ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಡಮ್ಮಿ ಅಂತಾ ಹೈಕಮಾಂಡಿಗೆ ಮನವರಿಕೆಯಾಗಿದೆ. ಹೀಗಾಗಿ ನೂತನ ರಾಜ್ಯಾಧ್ಯಕ್ಷರ ನೇಮಕದಲ್ಲಿ ವಿಳಂವಾಗುತ್ತಿದೆ. ಹೀಗಂತ ಬಿಎಸ್‌ವೈ ಕುಟುಂಬದ ವಿರುದ್ಧ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದಿದ್ದಾರೆ. ವಿಳಂಬ ಆಗುತ್ತಿದೆ ಅಂದ್ರೆ, ವಿಜಯೇಂದ್ರ ಮತ್ತೆ ರಾಜ್ಯಾಧ್ಯಕ್ಷ ಆಗಲ್ಲ, ವ್ಯಾಪಕ ವಿರೋಧ ಇದೆ ಎಂದರ್ಥ. ಬಲಿಷ್ಠ ಹೈಕಮಾಂಡ್ ಇದ್ದಾಗಲೂ ಕರ್ನಾಟಕದಲ್ಲಿ ವಿಳಂಬವಾಗುತ್ತಿದೆ.
ವಿ.ಸೋಮಣ್ಣ ಅವರು ಬೇರೆ, ಬೇರೆ ಕೆಲಸದ ನಿಮಿತ್ತ, ಅಮಿತ್ ಶಾ ಅವರನ್ನು ಭೇಟಿಯಾಗಿರಬಹುದು. ಆದರೆ, ಸೋಮಣ್ಣ ಕೂಡ ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ. ತೀವ್ರ ಸ್ಪರ್ಧೆ ಒಡ್ಡುತ್ತಿದ್ದಾರೆ. ಹೀಗಾಗಿ ವಿಜಯೇಂದ್ರ ಬದಲಾವಣೆ ಖಚಿತ.
ಕಳೆದ ಆಗಸ್ಟ್ 2ರಂದು ವಿಜಯಪುರದಲ್ಲಿ, ಬಿಜೆಪಿ ವಿಭಾಗ ಮಟ್ಟದ ಕಾರ್ಯಕ್ರಮ ಇದೆ. ನಾನು ಪಕ್ಷ ಬಿಟ್ಟ ಮೇಲೆ ವಿಜಯೇಂದ್ರ, ವಿಜಯಪುರಕ್ಕೆ ಬರುತ್ತಿದ್ದಾರೆ. ನಾನು ಬಿಜೆಪಿಯಲ್ಲಿದ್ದಾಗ ಇಲ್ಲಿಗೆ ಬರೋಕೆ, ಧೈರ್ಯ ಇರಲಿಲ್ಲ ಅಂತಾ ಟಾಂಗ್ ಕೊಟ್ಟರು.
ಸಭೆ ಮಾಡ್ಲಿ.. ಬಿಡ್ಲಿ.. ವಿಜಯೇಂದ್ರ ಉದ್ಧಾರ ಆಗಲ್ಲ. ವಿಜಯೇಂದ್ರ ಯಡಿಯೂರಪ್ಪ ಯುಗ ಮುಗಿದಿದೆ. ಇಲ್ಲಿಗೆ ಬಂದು ಏನು ಮಾಡುತ್ತಾನೆ ಅಂತಾ, ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

