Sunday, September 8, 2024

Latest Posts

ಯಶವಂತಪುರದ ಯಜಮಾನ ಯಾರು..?

- Advertisement -

ಕರ್ನಾಟಕ ಟಿವಿ : ಎಸ್.ಟಿ ಸೋಮಶೇಖರ್ ಗೆದ್ದು ಸಚಿವರಾಗ್ತಾರಾ..? ಮೂರನೇ ಬಾರಿಯಾದ್ರೂ ಜವರಾಯಿಗೌಡರಿಗೆ ಜಯದ ಮಾಲೆ ಸಿಗುತ್ತಾ..? ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರಾ ಅಥವಾ ಠೇವಣಿ ಕಳೆದುಕೊಳ್ತಾರಾ..? ಡಿಕೆಶಿ-ಹೆಚ್ಡಿಕೆ ಗೇಮ್ ವರ್ಕೌಟ್ ಆಗುತ್ತಾ..? ಯಶವಂತಪುರದ ಗೌಡ ಯಾರು..? ಇದೆಲ್ಲದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ..

ಬೆಂಗಳೂರಲ್ಲಿ ಅತೀದೊಡ್ಡ ವಿಧಾನಸಭಾ ಕ್ಷೇತ್ರದಲ್ಲಿ ಯಶವಂತಪುರ ವಿಧಾನಕ್ಷೇತ್ರವೂ ಒಂದು.. ಕ್ಷೇತ್ರ ಪುನರ್ ವಿಂಗಡೆನೆಗೂ ಮೊದಲು ಉತ್ತರಹಳ್ಳಿ ಕ್ಷೇತ್ರದ ಬಹುಭಾಗ ಗ ಯಶವಂತಪುರ ಕ್ಷೇತ್ರವಾಗಿದೆ.. 4 ಲಕ್ಷದ 53 ಸಾವಿರ ಮತದಾರರಿರುವ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಅಭ್ಯರ್ಥಿಗಳು ಭಾರೀ ಬೆವರು ಹರಿಸಬೇಕಿದೆ. 2004 ಚುನಾವಣೆಯಲ್ಲಿ ಹಳೆ ಉತ್ತರಹಳ್ಳಿ ಕ್ಷೇತ್ರದಲ್ಲಿ ಆರ್.ಅಶೋಕ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ಟಿ ಸೋಮಶೇಖರ್ 84 ಸಾವಿರ ಮತಗಳಿಂದ ಸೋಲು ಕಂಡಿದ್ರು.. ನಂತರ ಕ್ಷೇತ್ರ ಪುನರ್ ವಿಂಗಡನೆಯಾದ ನಂತರ 2008ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದು ಸೋಮಶೇಖರ್ ಎರಡನೇ ಬಾರಿ ಸೋಲು ಕಂಡಿದ್ರು.. ನಂತರ ಯಡಿಯೂರಪ್ಪ ಕೆಜೆಪಿ ಕಟ್ಟಿದ ಪರಿಣಾಮ ಶೋಭಾ ಕರಂದ್ಲಾಜೆ ರಾಜಾಜಿನಗರಕ್ಕೆ ಕೆಜೆಪಿ ಅಭ್ಯರ್ಥಿಯಾಗಿ ಶಿಫ್ಟ್ ಆದ್ರು.. 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ವಿರುದ್ಧ 29 ಸಾವಿರ ಮತಗಳ ಅಂತರದಲ್ಲಿ ಸೋಮಶೇಖರ್ ಮೊದಲ ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ್ರು.. ಸಿದ್ದರಾಮಯ್ಯ ಸರ್ಕಾರದಲ್ಲಿ ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರವನ್ನ ಅಭಿವೃದ್ಧಿ ಮಾಡಿದ್ರು. ನಂತರ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋಮಶೇಖರ್ ಗೆ ಜೆಡಿಎಸ್ ನಿಂದ ಜವರಾಯಿಗೌಡರೇ ಎದುರಾಳಿ.. ಆದ್ರೆ, ಬಿಜೆಪಿಯಿಂದ ಜಗ್ಗೇಶ್ ಸ್ಪರ್ಧೆ ಮಾಡಿ 59 ಸಾವಿರ ಮತಗಳನ್ನ ಪಡೆದು ಮೂರನೆ ಸ್ಥಾನಕ್ಕೆ ಕುಸಿದ್ರು.. ಸೋಮಶೇಖರ್ 15 ಸಾವಿರ ಮತಗಳ ಅಂತರದಲ್ಲಿ ಜೆಡಿಎಸ್ ನ ಜವರಾಯಿಗೌಡರ ವಿರುದ್ಧ ಗೆಲುವು ಸಾಧಿಸಿ ಎರಡನೇ ಬಾರಿ ವಿಧಾನಸೌಧ ಮೆಟ್ಟಿಲು ಹತ್ತಿದ್ರು.. ದೋಸ್ತಿ ಸರ್ಕಾರದಲ್ಲಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯಗೆ ಕುಚಿಕುಗಳ ರೀತಿ ಇದ್ದ ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಕ್ ನೀಡಿದ್ರು.. ಇದೀಗ ಸೋಮಶೇಖರ್ ರಾಜೀನಾಮೆಯಿಂದ ನಡೀತಿರುವ ಉಪಚುನಾವಣೆಯ ಕಣ ರಂಗೇರಿದೆ.. ಯಶವಂತಪುರದಲ್ಲಿ ಎರಡು ಬಾರಿ ಗೆಲುವು ಸಾಧಿಸಿದ ಸೋಮಶೇಖರ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಎರಡು ಬಾರಿ ಸೋಲು ಕಂಡಿರುವ ಜವರಾಯಿಗೌಡರು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.. ಇನ್ನು ಕಾಂಗ್ರೆಸ್ ನಿಂದ ನಾಗರಾಜು ಕ್ಯಾಂಡಿಡೇಟ್.. ಈ ಬಾರಿ ಯಶವಂತಪುರದಲ್ಲಿ ಜವರಾಯಿಗೌಡ ವರ್ಸಸ್ ಎಸ್.ಟಿ ಸೋಮಶೇಖರ್ ನಡುವೆ ಫೈಟ್..

