devotional story
ಪೂರ್ವದಲ್ಲಿ ಪಾಂಡ್ಯ ಎಂಬ ರಾಜ್ಯದಲ್ಲಿ ಇಂದ್ರದ್ಯುಮ್ನನೆಂಬ ರಾಜ ಧರ್ಮಪಾಲನೆಯಿಂದ ರಾಜ್ಯವನ್ನು ಪರಿಪಾಲಿಸುತ್ತಿದ್ದನು ಅವನು ವಿಷ್ಣುವಿನ ಪರಮಭಕ್ತನಾಗಿದ್ದನು ರಾಜನ ರಾಜ್ಯಭಾರಕ್ಕೆ ಮೆಚ್ಚಿದ ಪ್ರಜೆಗಳೆಲ್ಲರು ರಾಜನನ್ನು ಅವರ ತಂದೆಯಂತೆ ಭಾವಿಸುತ್ತಿದ್ದರು.ಒಮ್ಮೆ ಇಂದ್ರದ್ಯುಮ್ನನು ತ್ರಿಕೂಟಾಚಲ ವೆಂಬ ಕಣಿವೆಯಲ್ಲಿ ವಿಷ್ಣುವಿನ ಆರಾಧನೆಯಲ್ಲಿ ಧ್ಯಾನಮಗ್ನನಾಗಿರುತ್ತಾನೆ ,ಅದೆ ಸಮಯದಲ್ಲಿ ಅಗಸ್ತ್ಯ ಮಹಾಮುನಿಗಳು ತಮ್ಮ ಪರಿವಾರದೊಂದಿಗೆ ತ್ರಿಕೂಟಾಚಲವೆಂಬ ಕಣಿವೆಗೆ ಬಂದರು ,ತಪೋನಿರತನಾಗಿದ್ದ ರಾಜನಿಗೆ ಅಗಸ್ತ್ಯ ಮುನಿಗಳು ಬಂದಿರುವ ಅರಿವೇ ಇರಲಿಲ್ಲ ಮುನಿಗಳು ಅಲ್ಲೇ ಕುಳಿತು ಅರಿವಾಗುತ್ತದೆಯೋ ಇಲ್ಲವೋ ಎಂದು ಬಹಳ ಸಮಯ ಕಾದು ನೋಡಿದರು ಆದರೆ ರಾಜನಿಗೆ ಅಗಸ್ತ್ಯಮುನಿಗಳು ಬಂದಿರುವ ಬಗ್ಗೆ ತಿಳಿಯಲೇಇಲ್ಲ. ಆ ಸಮಯದಲ್ಲಿ ಅವರಿಗೆ ರಾಜನ ಮೇಲೆ ಬಹಳ ಕೋಪ ಬಂದಿತು ಅಗಸ್ತ್ಯಮುನಿಗಳು ಕೂಡಲೇ ಕೋಪದಲ್ಲಿ ತಮ್ಮ ವಿವೇಕವನ್ನೇ ಕಳೆದುಕೊಂಡು ನೀನು ಮುಂದಿನ ಜನ್ಮದಲ್ಲಿ ಇದೇ ಸ್ಥಳದಲ್ಲಿ ಆನೆಯಾಗಿ ಹುಟ್ಟು ಎಂದು ರಾಜನನ್ನು ಶಪಿಸಿದರು .
