Saturday, November 29, 2025

Latest Posts

ಯತ್ನಾಳ್‌ ಹೊಸ ಪಾರ್ಟಿಗೆ JCB ಚಿಹ್ನೆ

- Advertisement -

ಬಿಜೆಪಿಗೆ ಸೆಡ್ಡು ಹೊಡೆದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಹೊಸ ಪಕ್ಷ, ಚಿಹ್ನೆ ಘೋಷಣೆ ಮಾಡಿದ್ದಾರೆ. ಸೆಪ್ಟೆಂಬರ್‌ 11ರಂದು ಮದ್ದೂರಿಗೆ ಭೇಟಿ ನೀಡಿದ್ದ ವೇಳೆ, ಅಧಿಕೃತವಾಗಿ ಘೋಷಿಸಿದ್ದಾರೆ. ಯತ್ನಾಳ್‌ ತಮ್ಮ ಹೊಸ ಪಕ್ಷಕ್ಕೆ ಕರ್ನಾಟಕ ಹಿಂದೂ ಪಾರ್ಟಿ ಅಂತಾ ನಾಮಕರಣ ಮಾಡಿದ್ದು, ಜೆಸಿಬಿ ಚಿಹ್ನೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಪ್ರತಾಪ್ ಸಿಂಹ, ನಾವೆಲ್ಲಾ ಹಿಂದೂಗಳ ಪರ ಮಾತಾಡುತ್ತೇವೆ. ನಾವು ಪ್ರತಾಪ್ ಸಿಂಹ ಒಂದಾಗಿ ಹೊಸ ಸರ್ಕಾರ ತರುತ್ತೇವೆ. ಬಿಜೆಪಿಯವರು ನನ್ನ ಗೌರವಯುತವಾಗಿ ತೆಗೆದುಕೊಳ್ಳದಿದ್ರೆ, ಕರ್ನಾಟಕ ಹಿಂದೂ ಪಾರ್ಟಿ ಕಟ್ಟುತ್ತೇನೆ. ರಾಜ್ಯ ಬಿಜೆಪಿಯವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ‌. ಹೊಂದಾಣಿಕೆ ಮಾಡುವವರನ್ನ ಕೈಬಿಟ್ಟು ನಮ್ಮನ್ನ ಸೇರಿಸಿಕೊಂಡ್ರೆ ಸರಿ. ಇಲ್ಲ‌ದಿದ್ದರೆ ನಾನು ಹೊಸ‌ ಹಿಂದೂ ಪಕ್ಷವನ್ನು ಕಟ್ಟುತ್ತೇನೆ ಎಂದು, ಬಿಜೆಪಿ ಹೈಕಮಾಂಡಡ್‌ಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ನನ್ನನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡಿ. ನಮ್ಮ ಸರ್ಕಾರ ಬಂದರೆ ಮಸೀದಿ ಮುಂದೆ ಡ್ಯಾನ್ಸ್‌ಗೆ ಅವಕಾಶ ಕೊಡುತ್ತೇನೆ. ಇನ್ಮುಂದೆ ಕರ್ನಾಟಕದಲ್ಲಿ ಇದು ನಡೆಯಲ್ಲ. ನನಗೆ ಆಶೀರ್ವಾದ ಮಾಡಿದ್ರೆ, ರಾಜ್ಯಾದ್ಯಂತ ಅಕ್ರಮ ಮಸೀದಿ ತೆರವುಗೊಳಿಸುತ್ತೇನೆ ಅಂತಾ ಸಿಡಿಲಬ್ಬರದ ಭಾಷಣ ಮಾಡಿದ್ರು.

ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧವೂ ಯತ್ನಾಳ್ ಗುಡುಗಿದ್ದಾರೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಔರಂಗಜೇಬ್ ಸರ್ಕಾರ. ಈ ಸರ್ಕಾರದಲ್ಲಿ ಸಾಬರಿಗೆ ಗುತ್ತಿಗೆಯಲ್ಲೂ ಮೀಸಲಾತಿ ಕೊಟ್ಟಿದೆ. ವಕ್ಫ್ ದೇಣಿಗೆ ಕೊಡುತ್ತಿರುವ ಮುಸ್ಲಿಂ ಸರ್ಕಾರ ಬೇಕಾ? ಕರ್ನಾಟಕಕ್ಕೆ ಒಬ್ಬ ಬುಲ್ಡೋಜರ್ ಬಾಬಾ ಬೇಕಾ?. ಯೋಚಿಸಿ ನಮಗೆ ಬೆಂಬಲ ನೀಡಿ ಅಂತಾ ಯತ್ನಾಳ್‌ ಕರೆ ಕೊಟ್ಟಿದ್ದಾರೆ.

- Advertisement -

Latest Posts

Don't Miss