ಸೋಮಶೇಖರ್ ಪ್ಲಸ್ ಪಾಯಿಂಟ್ಸ್ ಏನು..?

ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕರ‍್ಯಗಳು
ಕಳೆದ ೨೦ ವರ್ಷಗಳಿಂದ ಕ್ಷೇತ್ರದಲ್ಲಿ ಹಿಡಿತ
ಗೆದ್ದರೆ ಸಚಿವರಾಗ್ತಾರೆ ಅಂತ ಜನ ಮತ ಹಾಕಬಹುದು
ಬಿಜೆಪಿ ಅಧಿಕಾರದಲ್ಲಿರುವುದು ಚುನಾವಣೆ ಮೇಲೆ ಪ್ರಭಾವ
ಕಾಂಗ್ರೆಸ್+ಬಿಜೆಪಿ ಮತ್ಳು ಸೇರಿದ್ರೆ ಗೆಲುವಿನ ಹಾದಿ ಸುಗಮ

ಸೋಮಶೇಖರ್ ಮೈನಸ್ ಪಾಯಿಂಟ್ಸ್ ಏನು..?

ಒಕ್ಕಲಿಗ ಮುಖ್ಯಮಂತ್ರಿ ಹೆಚ್ಡಿಕೆ ಸರ್ಕಾರ ಬೀಳಿಸಿದ್ದು

ಮತದಾರರಿಗೆ ಆಪರೇಷನ್ ಕಮಲಕ್ಕೆ ಒಳಗಾದ ಸಿಟ್ಟು

ಡಿಕೆಶಿ-ಹೆಚ್ಡಿಕೆ ಜವರಾಯಿಗೌಡರ ಗೆಲುವಿಗೆ ಕಾರ್ಯತಂತ್ರ

ಮೂಲ ಬಿಜೆಪಿ ಕಾರ್ಯಕರ್ತರು ಬೆಂಬಲಿಸುವುದು ಡೌಟು..?

ಜವರಾಯಿಗೌಡರ ಪ್ಲಸ್ ಪಾಯಿಂಟ್ ಏನು..?

ಎರಡು ಬಾರಿ ಸೋತಿರುವ ಅನುಕಂಪ

ಜೆಡಿಎಸ್ ಜೊತೆ ಕಾಂಗ್ರೆಸ್ ಒಳಮೈತ್ರಿ ಆಗಿರುವುದು

ಕ್ಷೇತ್ರ ಗೆಲ್ಲಲು ಕುಮಾರಸ್ವಾಮಿ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದು

ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಜೆಡಿಎಸ್ ಗೆ ಬೆಂಬಲ

ಒಕ್ಕಲಿಗ ಮತಗಳು ಕ್ರೋಢೀಕರಣಗೊಂಡು ಜೆಡಿಎಸ್ ಗೆ ಲಾಭವಾಗಬಹುದು

ಜವರಾಯಿಗೌಡ ಮೈನಸ್ ಪಾಯಿಂಟ್ ಏನು..?

