ಯತ್ನಾಳ್‌ ಪಕ್ಷ ಸೇರ್ತಾರಾ ಮದ್ದೂರು ಲೇಡಿ?

ಮದ್ದೂರು ಕಲ್ಲು ತೂರಾಟ ಘಟನೆ, ಮಂಡ್ಯ ಜಿಲ್ಲೆಯಲ್ಲಿ ಹಿಂದೂಗಳ ಒಗ್ಗಟ್ಟಿಗೆ ಪರೋಕ್ಷವಾಗಿ ಕಾರಣವಾಗಿದೆ. ಹಿಂದೂಗಳ ರಕ್ತದ ಕಣಕಣದಲ್ಲೂ, ಹಿಂದುತ್ವದ ಜಪ ಶುರುವಾಗಿದೆ. ಸೆಪ್ಟೆಂಬರ್‌ 9ರಂದು ಹಿಂದೂ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು, ಕಹಳೆ ಮೊಳಗಿಸಿದ್ರು. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ರು. ಈ ವೇಳೆ ಮಹಿಳೆಯರು ಸಾಥ್‌ ಕೊಟ್ಟಿದ್ರು. ಆ ವೇಳೆ ಮತ್ತೆ ಕಲ್ಲು ತೂರಾಟವಾಗಿದ್ರಿಂದ, ಲಾಠಿಚಾರ್ಜ್‌ ಮಾಡಲಾಯ್ತು. ಓರ್ವ ಮಹಿಳೆಗೂ ಲಾಠಿ ಏಟು ಬಿದ್ದಿದ್ದು. ಏಟಿನ ರಭಸಕ್ಕೆ, ರಸ್ತೆಯಲ್ಲೇ ಕುಳಿತು ಬಿದ್ದು, ಒದ್ದಾಡಿದ್ರು.

ಆಕೆಯ ಹೆಸರೇ ಜ್ಯೋತಿ. ದಿನ ಕಳೆಯೋದ್ರೊಳಗೆ ಸಖತ್‌ ಫೇಮಸ್‌ ಆಗಿದ್ರು. ಈಗ ಅದೇ ಜ್ಯೋತಿಗೆ, ರಾಜ್ಯದ ಘಟಾನುಘಟಿ ನಾಯಕರೊಬ್ಬರ ಪಕ್ಕ ನಿಂತುಕೊಳ್ಳೋಕೆ, ಮಾತನಾಡೋಕೆ ಅವಕಾಶ ಸಿಕ್ಕಿದೆ. ರಾಜಕಾರಣಿಗಳ ಅಕ್ಕಪಕ್ಕ ಜಾಗ ಸಿಗುತ್ತೆ, ಮಾತುಕತೆ ಮಾಡ್ತಾರೆ ಅಂದ್ರೆ ಸುಲಭದ ವಿಷ್ಯವಲ್ಲ. ಸುಖಾ ಸುಮ್ಮನೇ ಯಾರನ್ನೂ ಹತ್ತಿರ ಬಿಟ್ಟುಕೊಳ್ಳಲ್ಲ. ಅಂತದ್ರಲ್ಲಿ ಹಿಂದೂ ಫೈರ್‌ ಬ್ರ್ಯಾಂಡ್‌ ಯತ್ನಾಳ್‌ ಎದುರು ಜ್ಯೋತಿ ನಿಂತುಕೊಂಡಿದ್ರು.

ಸೆಪ್ಟೆಂಬರ್‌ 11ರ ಗುರುವಾರ, ಶಾಸಕ ಯತ್ನಾಳ್‌ ಮದ್ದೂರಿಗೆ ಬಂದಿದ್ರು. ಆಗ ಸಾವಿರಾರು ಜನರು ಸೇರಿದ್ರು. ಆ ವೇಳೆ ಎಲ್ಲರೆದುರೇ ಯತ್ನಾಳ್‌ ಇದ್ದ ವಾಹನ ಏರಿದ್ದ ಜ್ಯೋತಿ, ಹಿರಿಯ ನಾಯಕನ ಪಕ್ಕ ನಿಂತುಕೊಳ್ತಾರೆ. ಜ್ಯೋತಿಯನ್ನು ನೋಡಿದ ಯತ್ನಾಳ್‌, ಘಟನೆ ಬಗ್ಗೆ ಕೇಳಿ ಕೆಲ ಹೊತ್ತು ಮಾತನಾಡ್ತಾರೆ. ಒಂದೇ ಒಂದು ದಿನದಲ್ಲಿ ಜ್ಯೋತಿ ಕ್ರೇಜ್‌ ಹೇಗಿದೆ ಅನ್ನೋದನ್ನ ತೋರಿಸಿದೆ.

ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಮದ್ದೂರಿನಲ್ಲೇ ಹೊಸ ಪಕ್ಷ, ಪಕ್ಷದ ಚಿಹ್ನೆಯನ್ನು ಘೋಷಿಸಿದ್ದಾರೆ. ಇಷ್ಟೇ ಅಲ್ಲದೇ ಮದ್ದೂರಿನಿಂದಲೇ ನನ್ನ ರಾಜಕೀಯ ಯುದ್ಧ ಆರಂಭ ಎಂದಿದ್ದಾರೆ. ಇದೇ ಜ್ಯೋತಿ ಕರ್ನಾಟಕ ಹಿಂದೂ ಪಾರ್ಟಿ ಸೇರುವ ಸಾಧ್ಯತೆ ಹೆಚ್ಚಾಗಿದೆ. ರಾಜ್ಯ ಮಟ್ಟಕ್ಕೆ ಯತ್ನಾಳ್‌ ಆದ್ರೆ, ಜಿಲ್ಲಾ ಮಟ್ಟದಲ್ಲಿ ಜ್ಯೋತಿ ಮಿಂಚಲಿದ್ದಾರೆ ಅಂತ್ಲೇ ಹೇಳಲಾಗ್ತಿದೆ. ಜ್ಯೋತಿ ಮದ್ದೂರಿನ ಶಿವಪುರದ ನಿವಾಸಿಯಾಗಿದ್ದು, ವಿವಾಹಿತೆಯಾಗಿದ್ದಾರೆ. ಮಕ್ಕಳು ಸಹ ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಆಕ್ಟೀವ್‌ ಆಗಿದ್ದಾರೆ. ಒಟ್ನಲ್ಲಿ ಆ ಒಂದು ಘಟನೆ ಜ್ಯೋತಿ ಜೀವನದ ದಿಕ್ಕನ್ನೇ ಬದಲಿಸಿದೆ.

About The Author