Political News :ಸಿಎಂ ಸಿದ್ದರಾಮಯ್ಯ ಮತ್ತು ಯತ್ನಾಳ್ ಅವರ ಮಾತಿನ ಜಟಾಪಟಿ ಸದನದಲ್ಲಿ ನಿರಂತರವಾಗುತ್ತಿದೆ. ಯತ್ನಾಳ್ ಮಾತಿಗೆ ಸಿದ್ದು ನಿರಂತರ ಟಾಂಗ್ ಕೊಡುತ್ತಲೇ ಇದ್ದಾರೆ.
ಯತ್ನಾಳ್ ಗೃಹಜ್ಯೋತಿ ಯೋಜನೆ ಬಗ್ಗೆ ಆರೋಪ ಮಾಡುತ್ತಿದ್ದಂತೆ ನೀವು ಪದೇ ಪದೇ ಮಾತನಾಡಿದರೆ ಸಂಸದೀಯ ಪಟು ಆಗುವುದಿಲ್ಲ ಎಂದಾಗ ಯತ್ನಾಳ್ ಮತ್ತೆ ಆರೋಪ ಮಾಡಿದ್ದಾರೆ. ಇದಕ್ಕೆ ಯತ್ನಾಳ್, ನೀವು ಪದೇ ಪದೇ ಹೇಳುತ್ತಿದ್ದರೆ ನಾನೇ ವಿಪಕ್ಷ ನಾಯಕ ಎಂದು ತಿರುಗೇಟು ನೀಡಿದರು. ಇದಕ್ಕೆ ಸಿಎಂ, ನನಗಿರುವ ಮಾಹಿತಿ ಪ್ರಕಾರ ಯತ್ನಾಳ್ ಆಗುವುದಿಲ್ಲ. ಆರಗ ಆಕಾಂಕ್ಷಿ ಅಲ್ಲ. ಅಶ್ವಥ್ ನಾರಾಯಣ, ಬೊಮ್ಮಾಯಿ ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಿದರು.
ಸಿಎಂ ಹೇಳಿಕೆಗೆ ಮತ್ತೆ ಯತ್ನಾಳ್, ನೀವು ಎಷ್ಟೇ ಬೆಂಕಿ ಹಚ್ಚಿದರೂ ಹಚ್ಚಿಕೊಳ್ಳಲ್ಲ ಅದು. ನೀವು ನನ್ನನ್ನು ಉದ್ದೇಶಿಸಿ ಪದೇ ಪದೇ ವಿಪಕ್ಷ ನಾಯಕ ಆಗುವುದಿಲ್ಲ ಎಂದರೆ ನೀವು ಯಾರ ಜೊತೆಗೋ ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿದ್ದೀರಿ ಅಂತಾಯ್ತು ಎಂದು ಹೇಳಿ ಕಾಲೆಳೆದರು ಯತ್ನಾಳ್.