ಕ್ಷೇತ್ರದ ನಗರ ಪ್ರದೇಶದಲ್ಲಿ ಜೆಡಿಎಸ್ ಸಂಘಟನೆ ಕೊರತೆ

ಬಿಜೆಪಿ ಅಭ್ಯರ್ಥಿಗಿಂತ ಹಣಬಲದಲ್ಲಿ ವೀಕ್

ಕಾಂಗ್ರೆಸ್ ಕಾರ್ಯಕರ್ತರು ಸಂಪೂರ್ಣ ಬೆಂಬಲಿಸುವುದು ಡೌಟ್

ಬಿಜೆಪಿ ಅಧಿಕಾರದಲ್ಲಿರುವುದು ಜೆಡಿಎಸ್ ಗೆ ಹಿನ್ನಡೆಯಾಗಬಹುದು

ಕಾಂಗ್ರೆಸ್ ಅಭ್ಯರ್ಥಿಯ ಬಲಾಬಲ ಏನು..?

ಪಕ್ಷದ ಅಭ್ಯರ್ಥಿ ನಾಗರಾಜು ಆಟಕ್ಕುಂಟು ಲೆಕ್ಕಕ್ಕಿಲ್ಲ

ಕಾಂಗ್ರೆಸ್ ನಾಯಕರು ಜೆಡಿಎಸ್ ಬೆಂಬಲಿಸುತ್ತಿರುವುದು ಬಹಿರಂಗ

ಕಾಂಗ್ರೆಸ್ ನಾಯಕರು ಪ್ರಾಮಾಣಿಕ ಪ್ರಚಾರ ಮಾಡೋದು ಡೌಟು

ಜೆಡಿಎಸ್ ಗೆಲುವಿಗೆ ಕಾಂಗ್ರೆಸ್ ನಾಯಕರ ಕಾರ್ಯತಂತ್ರ

ಕಾಂಗ್ರೆಸ್ ಗೆಲುವಿಗಿಂತ ಜೆಡಿಎಸ್ ಗೆಲುವು ಕೈ ನಾಯಕರಿಗೆ ಪ್ರತಿಷ್ಠೆ

ಯಶವಂತಪುರದಲ್ಲಿ ಮೇಲ್ನೋಟಕ್ಕೆ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ಸ್ವಲ್ಪ ಸ್ಟ್ರಾಂಗ್ ಅಂತ ಕಾಣಿಸ್ತಿದೆ.. ಕಾಂಗ್ರೆಸ್, ಜೆಡಿಎಸ್ ಮತಗಳು ಹೊಂದಾಗಿ, ಡಿಕೆಶಿ, ಹೆಚ್ಡಿಕೆ ಪ್ಲಾನ್ ವರ್ಕೌಟ್ ಆದ್ರೆ ಜವರಾಯಿಗೌಡರು ಜಯದ ಮಾಲೆ ಹಾಕಿಕೊಳ್ಳಬಹುದು.. ಸೋಮಶೇಖರ್ ತನ್ನೆಲ್ಲಾ ಪಟ್ಟುಗಳನ್ನ ಹಾಕಿದ್ರೆ ಗೆದ್ದು ಸಚಿವರಾಗಬಹುದು.. ಸ್ವಲ್ಪ ಯಾಮಾರಿದ್ರೆ ಅನರ್ಹ ಶಾಸಕನಾಗಿ ಉಳಿಯಬೇಕಾಗಬಹುದು..

ಯಸ್ ವೀಕ್ಷಕರೇ ನಿಮ್ಮ ಪ್ರಕಾರ ಯಶವಂತಪುರ ಕ್ಷೇತ್ರದಲ್ಲಿ ಯಾವ ಗೌಡರ ದರ್ಬಾರ್ ನಡೆಯುತ್ತೆ..? ಬಿಜೆಪಿ ಸೋಮಶೇಖರ್ ಅಥವಾ ಜೆಡಿಎಸ್ ನ ಜವರಾಯಿಗೌಡ..?  ನಿಮ್ಮಅಭಿಪ್ರಾಯ ಕಾಮೆಂಟ್ ಮಾಡಿ.

- Advertisement -

Latest Posts

Don't Miss