ಕ್ರಿಮಿನಲ್‌ಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಎಚ್ಚರಿಕೆ ನೀಡಿದ್ದಾರೆ. “ಅಪರಾಧಿಗಳು ಈ ಭೂಮಿಗೆ ಹೊರೆಯಾಗಿದ್ದಾರೆ. ನಿಮ್ಮಿಗಾಗಿ ಯಮರಾಜ ಈಗಾಗಲೇ ಕಾಯುತ್ತಿದ್ದಾರೆ. ನಿಮ್ಮಿಂದ ಯಾರೇ ತಪ್ಪಿತಸ್ಥರಾದರೂ, ನೇರವಾಗಿ ನರಕದ ದಾರಿಯೇ ಎದುರುಗೊಳ್ಳುತ್ತದೆ,” ಎಂದು ಸಿಎಂ ಖಡಕ್ ಸಂದೇಶ ನೀಡಿದ್ದಾರೆ.
ಸಮಾಜದ ವ್ಯವಸ್ಥೆಯಲ್ಲಿ ಕೆಲವರು ನಿಜಕ್ಕೂ ಹೊರೆಯಾಗಿದ್ದಾರೆ. ಇಂತಹ ಅಂಶಗಳಿಂದ ಭೂಮಿಯನ್ನೂ, ಜನರನ್ನೂ ಮುಕ್ತಗೊಳಿಸುವ ಜವಾಬ್ದಾರಿ ನಮ್ಮದು. ನೀವು ನಮ್ಮ ಮಗಳ ಸುರಕ್ಷತೆಯೊಂದಿಗೆ ಆಟವಾಡಲು ಯತ್ನಿಸಿದರೆ—ಮುಂದಿನ ತಿರುವಿನಲ್ಲಿ ಯಮರಾಜ ನಿಮಗಾಗಿ ನಿಂತಿರುತ್ತಾನೆ ಎಂದು ಅವರು ಉಗ್ರ ಶಬ್ದಗಳಲ್ಲಿ ಎಚ್ಚರಿಸಿದ್ದಾರೆ.
ಜನರಿಗೆ ನ್ಯಾಯ ಬೇಕು, ಸಕಾಲಿಕ ನ್ಯಾಯ ಬೇಕು ಎಂದು ಹೇಳಿದ ಸಿಎಂ, ಅಪರಾಧಿಗಳ ದರ್ಪ ಮತ್ತು ಮಾಫಿಯಾ ಚಟುವಟಿಕೆಗಳನ್ನು ಶೂನ್ಯಗೊಳಿಸುವ ಸಂಕಲ್ಪವಿದೆ ಎಂದರು. ಅವರ ಭಾಷೆಯಲ್ಲೇ ಅವರಿಗೆ ಉತ್ತರ ಕೊಡುವುದು ನಮ್ಮ ನೀತಿ ಎಂದು ಯೋಗಿ ಸ್ಪಷ್ಟಪಡಿಸಿದರು. ಇಂದಿನ ಉತ್ತರ ಪ್ರದೇಶದ ಬಗ್ಗೆ ಮಾತನಾಡಿದ ಅವರು, ಯುಪಿ ಈಗ ಮಾಫಿಯಾ ಮುಕ್ತ ರಾಜ್ಯ. ‘ಒಂದು ಜಿಲ್ಲೆ—ಒಂದು ಮಾಫಿಯಾ’ ಕಾಲವು ಮುಗಿದಿದೆ. ಈಗ ಒಂದು ಜಿಲ್ಲೆ—ಒಂದು ಉತ್ಪನ್ನ, ಒಂದು ಜಿಲ್ಲೆ—ಒಂದು ಕಾಲೇಜು ಎಂಬ ಅಭಿವೃದ್ಧಿ ಮಾದರಿಗಳು ರಾಜ್ಯದ ಗುರುತು ಎಂದು ಹೇಳಿದರು.
ಎರಡು ಅವಧಿ ಮುಖ್ಯಮಂತ್ರಿಯಾಗಿ ಯಾವ ಕ್ರಮವನ್ನು ‘ಮಾಸ್ಟರ್‌ಸ್ಟ್ರೋಕ್’ ಎಂದು ಪರಿಗಣಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಅಂತಹುದಾಗಿ ಒಂದನ್ನೇ ಬೇರ್ಪಡಿಸುವುದು ಕಷ್ಟ ಎಂದರು. ಜೊತೆಗೆ, ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರಕ್ಕೆ ಅಡಿಪಾಯ ಹಾಕುವುದರಿಂದ ಹಿಡಿದು ನಿರ್ಮಾಣದ ಪೂರ್ಣತೆಗೆ, ಧರ್ಮ ಧ್ವಜವನ್ನು ದೇವಾಲಯದಲ್ಲಿ ಹಾರಿಸುವ ತನಕದ ಕ್ಷಣಗಳನ್ನು ನಾನು ನೋಡಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಯೋಗಿ ಆದಿತ್ಯನಾಥ ಕೃತಜ್ಞತೆ ಸಲ್ಲಿಸಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