ಶಾಪಗ್ರಸ್ತನಾದ ರಾಜ ಇಂದ್ರದ್ಯುಮ್ನನು ತ್ರಿಕೂಟಾಚಲದ ಪ್ರದೇಶದಲ್ಲಿಯೇ ಆನೆಯಾಗಿ ಜನ್ಮಿಸುತ್ತಾನೆ, ಈ ಪ್ರದೇಶ ಪವಿತ್ರಸ್ಥಳಕ್ಕೆ ಹೆಸರುವಾಸಿ ಪರ್ವತದ ಸುತ್ತಲೂ ಹಾಲಿನ ನೊರೆ ಸುತ್ತು ವರೆದಿರುತ್ತದೆ ಹಾಗು ಇಲ್ಲಿ ಅನೇಕ ಗುಹೆಗಳಿದ್ದವು ಅಲ್ಲಿ ದೇವತೆಗಳು ವಿಶ್ರಾಂತಿ ಪಡೆಯುತ್ತಿದ್ದರು, ಯಕ್ಷರೂ ಋಷಿಮುನಿಗಳು ಸಮಯ ಕಳೆಯಲು ಈ ಪ್ರದೇಶಕ್ಕೆ ಬರುತ್ತಿದ್ದರು .ಶಾಪಗ್ರಸ್ತನಾದ ರಾಜ ಆನೆಯಾಗಿ ಜನ್ಮಿಸಿದರೂ ಕೂಡ ರಾಜಯೋಗ ಗುಣಗಳಿಂದ ಕೂಡಿರುತ್ತದೆ .ಆದಕಾರಣ ತ್ರಿಕೂಟಾಚಲ ಪ್ರದೇಶದ ಆನೆಗಳಿಗೆಲ್ಲ ಒಡೆಯನಾಗಿ ಗಜೇಂದ್ರ ಎಂದು ಹೆಸರು ವಾಸಿಯಗಿತ್ತು .
ಒಮ್ಮೆ ಬೇಸಿಗೆಯಲ್ಲಿ ಗಜೇಂದ್ರನಿಗೆ ಬಹಳ ಬಾಯಾರಿಕೆಯಾಗುತ್ತಿತು ನೀರು ಕುಡಿಯಲು ತನ್ನ ಬಳಗದವರೊಂದಿಗೆ ತ್ರಿಕೂಟಾಚಲದ ಪರ್ವತಕ್ಕೆ ಬಂದರು, ನೀರು ಕುಡಿದು ಸುಮ್ಮನಿರದ ಗಜೇಂದ್ರ ಅಲ್ಲಿ ಅಲ್ಲೋಲ್ಲಕಲ್ಲೋಲ್ಲ ಸೃಷ್ಟಿಸಿದ ಇದರಿಂದ ಬೇರೆ ಪ್ರಾಣಿಗಳಿಗೆ ತೊಂದರೆಯಾಗುತ್ತಿತ್ತು. ಆದೆ ಕೊಳದಲ್ಲಿ ಒಂದು ಭಯಂಕರವಾದ ಮೊಸಳೆ ಜೀವಿಸುತ್ತಿತ್ತು ಆ ಮೊಸಳೆಗೆ ತುಂಬಾ ಕೋಪಬಂದು, ಗಜೇಂದ್ರನ ಕಾಲನ್ನು ಗಟ್ಟಿಯಾಗಿ ಕಚ್ಚಿಕೊಂಡಿತು ಶಕ್ತಿಶಾಲಿಯಾದ ಗಜೇಂದ್ರ ಕಾಲನ್ನು ಹೊರತೆಗೆಯಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ, ನೋವಿನ ಬಾಧೆಯನ್ನು ತಾಳಲಾರದೆ ಕಿರಿಚಲು ಪ್ರಾರಂಭಿಸಿತು ಹಾಗು ಇತರ ಆನೆಗಳೂ ತಮ್ಮ ಒಡೆಯನನ್ನು ಮೊಸಳೆಯ ಬಾಯಿಂದ ಬಿಡಿಸಲು ಬಹಳ ಪ್ರಯತ್ನಿಸಿದುವು ಆದರೆ ಯಾವ ಫಲವು ದೊರಕಲಿಲ್ಲ, ಕೊಳದೊಳಗೆ ಮೊಸಳೆ ಮತ್ತು ಗಜೇಂದ್ರ ಎರಡು ತಮ್ಮ ಶಕ್ತಿಯನ್ನು ಉಪಯೋಗಿಸಿ ಭಯಂಕರವಾಗಿ ಹೋರಾಡುತ್ತಿತ್ತು ಹೀಗೆ ದಿನಗಳು ವಾರಗಳು ತಿಂಗಳುಗಳು ಕಳೆದರು ಅವರ ಹೋರಾಟ ನಿಲ್ಲಲಿಲ ಹೀಗೆಯೇ 1000 ವರ್ಷಗಳು ಕಳೆದವು ಆನೆಯು ಬಲಹೀನವಾಗ ತೊಡಗಿತ್ತು 1000ವರ್ಷಗಳ ಕಾಲ ಹೋರಾಡಿದರೂ ಮೊಸಳೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ,ನಂತರ ಭಕ್ತಿಯಿಂದ ವೈಕುಂಠಾಧಿಪತಿಯಾದ ಶ್ರೀಮನ್ನಾರಾಯಣನನ್ನು ಸ್ತುತಿಸಲು ಪ್ರಾರಂಭಿಸಿತು ನೋವಿನಿಂದ ಮುಕ್ತಗೊಳಿಸಲು ಬೇಡಿಕೊಂಡಿತು ನಾರಾಯಣಾ, ದೀನಬಂಧೂ, ಈಗ ನೀನೇ ನನಗೆ ಆಸರೆ ನನ್ನನು ಕಾಪಾಡು ಎಂದು ಬೇಡಿಕೊಂಡಿತು .
