Friday, May 9, 2025

Latest Posts

ಹೊಸತನದ ಕಮರ್ಷಿಯಲ್ ಥ್ರಿಲ್ಲರ್ ಸಿನಿಮಾಕ್ಕೆ ಸಾಥ್ ಕೊಟ್ಟ ರಿಷಭ್ ಶೆಟ್ಟಿ

- Advertisement -

ಕನ್ನಡಕ್ಕೆ ಹೊಸತನ ಮತ್ತು ಹೊಸಬರು ಸಾಕಷ್ಟು ಸಂಖ್ಯೆಯಲ್ಲಿ ಪಾದಾರ್ಪಣೆ ಮಾಡುತ್ತಿದ್ದು, ಪ್ರತಿಭಾವಂತ ತಂತ್ರಜ್ಞರನ್ನು ಚಿತ್ರರಂಗ ಕೊಡುತ್ತಿದೆ.  ಇದೇ ರೀತಿಯಲ್ಲಿ ಹೊಸತನದ ಪ್ರತಿಭಾವಂತರೆಲ್ಲಾ ಸೇರಿ ಹೊಸದೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಹೌದು ಸ್ಕ್ವೇರ್ ಕಾನ್ಸೆಪ್ಟ್ಸ್ ಪ್ರೊಡಕ್ಷನ್ ಅಡಿಯಲ್ಲಿ ಜ್ಞಾನಶೇಖರ್ ಸಿದ್ದಯ್ಯ, ರವಿಕುಮಾರ್, ಸುನಿಲ್ ಗಟ್ಕೆ ಮತ್ತು ರಾಘವೇಂದ್ರ ಅವರು ಬಂಡವಾಳ ಹುಡುತ್ತಿರೋ  ಹೆಸರಿಡದ ಸಿನಿಮಾ ಸೆಟ್ಟೇರಿದೆ.

ಭಗವಾನ್ ಬುದ್ಧ ದೇವರ ಬಗ್ಗೆ ಪ್ರಪಂಚಕ್ಕೆ ತಿಳಿಯದ ವಿಶೇಷವಾದ ಕಥೆಯನ್ನು ಕಮರ್ಷಿಯಲ್ ಥ್ರಿಲ್ಲರ್ ರೂಪದಲ್ಲಿ ಹೇಳಲು ರೆಡಿ ಯಾಗಿದೆ ಚಿತ್ರತಂಡ. ರಾಘವೇಂದ್ರ ವಿ ಇಳಿಗೇರ್ ನಿರ್ದೇಶಿಸುತ್ತಿರುವ, ಈ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟರೊಬ್ಬರು ನಟಿಸಲಿದ್ದಾರೆ ಎಂಬುದು ಚಿತ್ರತಂಡದ ಉತ್ತರ.  ಈಗಾಗಲೇ ರಘು ದೀಕ್ಷಿತ್ ಸಂಗೀತ ನಿರ್ದೇಶಕ ಮಾಡೋದು ಕನ್ಫರ್ಮ್ ಆಗಿದ್ದು, ಸಿನೆಮಾಕ್ಕೆ ಮತ್ತಷ್ಟು ತೂಕ ಬಂದಿದೆ.

Production No 2 ಹೆಸರಲ್ಲಿ ಚಿತ್ರೀಕರಣ ಪ್ರಾರಂಭ ಮಾಡಲಿರುವ ಸಿನೆಮಾ ತಂಡ, ಬಹಳಷ್ಟು ಶ್ರಮವಹಿಸಿ ಕನ್ನಡಕ್ಕೊಂದು ಉತ್ತಮ ಸಿನೆಮಾ ಕೊಡುವ ಹಂಬಲದಿಂದ ಕೆಲಸ ಮಾಡ್ತಿದೆ. ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ಯಶಸ್ಸು ಕಾಣಲಿ.

- Advertisement -

Latest Posts

Don't Miss