Yash : ಚಿನ್ನದ ಕಾಯಿನ್ ಮೇಲೆ ಕನ್ನಡದ ನಟನ ಪಟ..!

Film News:ಯಶ್ ಫೋಟೊ ಇದ್ದ ಈ ಚಿನ್ನದ ಕಾಯಿನ್ ಹಾಗೂ ಬಾರ್‌ಗಳ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇನ್ನು ಮಾಲೀಕ್ ಸ್ಟ್ರೀಮ್ಸ್ ಕಾರ್ಪೋರೇಷನ್ ಸಂಸ್ಥೆ ಈ ಗೋಲ್ಡನ್ ಬಾರ್‌ಗಳ ಮೇಲೆ ಯಶ್ ಸಹಿಯನ್ನು ಹಾಕಿಸಿದ್ದು, ಅವುಗಳನ್ನು ಮಾರಾಟ ಮಾಡಲು ಮುಂದಾಗಿದೆ.

ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಮಾಲೀಕ್ ಸ್ಟ್ರೀಮ್ಸ್ ಕಾರ್ಪೋರೇಷನ್ ಸಂಸ್ಥೆ ಹತ್ತು ಚಿನ್ನದ ಬಾರ್‌ಗಳಿಗೆ ಯಶ್ ಸಹಿ ಹಾಕಿದ್ದು, ಈ ಚಿನ್ನದ ಬಾರ್‌ಗಳನ್ನು ಮಾರಾಟ ಮಾಡುತ್ತಿದ್ದೇವೆ, ಈ ಚಿನ್ನದ ಬಾರ್‌ಗಳನ್ನು ಖರೀದಿಸುವ ವಿಶ್ವದ ಹತ್ತು ಜನರಲ್ಲಿ ನೀವೂ ಸಹ ಒಬ್ಬರಾಗಿ ಎಂದು ಟ್ವೀಟ್ ಮಾಡಿದೆ. ಇನ್ನು ಈ ಒಂದು ಚಿನ್ನದ ಬಾರ್ ಒಂದು ಕೆಜಿ ತೂಕವಿದ್ದು, ಒಟ್ಟು ಹತ್ತು ಕೆಜಿ ತೂಕವುಳ್ಳ ಹತ್ತು ಗೋಲ್ಡನ್ ಬಾರ್ ಮೇಲೆ ಯಶ್ ಚಿತ್ರ ಹಾಗೂ ಹೆಸರನ್ನು ಹಾಕಿ ತಯಾರಿಸಲಾಗಿದೆ. ಈ ರೀತಿ ಮಲೇಷ್ಯಾದಲ್ಲಿ ಹಾಗೂ ವಿದೇಶದಲ್ಲಿ ಇಷ್ಟು ದೊಡ್ಡ ಮಟ್ಟದ ಚಿನ್ನದ ಬಾರ್‌ಗಳಲ್ಲಿ ಕನ್ನಡ ನಟನ ಫೋಟೊ ಹಾಗೂ ಸಹಿಯನ್ನು ಮುದ್ರಿಸಿರುವುದು ಇದೇ ಮೊದಲಾಗಿದ್ದು, ಚಿನ್ನದಲ್ಲಿ ಅವನ ಹೆಸರು ಹಾಗೂ ಫೋಟೊವನ್ನು ಕೆತ್ತಿದ್ದಾರೆ ಎಂದರೆ ಅವನೇನೋ ದೊಡ್ಡ ಸಾಧನೆಯನ್ನೇ ಮಾಡಿರಬೇಕು ಎಂದು ಕೆಜಿಎಫ್ ಡೈಲಾಗ್ ಅನ್ನು ಬರೆದುಕೊಂಡು ಬಿಲ್ಡಪ್ ಕೊಡ್ತಿದ್ದಾರೆ ಯಶ್ ಅಭಿಮಾನಿಗಳು.

ವಾಲೆಟ್ಟಿ ಸಿನಿಮಾದ ಟ್ರೈಲರ್ ಬಿಡುಗಡೆ…!

Rashmika Mandanna : ಕಿರಿಕ್ ಬೆಡಗಿಗೆ ಶುರುವಾಯ್ತು ಕನ್ನಡ ಪ್ರೇಮ…?!

Sudeep: ನಾನು ತಪ್ಪು ಮಾಡಿದ್ದರೆ ಕಾನೂನಿನ ತೀರ್ಪಿಗೆ ಶತಸಿದ್ಧ…!

 

About The Author