ಇತ್ತೀಚೆಗಿನ ಕಲ್ಲು ತೂರಾಟದಿಂದಾಗಿ ಉದ್ವಿಗ್ನ ಸ್ಥಿತಿಯಲ್ಲಿದ್ದ ಮದ್ದೂರು ಪಟ್ಟಣಕ್ಕೆ ಇಂದು ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿಕೊಟ್ಟರು. ಯತ್ನಾಳ್.. ಯತ್ನಾಳ್ ಅಂತಿದ್ದ ಮದ್ದೂರು ಜನರ ನೋಡೋಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಬಂದಿದ್ದಾರೆ.
ಹಿಂದೂ ಅಭಿಮಾನಿಗಳ ಕೂಗಿಗೆ ಕಿವಿಗೊಟ್ಟ ಫೈರ್ ಬ್ರಾಂಡ್ ಮದ್ದೂರಿಗೆ ಭೇಟಿ ಕೊಟ್ಟು ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಮದ್ದೂರಿಗೆ ಯತ್ನಾಳ್ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿ ಸಾಗರವೇ ಹರಿದು ಬಂದಿತ್ತು. ಸಹಸ್ರಾರು ಹಿಂದೂ ಕಾರ್ಯಕರ್ತರು ಬೈಕ್ ರ್ಯಾಲಿಯ ಮೂಲಕ ಯತ್ನಾಳ್‌ಗೆ ಅದ್ದೂರಿ ಸ್ವಾಗತ ನೀಡಿದರು. ಬಿಜೆಪಿಯಿಂದ ಉಚ್ಛಾಟನೆಯಾದ್ರೂ ಯತ್ನಾಳ್ ಅವರ ಹವಾ ಕಮ್ಮಿ ಆಗಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿಯಾಗಿದೆ.
ಮಂಡ್ಯದ ಮಣ್ಣಿನ ಮಗ ಯಡಿಯೂರಪ್ಪ ಅವ್ರು ಬಂದಾಗ್ಲೂ, BY ವಿಜಯೇಂದ್ರ ಬಂದಾಗ್ಲೂ, ಸಿಟಿ ರವಿ ಬಂದಾಗ್ಲೂ ಅಥವಾ ಯಾವೊಬ್ಬ ಬಿಜೆಪಿ ನಾಯಕ ಬಂದಾಗ್ಲೂ ಕೂಡ ಇಷ್ಟು ಜನಸಾಗರ ಸೇರಿರಲಿಲ್ಲ. ಆದ್ರೆ ಫೈರ್ ಬ್ರಾಂಡ್ ಯತ್ನಾಳ್ ಬಂದಾಗ ಎಲ್ಲಿಲ್ಲದ ಜನಸಾಗರ ಕಿಕ್ಕಿರಿದು ಸೇರಿತ್ತು. ಯತ್ನಾಳ್ ಅವರಿಗೆ ಸಿಕ್ಕ ಭಾರೀ ಜನ ಬೆಂಬಲವನ್ನ ನೋಡಿ ಪೋಲೀಸರೇ ದಂಗಾಗಿದ್ದಾರೆ.
ರಾಮ ಮಂದಿರದ ಬಳಿಗೆ ಯತ್ನಾಳ್ ಬಂದಾಗ, ಅವರನ್ನು ನೋಡಲು ಜನರಲ್ಲಿ ನೂಕುನುಗ್ಗಲಿನ ವಾತಾವರಣ ನಿರ್ಮಾಣವಾಯಿತು. ಜನ ಬೆಂಬಲವನ್ನು ಕಂಡು ನೋಡಿ ಯತ್ನಾಳ್ ಫುಲ್ ಖುಷ್ ಆಗಿದ್ರು. ಜನರ ಪ್ರೀತಿ ನೋಡಿ ಯತ್ನಾಳ್ ಭಾವುಕಗೊಂಡು, ಎರಡೂ ಕೈಗಳನ್ನು ಮೇಲೆತ್ತಿ ಅಭಿಮಾನಿಗಳಿಗೆ ನಮಸ್ಕಾರ ಸಲ್ಲಿಸಿದರು.
ಕಲ್ಲು ಹೊಡೆದ ಮುಸಲ್ಮಾನ ಗೂಂಡಾಗಳನ್ನು ಹೆಡೆಮುರಿ ಕಟ್ಟಿ, ಜೈಲಿಗೆ ತಳ್ಳಬೇಕು. ಇಲ್ಲದಿದ್ದರೇ ಪ್ರತಿಭಟನೆ ಇನ್ನು ತೀವ್ರ ಸ್ವರೂಪ ಪಡೆಯುತ್ತದೆ ಅಂತಾ ವಾರ್ನ್ ಮಾಡಿದ್ರು. ಒಟ್ನಲ್ಲಿ ಹಿಂದೂ ಹುಲಿ ಫೈರ್ ಬ್ರ್ಯಾಂಡ್ ಯತ್ನಾಳ್ ಮದ್ದೂರಿಗೆ ಬಂದಿದ್ದು, ಹಿಂದೂ ಸಂಘಟನೆಯ ಹುಮ್ಮಸ್ಸು ಹೆಚ್ಚಾಗಿದೆ. ಈ ಜನಆಕ್ರೋಶ ಮತ್ತು ಬೆಂಬಲ ಬಿಜೆಪಿಯ ಸ್ಥಳೀಯ ನಾಯಕರಿಗಿಂತಲೂ ಯತ್ನಾಳ್ ಅವರ ಪ್ರಭಾವ ಹೆಚ್ಚು ಎದ್ದು ತೋರುತ್ತಿತ್ತು.
ಏನೇ ಆದ್ರೂ ನರನಾಡಿಗಳಲ್ಲೂ ಹಿಂದುತ್ವದ ಜಪ ಮಾಡ್ತಿರುವ ಯತ್ನಾಳ್‌ಗೆ, ಡಿಮ್ಯಾಂಡ್ ಜಾಸ್ತಿಯಾಗಿದೆ. ಮದ್ದೂರಿನ ಪ್ರತಿಯೊಬ್ಬ ಹಿಂದೂ ಕಾರ್ಯಕರ್ತ, ಯತ್ನಾಳ್ ಆಗಮನಕ್ಕಾಗಿ ಎದುರು ನೋಡ್ತಿದ್ರು.
ಬಿಜೆಪಗರ ಹಿಂದುತ್ವ ಒಂದೆಡೆಯಾದ್ರೆ, ಶಾಸಕ ಯತ್ನಾಳ್ ಅವರ ಹಿಂದುತ್ವದ ಪ್ರೇಮ ಮತ್ತೊಂದು ತೂಕ. ಇದೇ ಕಾರಣಕ್ಕೆ ಬಿಜೆಪಿಗರ ಶೋಭಾಯಾತ್ರೆ ಬಳಿಕವೂ, ಮದ್ದೂರಿನಲ್ಲಿ ಯತ್ನಾಳ್ ಹವಾ ಜಾಸ್ತಿಯಾಗಿದೆ.
ವರದಿ : ಲಾವಣ್ಯ ಅನಿಗೋಳ