Sunday, October 5, 2025

Latest Posts

ಯತ್ನಾಳ್ ಮತ್ತೆ ಬಿಜೆಪಿಗೆ ಸೇರ್ಪಡೆ, ಸಿಟಿ ರವಿ ಹೇಳಿದ್ದೇನು?

- Advertisement -

ಬಿಜೆಪಿಯಿಂದ ಉಚ್ಚಾಟನೆಯಾದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಕುರಿತು ಸ್ಪಷ್ಟ ಉತ್ತರ ನೀಡದೆ, ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ ಎಂಬ ಪರೋಕ್ಷ ಹೇಳಿಕೆ ನೀಡುವ ಮೂಲಕ ಹಿರಿಯ ಬಿಜೆಪಿ ನಾಯಕರು ಕುತೂಹಲ ಹೆಚ್ಚಿಸಿದ್ದಾರೆ.

ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬೇಕೇ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ, ವಿಧಾನ ಪರಿಷತ್ ಸದಸ್ಯ ಸಿಟಿ ರವಿ ನೆರೆ ವೀಕ್ಷಣೆಗೆ ಹೋದಾಗ ಚಿಕ್ಕೋಡಿಯಲ್ಲಿ ಉತ್ತರವನ್ನು ನೀಡಿದ್ದಾರೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ ಎಂದು ಅದಕ್ಕೆ ಆರ್.ಅಶೋಕ್ ಧ್ವನಿಗೂಡಿಸಿದ್ದಾರೆ.

ಕಾಲಾಯ ತಸ್ಮೈ ನಮಃ. ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆ. ಕಾಲಕ್ಕಿಂತ ದೊಡ್ಡವರು ಯಾರೂ ಇಲ್ಲ. ಯಾವ ಸಮಯದಲ್ಲಿ ಏನು ಆಗಬೇಕೋ ಅದು ಆಗೇ ಆಗುತ್ತೆ ಎಂದು ಅವರು ಯತ್ನಾಳ್ BJPಗೆ ಮರಳುವ ಸಾಧ್ಯತೆಯನ್ನು ನಿರಾಕರಿಸದೇ ಪರೋಕ್ಷವಾಗಿ ಸೂಚಿಸಿದರು.

ಇತ್ತೀಚಿನ ದಿನಗಳಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಜನಪ್ರಿಯತೆ ಹೆಚ್ಚಾಗುತ್ತಿದ್ದು, ಹಲವಾರು ಹಿಂದೂಪರ ಸಂಘಟನೆಗಳು ಹಾಗೂ ಗಣೇಶೋತ್ಸವ ಸಮಿತಿಗಳು ಅವರನ್ನು ಗೌರವಪೂರ್ವಕವಾಗಿ ಆಹ್ವಾನಿಸುತ್ತಿವೆ. ಮದ್ದೂರು, ಹಾವೇರಿ, ದಾವಣಗೆರೆ, ಚಿತ್ರದುರ್ಗ ಮುಂತಾದ ಸ್ಥಳಗಳಲ್ಲಿ ನಡೆದ ಗಣೇಶ ಉತ್ಸವಗಳಲ್ಲಿ ಅವರು ಭಾಗವಹಿಸಿದ್ದು ಈ ಅಂದಾಜಿಗೆ ಬಲ ನೀಡಿದೆ.

ಬಿಜೆಪಿ ಸೇರುವ ಸಾಧ್ಯತೆಯ ಬಗ್ಗೆ ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಸೂಚ್ಯವಾಗಿ ಮಾತನಾಡಿದ್ದರು ಕೂಡಾ. ದೆಹಲಿಯಲ್ಲಿ ಅಮಿತ್ ಶಾ, ಕೇಂದ್ರದ ಸಚಿವರೊಬ್ಬರ ಬಳಿ, ಮಾತನಾಡುತ್ತಾ, ವಿಜಯೇಂದ್ರನ ಮಾತು ಕೇಳಿ, ಕರ್ನಾಟಕದಲ್ಲಿ ಯತ್ನಾಳ್ ಅವರನ್ನು ಉಚ್ಚಾಟಿಸಿ ತಪ್ಪು ಮಾಡಿದೆ ಎಂದು ಶಾ ಹೇಳಿದ್ದರು ಎಂದು ಯತ್ನಾಳ್ ಹೇಳಿದ್ದರು.

ಸರ್ಕಾರ ಕಮಿಷನ್ ಹೊಡೆಯುವುದಕ್ಕೆ ಮಾತ್ರ ಇದೆ. ನಮ್ಮ ಸರ್ಕಾರದ ಅವಧಿಯಲ್ಲಿ ಮನೆ ಕಳೆದುಕೊಂಡವರಿಗೆ ಐದು ಲಕ್ಷ ರೂಪಾಯಿ ಹಣವನ್ನು ನೀಡುತ್ತಿದ್ದೆವು. ಈ ಸರ್ಕಾರ ಬದುಕಿದ್ದೂ ಸತ್ತ ರೀತಿಯಲ್ಲಿ ಇದೆ. ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಿ, ಬದುಕಿ ಉಳಿದಿದ್ದೇವೆ ಎಂದು ತೋರಿಸಲಿ ಎಂದು ಸಿಟಿ ರವಿ, ಆಕ್ರೋಶ ಹೊರಹಾಕಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss