Tuesday, October 14, 2025

Latest Posts

ಬಾನು ಮುಷ್ತಾಕ್ ಗೆ ಯತ್ನಾಳ್ ಸವಾಲ್!

- Advertisement -

ದಸರಾ ಮಹೋತ್ಸವ ಉದ್ಘಾಟನೆಯ ಕುರಿತು ಹೊಸ ವಿವಾದವೊಂದು ಮೈಸೂರು ರಾಜಕೀಯ ವಲಯದಲ್ಲಿ ಭುಗಿಲೆದ್ದಿದೆ. ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೂರ್ತಿ ಪೂಜೆ ಮಾಡುವವರು ಇಸ್ಲಾಂ ಪ್ರಕಾರ ಕಾಫೀರರು. ಇಸ್ಲಾಂ ಮೂರ್ತಿ ಪೂಜೆಯನ್ನು ನಿಷೇಧಿಸುತ್ತೆ. ಆದರೆ ಬಾನು ಮುಷ್ತಾಕ್ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಿದ್ದಾರೆಯಂತೆ. ಈ ಬಗ್ಗೆ ಮೌಲ್ವಿಗಳು ತಮ್ಮ ಅಭಿಪ್ರಾಯ ಹೇಳಬೇಕು ಎಂದು ಆಗ್ರಹಿಸಿದರು.

ಜೊತೆ ಬಾನು ಮುಷ್ತಾಕ್ ಗೆ ಯತ್ನಾಳ್ ಅವರು ನಾಲ್ಕು ಸವಾಲುಗಳನ್ನು ಕೂಡ ಹಾಕಿದ್ದಾರೆ. ಬಾನು ಮುಷ್ತಾಕ್ ಅವರು ತಾವು ಎಕ್ಸ್‌ ಮುಸ್ಲಿಂ ಎಂದು ಘೋಷಿಸಬೇಕು. ಇಸ್ಲಾಂ ಧರ್ಮದ ಬಗ್ಗೆ ನಂಬಿಕೆಯಿಲ್ಲವೆಂದು ಹೇಳಿ ದಸರಾ ಉದ್ಘಾಟನೆ ಮಾಡಬೇಕು. ಇಲ್ಲದಿದ್ದರೆ ದಸರಾ ಉದ್ಘಾಟನೆಯಿಂದ ಹಿಂದೆ ಸರಿದು ಕೇವಲ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರ ಉದ್ಘಾಟಿಸಬೇಕು. ಇಡೀ ವಿಶ್ವದಾದ್ಯಂತ ಎಕ್ಸ್ ಮುಸ್ಲಿಂ ಸಮುದಾಯ ರೂಪುಗೊಂಡಿದೆ. ಇಸ್ಲಾಂ ಧರ್ಮವನ್ನು ಒಪ್ಪದವರು ಇದರಲ್ಲಿದ್ದಾರೆ. ಬಾನು ಮಷ್ತಾಕ್ ಕೂಡ ಈ ಕುರಿತು ಸ್ಪಷ್ಟನೆ ನೀಡಬೇಕು ಅಂತ ಯತ್ನಾಳ್ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯನವರ ವಿರುದ್ಧವೂ ಯತ್ನಾಳ್ ಕಿಡಿಕಾರಿದ್ದಾರೆ.
ತಾಯಿ ಚಾಮುಂಡಿಯ ಶಾಪ ಸಿದ್ದರಾಮಯ್ಯನವರಿಗೆ ತಟ್ಟಲಿದೆ. ಅವರ ರಾಜಕೀಯ ಅಂತ್ಯ ತಾಯಿ ಚಾಮುಂಡೇಶ್ವರಿಯ ಶಾಪದಿಂದ ಸಂಭವಿಸಲಿದೆ ಎಂದು ತೀವ್ರ ಶಬ್ದಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಸಿದ್ದರಾಮಯ್ಯನವರ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ರಾಜ್ಯದಲ್ಲಿ ಜನರ ತಾಳ್ಮೆ ಮುಕ್ತಾಯವಾಗುತ್ತಿದೆ. ಶೀಘ್ರದಲ್ಲೇ ಜನ ಕ್ರಾಂತಿಯ ಹಾದಿ ಹಿಡಿಯಲಿದ್ದಾರೆ. ನೇಪಾಳದಂತೆಯೇ ಪರಿಸ್ಥಿತಿ ಕರ್ನಾಟಕಕ್ಕೂ ಬರಲಿದೆ. ಸಿದ್ದರಾಮಯ್ಯ ಅವರು ಈ ಧೋರಣೆಯಲ್ಲಿ ಮುಂದುವರೆದರೆ ಸರ್ಕಾರದ ಪತನ ಅನಿವಾರ್ಯ ಎಂದರು.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss