Thursday, November 21, 2024

Latest Posts

ಮತ್ತೆ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಯತ್ನಾಳ್, ಜಮೀರ್ ವಿರುದ್ಧ ವಾಗ್ದಾಳಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಜನ ಜಾಗೃತಿ ತಂಡದಲ್ಲಿ ಪ್ರತಾಪ್ ಸಿಂಹ ಕೈ ಬಿಟ್ಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾತನಾಡುತ್ತ, ಮತ್ತೊಮ್ಮೆ ಯತ್ನಾಳ್ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಒಬ್ಬೊರನ್ನಾ ಕೈ ಬಿಡ್ತಾರೆ ಅಪ್ಪ-ಮಕ್ಕಳು ಇದೇ ದಂಧೆ ಮಾಡುತ್ತಾರೆ. ಈ ತಿಂಗಳ 25 ರಿಂದ ಡಿಸೆಂಬರ್25 ರ ತನಕ ಜನ ಜಾಗೃತಿ ಮಾಡುತ್ತಿವಿ. ನಮ್ಮದು ಕ್ಲಿಯರ್ ಇದೆ. ನಮ್ಮನ್ನಾ ನೋಡಿ ಅವರದ್ದು ಮೂರು ತಂಡ ಮಾಡಿದ್ದಾರೆ. ಅದಕ್ಕೆ ಡೆಟ್ ಇಲ್ಲ ಏನು ಇಲ್ಲ ಅವ್ವ-ಇಲ್ಲ ಅಪ್ಪ ಇಲ್ಲ. ಯತ್ನಾಳ ಮಾಡಿದ್ದಾರೆ ಅಂತ ಅವರದ್ದು ಒಂದು ಟೀಮ್‌ ಮಾಡಿದ್ದಾರೆ. ವಕ್ಪ್ ಬೋರ್ಡ್ ಕಾಳಜಿ ಇಲ್ಲ, ಮುಡಾ, ವಾಲ್ಮೀಕಿ ಕಾಳಜಿ‌ ಇಲ್ಲ. ಅವರ ಕಾಳಜಿ ಸಿಎಂ ಹೇಗೆ ಆಗಬೇಕು, ಅಪ್ಪನ ಹಾಗೇ ಹೇಗೆ ಲೂಟಿ ಮಾಡಬೇಕು ಅಂತ ಅಷ್ಟೇ ಎಂದು ಯತ್ನಾಳ್ ಹೇಳಿದ್ದಾರೆ.

ರೇಣುಕಾಚಾರ್ಯ ಹೆಸರು ತೆಗೆದುಕೊಂಡಿದ್ದಕ್ಕೆ ಯತ್ನಾಳ ಗರಂ ಆಗಿದ್ದು, ಅಂತವನ ಹೆಸರು ಯಾಕೆ ತೆಗೆದುಕೊಳ್ಳತ್ತಿರಿ..? ಒಳ್ಳೆಯ ರಾಜಕಾರಣಿಗಳ ಸಂದರ್ಶನ ಮಾಡಿ. ಹಾದಿ,ಬಿದಿ ಹಂದಿ,ಪಂದಿಗೆಲ್ಲಾ ಯಾಕೆ ಮಾತನಾಡುತ್ತಿರಿ.. ಇಂತಹಕ್ಕೆಲ್ಲಾ ನಾನು ಪ್ರತಿಕ್ರಿಯೆ ನೀಡೋದಿಲ್ಲಾ. ಥರ್ಡ್ ಗ್ರೇಟ್ ರಾಜಕಾರಣಿಗಳ ಬಗ್ಗೆ ಕೇಳಬೇಡಿ ಎಂದು ಸಿಟ್ಟಾದರು.