ಆಗ ಗಜೇಂದ್ರನನ್ನು ಕಾಪಾಡಲು ತನ್ನ ವಾಹನವಾದ ಗರುಡನ ಮೇಲೆ ಕುಳಿತು ತ್ರಿಕೂಟಾಚಲಕ್ಕೆ ಪ್ರಯಾಣ ಬೆಳೆಸಿದ ಆ ಸಮಯದಲ್ಲಿ ಗಜೇಂದ್ರನಿಗೆ ತುಂಬಲಾರದ ಆನಂದವಾಯಿತು ನಂತರ ಗಜೇಂದ್ರನು ಅಷ್ಟು ನೋವಿನಲ್ಲೂ ಸೊಂಡಿಲಿನಿಂದ ಕೊಳವೆಯಲ್ಲಿರುವ ತಾವರೆಹೂವನ್ನು ವಿಷ್ಣುವಿಗೆ ಅರ್ಪಿಸಿ ಭಕ್ತಿಯಿಂದ ನಮಿಸತೊಡಗಿದ ಭಕ್ತರ ಅಧೀನನೆನಿಸಿದ ವಿಷ್ಣು ಪರಮಾತ್ಮ ತನ್ನ ಕೈಯಲ್ಲಿದ್ದ ಸುದರ್ಶನ ಚಕ್ರದಿಂದ ಮೊಸಳೆಯ ತಲೆಯನ್ನು ಕತ್ತರಿಸಿದ ಮೊಸಳೆಯ ಜೀವ ಹೋಗಿ ಅವನೊಬ್ಬ ಗಂಧರ್ವನಾದ. ಅವನ ಹೆಸರು ಹೂಹೂ ದೇವಲ ಮಹರ್ಷಿಗಳ ಶಾಪದಿಂದ ಮೊಸಳೆಯಾಗಿದ್ದ ಮಹಾವಿಷ್ಣುವಿನಿಂದ ಈಗ ಶಾಪವಿಮೋಚನೆ ಯಾಗಿ ಮೊಸಳೆಯಾಗಿದ್ದ ಹೂಹೂ ವಿಷ್ಣುವನ್ನೂ ಗಜೇಂದ್ರನನ್ನೂ ನಮಿಸುತ್ತಾ ತನ್ನ ಗಂಧರ್ವಲೋಕಕ್ಕೆ ಮರಳಿ ಹೋದ ಮಹಾವಿಷ್ಣುವನ್ನು ಗಜೇಂದ್ರ ಪರಿಪರಿ ರೀತಿಯಲ್ಲಿ ಸ್ತುತಿಸಿದ ಸಂತೃಪ್ತನಾದ ಶ್ರೀವಿಷ್ಣು ಗಜೇಂದ್ರನಿಗೂ ದೇವಸ್ವರೂಪವನ್ನು ನೀಡಿ ಸ್ವರ್ಗ ಲೋಕಕ್ಕೆ ಕರೆದೊಯ್ದ ಹೀಗೆ ಇಂದ್ರದ್ಯುಮ್ನ ರಾಜನು ಆನೆಯ ರೂಪದಿಂದ ಬಿಡುಗಡೆಹೊಂದಿ ಮೋಕ್ಷ ಪ್ರಾಪ್ತಿಯಾಗುತ್ತದೆ ಇದೆ ಗಜೇಂದ್ರ ಮೋಕ್ಷ ಎಂದು ಪ್ರಸಿದ್ಧಿಯಾಯಿತು.