ಹೇಗಿತ್ತು ಗೊತ್ತಾ ರಾಕಿ ಭಾಯ್ ರಾಖಿ ಹಬ್ಬ…

Banglore:

ROCKING STAR YASH RAKHI CELEBRATION

ಎಲ್ಲೆಡೆ ಇಂದು [ಅ.11] ರಾಖಿ ಸಂಭ್ರಮ ಮನೆ ಮಾಡಿದೆ. ಅಣ್ಣ ತಂಗಿಯ ಆತ್ಮೀಯತೆಯ ಈ ಹಬ್ಬಕ್ಕೆ ಅಕ್ಕರೆಯ ಸಂಬಂಧ  ಪವಿತ್ರ ಬಾಂಧವ್ಯದ ಮೆರುಗು ತಂದಿದೆ. ಸಿನಿ ತಾರೆಯರಿಗೂ ಇದು ಸಡಗರದ ಹಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ಯಶ್ ಕೂಡಾ ಎಷ್ಟೇ ಬ್ಯುಸಿ ಇದ್ರೂ ರಕ್ಷಾಬಂಧನದಂದು ತನ್ನ ತಂಗಿ ನಂದಿನಿಯ ಮುಂದೆ ಪ್ರತ್ಯಕ್ಷರಾಗುತ್ತಾರೆ. ಇಂದು ಯಶ್ ತನ್ನ ಸಹೋದರಿ ಕೈಯಿಂದ ರಾಖಿ ಕಟ್ಟಿಸಿಕೊಂಡು ಸಂತೋಷ ಹಂಚಿಕೊಂಡಿದ್ದಾರೆ.

ಕೆಲದಿನಗಳ ಹಿಂದಷ್ಟೇ ವಿದೇಶಿ ಪ್ರವಾಸದಲ್ಲಿದ್ದ ರಾಖಿ ಭಾಯ್ ಮನೆಗೆ ಮರಳಿದ್ದು ಹಬ್ಬದ ದಿನದಂದು ತಂಗಿ ಕೈಯಿಂದ ರಕ್ಷಾ ಬಂಧನ ಕಟ್ಟಿಸಿಕೊಂಡು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

“ಜೀವಮಾನದ ಪ್ರೀತಿ ಮತ್ತು ಬೆಂಬಲದೊಂದಿಗೆ ನಾವಿಬ್ಬರೂ ಬಂಧಿತರಾಗಿದ್ದೇವೆ. ಎಲ್ಲರಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳು” ಎಂದು ಯಶ್ ಎಲ್ಲರಿಗೂ ಶುಭಕೋರಿದ್ದಾರೆ.

ಇದೀಗ ಯಶ್ ನಂದಿನಿಯ ರಾಖಿ ಹಬ್ಬ ಆಚರಣೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ನೆಚ್ಚಿನ ನಟನಿಗೆ ಹಬ್ಬದ ಶುಭಾಶಯ ಕೋರಿದ್ದಾರೆ.

About The Author