www.karnatakatv.net: ರಾಜ್ಯ: ಬೆಂಗಳೂರು- ಕರಾವಳಿ ಜಿಲ್ಲೆಗಳ ಬಹುತೇಕ ಎಲ್ಲಾ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದ್ದು, ಜೂನ್ 29ರಿಂದ ಜುಲೈ 1ರವರೆಗೆ “YELLOW ALERT” ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಜೂನ್ 28ರ ನಂತರ ಮುಂಗಾರು ಮತ್ತೆ ಶುರುವಾಗಲಿದೆ. ಕರಾವಳಿಯ ಉಡುಪಿ, ಉ.ಕನ್ನಡ, ದ.ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನದಲ್ಲಿ ಭಾರೀ ಮಳೆಯಾಗಲಿದ್ದು, “YELLOW ALERT” ಘೋಷಿಸಲಾಗಿದೆ. ಇನ್ನು, ಕರ್ನಾಟಕ ದಕ್ಷಿಣ ಒಳನಾಡು ಮತ್ತು ಉತ್ತಪ ಒಳನಾಡಿನಲ್ಲಿಯೂ ಗುಡುಗು ಸಹಿತ ಮಳೆಯಾಗಲಿದೆ. ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯು ಮಾಹಿತಿ ನೀಡಿದೆ.




