Sunday, December 22, 2024

Latest Posts

Darshan case: ದರ್ಶನ್ ಆಪ್ತ ನಟ ಯಶಸ್ ಸೂರ್ಯಗೂ ಕಂಟಕ!

- Advertisement -

ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಹಾಗು ಅವರ ಸಹಚರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಹಾಸ್ಯ ನಟ ಚಿಕ್ಕಣ್ಣ ಅವರನ್ನೂ ಪೊಲೀಸರು ನೋಟೀಸ್ ನೀಡಿ ವಿಚಾರಣೆ ನಡೆಸಿದ್ದರು. ಜೂನ್ 17ರಂದು ಚಿಕ್ಕಣ್ಣ ಅವರು ಪೊಲೀಸರ ಮುಂದೆ ಹಾಜರಾಗಿ ವಿಚಾರಣಗೆ ಸ್ಪಂದಿಸಿದ್ದರು. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಇದೀಗ ಮತ್ತೊಬ್ಬ ನಟನಿಗೂ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಯಶಸ್ ಸೂರ್ಯ ದರ್ಶನ್ ಅವರ ಆಪ್ತ. ಗರಡಿ ಸಿನಿಮಾದಲ್ಲಿ ಯಶಸ್ ಸೂರ್ಯ ಹೀರೋ ಆಗಿ ನಟಿಸಿದ್ದರು. ಆ ಸಿನಿಮಾದಲ್ಲಿ ದರ್ಶನ್ ಕೂಡ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದರು. ರೇಣುಕಾಸ್ವಾಮಿ ಕೊಲೆಯ ಪ್ರಕರಣದ ಬಳಿಕ ಸ್ಟೋನಿ ಬ್ರೋಕ್ ಪಬ್ ನಲ್ಲಿ ದರ್ಶನ್ ಹಾಗು ಇತರರು ಸೇರಿ ಪಾರ್ಟಿ ಮಾಡಿದ್ದರು ಎನ್ನಲಾಗಿದೆ. ಈ ಕುರಿತು ತನಿಖೆ ಕೂಡ ನಡೆಸಿದ ಪೊಲೀಸರು, ಸ್ಥಳ ಮಹಜರು ಮಾಡಿದ್ದಾರೆ. ಅಂದು ನಡೆದ ಪ್ರಕರಣದ ದಿನ ದರ್ಶನ್ ಅವರ ಜೊತೆಗೆ ಹಾಸ್ಯ ನಟ ಚಿಕ್ಕಣ್ಣ ಅವರೂ ಸಹ ಪಾಲ್ಗೊಂಡು ಊಟ ಮಾಡಿದ್ದರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ, ಚಿಕ್ಕಣ್ಣ ಅವರನ್ನು ವಿಚಾರಿಸಿ ಕಳುಹಿಸಲಾಗಿದೆ.

ಇನ್ನು, ಈ ವಿಷಯಕ್ಕೆ ಸಂಬಂಧಿಸಿದಂತೆ ಅಂದು ದರ್ಶನ್ ಅವರ ಪಾರ್ಟಿಯಲ್ಲಿ ಇನ್ನೂ ಒಬ್ಬ ನಟರಿದ್ದರು ಎಂಬ ಹೇಳಿಕೆ ಆಧರಿಸಿರುವ ಪೊಲೀಸರು, ನಟ ಯಶಸ್ ಸೂರ್ಯ ಅವರನ್ನು ಕರೆಸಿ ವಿಚಾರಣೆಗೆ ಒಳಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಅದೇನೆ ಇರಲಿ, ಈ ಪ್ರಕರಣ ದಿನಕ್ಕೊಂದು ಬೆಳವಣಿಗೆ ಕಾಣುತ್ತಿದೆ. ಪ್ರಕರಣದ ಗಂಭೀರತೆ ಅರಿತಿರುವ ಪೊಲೀಸರು ಬಲು ಸೂಕ್ಷ್ಮವಾಗಿಯೇ ತನಿಖೆ ಕೈಗೊಂಡಿದ್ದಾರೆ. ಸದ್ಯ, ಅಂದು ಸ್ಟೋನಿ ಬ್ರೋಕ್ ಪಬ್ ನಲ್ಲಿ ಯಾರೆಲ್ಲ ದರ್ಶನ್ ಅವರ ಜೊತೆ ಊಟಕ್ಕೆ ಸೇರಿದ್ದರು ಎಂಬುದನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈಗ ಸದ್ಯ ನಟ ಯಶಸ್ ಸೂರ್ಯ ಅವರಿಗೆ ನೋಟಿಸ್ ನೀಡಿ, ಕರೆಸಿಕೊಂಡು ವಿಚಾರಣೆ ಮಾಡುವ ಸಾಧ್ಯತೆ ಇದೆ.

- Advertisement -

Latest Posts

Don't Miss