Belagavi News : ಏಳುಕೊಳ್ಳದ ಯಲ್ಲಮ್ಮನ ಸನ್ನಿಧಿಯಲ್ಲಿ ಚಿಲ್ಲರೆ ನಗ ನಗದು ಭಾರಿ ಸದ್ದು ಮಾಡುತ್ತಿದೆ. ಹೌದು ಯಲ್ಲಮ್ಮನ ಸನ್ನಿಧಿಯ ಹುಂಡಿ ಎಣಿಕೆ ಮಾಡುವ ಸಂದರ್ಭ 40 ದಿನಗಳಲ್ಲಿ 1.03 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
ನೋಟು, ನಾಣ್ಯಗಳನ್ನು ಎಣಿಸುವ ಗಡಿಬಿಡಿ, ಒಂದೇ ಒಂದು ರೂಪಾಯಿಯೂ ಲೆಕ್ಕದಿಂದ ತಪ್ಪಬಾರದು ಎಂಬ ತಲ್ಲೀನತೆ. ಇದು ನಾಡಿನ ಸುಪ್ರಸಿದ್ಧ ದೇಗುಲದಲ್ಲಿ ನಡೆದ ಹುಂಡಿ ಎಣಿಕೆಯ ಭರಾಟೆ. ಯಲ್ಲಮ್ಮನ ಗುಡ್ಡದಲ್ಲಿ ಶನಿವಾರ ಹುಂಡಿ ಎಣಿಕೆ ನಡೆದಿದ್ದು, 40 ದಿನಗಳ ಅವಧಿಯಲ್ಲಿ 1.03 ಕೋಟಿ ರೂಪಾಯಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.
ಸೆಪ್ಟೆಂಬರ್ 27 ರಂದು ಪ್ರಥಮ ಹಂತದ ಎಣಿಕೆ ನಡೆದಿತ್ತು. ಈಗ ಎರಡೂ ಹಂತದ ಎಣಿಕೆ ಮುಕ್ತಾಯಗೊಂಡಿದ್ದು, 1.03 ಕೋಟಿ ರೂಪಾಯಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ. ಈ ಪೈಕಿ 93,64,260 ರೂಪಾಯಿ ನಗದು, 7,50,600 ರೂ. ಮೌಲ್ಯದ ಚಿನ್ನಾಭರಣ ಮತ್ತು 1,87,860 ರೂಪಾಯಿ ಮೌಲ್ಯದ ಬೆಳ್ಳಿ ಆಭರಣ ಸಂಗ್ರಹವಾಗಿವೆ ಎಂಬ ಮಾಹಿತಿ ಇದೆ.
KK George : ಹಾಸನ : ಸೋಲಾರ್ ಪ್ಲಾಂಟ್ ಗೆ ಸ್ಥಳ ಪರಿಶೀಲನೆ ನಡೆಸಿ ಹೇಳಿಕೆ ನೀಡಿದ ಸಚಿವ ಕೆಜೆ ಜಾರ್ಜ್