ಯತೀಂದ್ರ ಬಾಯಲ್ಲಿ ಮತ್ತೆ ‘ಸರ್ಪ’ – RSS ವಿರುದ್ಧ ಸಿಡಿದ ಸಚಿವ!

ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ RSS ಕುರಿತಾದ ಚರ್ಚೆ ಜೋರಾಗಿದೆ. RSS ಸಂಘಟನೆಯನ್ನು ‘ಸಾವಿರ ಹೆಡೆಗಳ ಸರ್ಪ’ ಎಂದು ಈ ಹಿಂದೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ತಾವೀಗಲೂ ಬದ್ಧವಾಗಿದ್ದೇನೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಅವರು ನೀಡಿರುವ ಹೇಳಿಕೆ ಈಗ ರಾಜ್ಯದಲ್ಲಿ ಭಾರೀ ರಾಜಕೀಯ ಸದ್ದು ಮಾಡುತ್ತಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಯತೀಂದ್ರ, ಆರ್‌ಎಸ್‌ಎಸ್‌ ಅನ್ನು ಆ ರೀತಿ ಕರೆಯಲು ಕಾರಣವೇನು ಎಂಬುದನ್ನು ಸಮರ್ಥಿಸಿಕೊಂಡಿದ್ದಾರೆ. ಅವ್ರು ಬಹಿರಂಗಪಡಿಸಿದಂತೆ ‘ಆರ್‌ಎಸ್‌ಎಸ್ ನೂರಾರು ಅಂಗಸಂಸ್ಥೆಗಳನ್ನು ಮಾಡಿಕೊಂಡಿದೆ, ಆದರೆ ಹೇಳಲು ಮಾತ್ರ ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ. ಆದರೆ ತೆರೆಮರೆಯಲ್ಲಿ ಆರ್‌ಎಸ್‌ಎಸ್ ಪರವಾಗಿ ಕೆಲಸ ಮಾಡುತ್ತಾ, ಸಮಾಜದಲ್ಲಿ ಸತತವಾಗಿ ಕೋಮುವಾದದ ವಿಷ ಬಿತ್ತುತ್ತಿದ್ದಾರೆ ಎಂದು ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಯಾವುದೇ ವಿಷಯ ಬಂದರೂ ಅದನ್ನು ಧರ್ಮ ಮತ್ತು ಜಾತಿಯ ಕಡೆಗೆ ತಿರುಗಿಸುವುದು ಅವರ ಚಾಳಿ, ನಾವು ಕಾಂಗ್ರೆಸ್‌ನ ಐಡಿಯಾಲಜಿಗೆ ಕಮಿಟ್ ಆಗಿರುವವರು. ನಮ್ಮದು ಸೆಕ್ಯುಲರ್ ಐಡಿಯಾಲಾಜಿ, ಕೋಮುವಾದದ ವಿರುದ್ಧ ಹೋರಾಡುವ ಸಿದ್ಧಾಂತ ನಮ್ಮದು. ಆ ಐಡಿಯಾಲಾಜಿಯನ್ನು ಡಿಫೆಂಡ್ ಮಾಡುವಾಗ ನಾವು ಸ್ಟ್ರಾಂಗ್ ಆಗಿ ಮಾತನಾಡಬೇಕಾಗುತ್ತದೆ ಎಂದು ಯತೀಂದ್ರ ತಿಳಿಸಿದ್ದಾರೆ. ಕೇವಲ ತಾವೊಬ್ಬರೇ ಅಲ್ಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಇದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ತಾವು ಇತ್ತೀಚೆಗಷ್ಟೇ ಈ ರೀತಿ ಮಾತನಾಡುತ್ತಿಲ್ಲ, ರಾಜಕಾರಣಕ್ಕೆ ಬಂದಾಗಿನಿಂದಲೂ ಒಂದೇ ವಿಚಾರ ಮಾತನಾಡುತ್ತಿದ್ದೇನೆ ಎಂದಿರುವ ಯತೀಂದ್ರ, ಈಗ ಮಾಧ್ಯಮಗಳಲ್ಲಿ ಇದು ದೊಡ್ಡದಾಗಿ ಚರ್ಚೆಯಾಗಲು ಕಾರಣವನ್ನೂ ವಿವರಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ಸಾರ್ವಜನಿಕ ಸ್ಥಳವನ್ನು ಶುದ್ಧೀಕರಣ ಮಾಡಿದ್ದಕ್ಕೆ ತಾವು ಪ್ರತಿಕ್ರಿಯೆ ನೀಡಬೇಕಾಯಿತು. ಸಾರ್ವಜನಿಕ ಸ್ಥಳಗಳನ್ನು ಅನುಮತಿ ಇಲ್ಲದೆ ಯಾರೇ ಬಳಸಿದರೂ ಅದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

ಆರ್‌ಎಸ್‌ಎಸ್ ಕುರಿತು ಸಚಿವ ಡಾ. ಯತೀಂದ್ರ ನೀಡಿರುವ ಈ ಬಂಡಾಯದಂತಹ ಹೇಳಿಕೆ ಹಾಗೂ ಸಮರ್ಥನೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ರಾಜಕೀಯ ಜಂಜಾಟಕ್ಕೆ ಕಾರಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ರಾಜಕೀಯ ಮಾತಿನ ಚಕಮಕಿ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ..

About The Author