ಕುದುರೆ ವ್ಯಾಪಾರದ ಬಗ್ಗೆ ಸಿಎಂ ಆರೋಪ ವಿಚಾರದ ಬಗ್ಗೆ ಮಾತನಾಡಿದ ಯತ್ನಾಳ್, ಕುದುರೆ ವ್ಯಾಪಾರದ ಬಗ್ಗೆ ವಿಜಯೇಂದ್ರ ಮತ್ತು ಡಿಕೆ ಶಿವಕುಮಾರ್ ಮಾತ್ರ ಗೊತ್ತು. ಯಾರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಅಂತ ಸಿದ್ದರಾಮಯ್ಯ ಹೇಳಲಿ. ಜವಾಬ್ದಾರಿ ಹುದ್ದೆಯಲ್ಲಿ ಇದ್ದವರು ಬೇಕಾಬಿಟ್ಟಿಯಾಗಿ ಮಾತನಾಡಬಾರದು. ಏನು ಸಾಕ್ಷಿಯಿದೆ..? ಬಿಜೆಪಿಯಿಂದ ಯಾರು‌ 50 ಕೋಟಿ ಕೋಡ್ತಾರೆ. ಹಾಗಿದ್ರೆ ನಿಮ್ಮ ಗುಪ್ತಚರ ಇಲಾಖೆಯ ಅಧಿಕಾರಗಳು ಏನು ಮಾಡುತ್ತಿದ್ದಾರೆ. ಅವರೆ ಇದನ್ನು ಮಾಡುತ್ತಿದ್ದಾರೆ ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ. ದೇವ್ರಾಣೆ ಮಾಡಿ ಹೇಳಿತ್ತಿವಿ ಆಪರೇಷನ್ ನಮಗೆ ಅವಶ್ಯಕತೆ ಇಲ್ಲ. ವಿರೋಧ ಪಕ್ಷದಲ್ಲೆ ಕೂರುತ್ತೆವೆ. ಐವತ್ತು ಆರವತ್ತು ಜನ ತಂದು ನಾವು ಸರ್ಕಾರ ಮಾಡಿದ್ರೆ ನಾವು ಅವರಪ್ಪನಗಿಂತ ಭ್ರಷ್ಟರಾಗುತ್ತೆವೆ. ನಾವು ಬೇಕಿದ್ದರೆ ಚುನಾವಣೆಗೆ ಹೋಗತ್ತಿವಿ. ಒಂದು ವೇಳೆ ಬಿಜೆಪಿಯಲ್ಲಿ ಆಪರೇಷನ್ ಮಾಡುತ್ತಿದ್ದರೂ ಅದಕ್ಕೆ ಬೆಂಬಲ ನೀಡೋದಿಲ್ಲಾ ಇದು ಕ್ಲಿಯರ್. ಜನರ ಮತ್ತು ವಾಲ್ಮೀಕಿ ಹಣ ಲೂಟಿ ಮಾಡಿರುವ ಅಯ್ಯೋಗರ ಜೊತೆಗೆ ನಾವು ಸರ್ಕಾರ ಮಾಡೋದಿಲ್ಲಾ ಎಂದು ಯತ್ನಾಳ್ ಹೇಳಿದ್ದಾರೆ.

ಜಮೀರ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ವೈಯಕ್ತಿಕ ಟೀಕೆ ಮಾಡಬಾರದು ಯಾರ ಬಣ್ಣ ಕೆಂಪೋ‌ ಯಾರ ಬಣ್ಣ ಕಪ್ಪೂ. ರಾಜಕೀಯವಾಗಿ ಎದುರಿಸಿ ಧಮ್ ಇದ್ದ್ರೆ ಹೋಗಿ ಜನರ ಮುಂದೆ ಹೇಳು. 2 ಲಕ್ಷ ಎಕರೆ ಲೂಟಿ ಮಾಡುತ್ತಿರುವೆ ಅಂತ ಹೇಳು.. ವಕ್ಪ್ ವಿಚಾರದಲ್ಲಿ ಇಡೀ ರಾಜ್ಯದಲ್ಲಿ ಬೆಂಕಿ ಹಚ್ಚಿದ್ದಾನೆ. ಕರಿ, ಬಿಳಿ ಮಾತನಾಡೋದ ಸರಿಯಲ್ಲಾ, ವರ್ಣ ಜಾತಿ ನಿಂದನೆ ಮಾಡಬಾರದು ಎಂದು ಯತ್ನಾಳ್ ಹೇಳಿದ್ದಾರೆ.

ಪಂಚಮಸಾಲಿ ಮತ್ತೆ ಸಭೆ ವಿಚಾರದ ಬಗ್ಗೆ ಮಾತನಾಡಿರುವ ಯತ್ನಾಳ್, ಸಿದ್ದರಾಮಯ್ಯ ಕರೆದ ಸಭೆಯಲ್ಲಿ ಒಬ್ಬ ಕಾಂಗ್ರೆಸ್ ಶಾಸಕ ತುಟ್ಟಿಕ್ ಪಿಟ್ಟಿಕ್ ಅಂದಿಲ್ಲ. ನಾವು ಪ್ರಾಣ ತ್ಯಾಗ ಮಾಡತ್ತಿವಿ ಅಂತ ಹೇಳಿದ್ದರು. ಇದನ್ನು ಯಾವುದು ಮಾಡಿಲ್ಲ ಸಿದ್ದರಾಮಯ್ಯ ಕೊಟ್ಟ ಬಿಸ್ಕೇಟ ತಿಂದು ಸುಮ್ಮನೆ ಆಗಿದ್ದಾರೆ. ಹೀಗಾ ಇಂದು ಮತ್ತೊಂದು ಸಭೆ ನಡೆಸುತ್ತಿದ್ದೇವೆ ಎಂದಿದ್ದಾರೆ.

- Advertisement -

Latest Posts

Don't Miss