ಕೊನೆಯ ಹಂತದಲ್ಲಿ ನ್ಯಾಯಾಧೀಶರು ಪ್ರತಿಯೊಬ್ಬ ಆರೋಪಿಗೂ ಖುಲಾಸೆ ನೀಡಿದರು.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss