ಉತ್ತರ ಪ್ರದೇಶದ ರಾಜಕೀಯದಲ್ಲಿ ಶ್ರೀಕೃಷ್ಣ ಪರಮಾತ್ಮನನ್ನು ಎಳೆದು ಎಳೆದು ತರುತ್ತಿದ್ದಾರೆ ರಾಜಕೀಯ ಗಣ್ಯರು. ಮೊನ್ನೆ ತಾನೇ ಅಖಿಲೇಶ್ ಯಾದವ್, ನನ್ನ ಕನಸಿನಲ್ಲಿ ಶ್ರೀಕೃಷ್ಣ ಬಂದಿದ್ದರು, ಮುಂದೆ ನೀನೇ ಈ ರಾಜ್ಯದಲ್ಲಿ ಆಡಳಿತ ನಡೆಸುತ್ತಿಯಾ ಎಂದು ಹೇಳಿದರು. ಬರೀ ಒಂದು ದಿನವಷ್ಟೇ ಅಲ್ಲ, ಪ್ರತಿದಿನ ಶ್ರೀಕೃಷ್ಣ ನನ್ನ ಕನಸಿನಲ್ಲಿ ಬಂದು ಇದನ್ನೇ ಹೇಳುತ್ತಿದ್ದಾರೆಂದು ಅಖಿಲೇಶ್ ಯಾದವ್ ಭಾಷಣವೊಂದರಲ್ಲಿ ಹೇಳಿದ್ದರು.
ಇಂದು ಇದಕ್ಕೆ ಟಕ್ಕರ್ ಕೊಟ್ಟಿರುವ ಸಿಎಂ ಯೋಗಿ ಆದಿತ್ಯನಾಥ್, ಯಾರದ್ದೋ ಕನಸಲ್ಲಿ ಕೃಷ್ಣ ಬರ್ತಾನಂತೆ, ಆಡಳಿತ ಮಾಡುತ್ತೀ ಅಂತಾ ಹೇಳುತ್ತಾನಂತೆ. ಅಂಥವರಿಗೆ ಆಡಳಿತದ ವರ ಅಲ್ಲ ಕೃಷ್ಣನಿಂದ ಶಾಪ ಸಿಗುತ್ತದೆ. ಆಡಳಿತವಿದ್ದಾಗ ಮಥುರಾ, ವೃಂದಾವನದಲ್ಲಿ ಕೊಂಚವೂ ಅಭಿವೃದ್ಧಿ ಮಾಡಲಿಲ್ಲ. ಇಂಥವರಿಗೆ ಕೃಷ್ಣ ಶಾಪ ಕೊಡುತ್ತಾನೆ, ಆಡಳಿತದ ವರವಲ್ಲ ಎಂದು ಆದಿತ್ಯನಾಥ್, ಅಖಿಲೇಶ್ ಯಾದವ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ.
ಅಲ್ಲದೇ ಇಂಥವರ ಕನಸ್ಸಿನಲ್ಲಿ ಬರುವ ಕೃಷ್ಣ, ನೀನು ಈಗಾದರೂ ನಿನ್ನ ಪಾಪಕ್ಕೆ ಪಶ್ಚಾತಾಪ ಪಡಬೇಕು. ಆಡಳಿತದಲ್ಲಿದ್ದಾಗ, ಬಿಜೆಪಿಯವರು ಅಲ್ಪ ಸ್ವಲ್ಪವಾದರೂ ಬೃಂದಾವನ ಮಮತ್ತು ಮಥುರಾದ ಅಭಿವೃದ್ಧಿ ಮಾಡಿದ್ದರು. ಆದರೆ ನಿನಗೆ ಆಡಳಿತ ನೀಡಿದಾಗ ಅದರ ಬಗ್ಗೆ ನೀನು ಗಮನವೇ ವಹಿಸಲಿಲ್ಲ. ಹಾಗಾಗಿ ನಿನಗೆ ನಾನು ಶಾಪ ನೀಡುತ್ತೇನೆಂದು ಹೇಳಬೇಕು ಎಂದು ಆದಿತ್ಯನಾಥ್, ಅಖಿಲೇಶ್ ಹೆಸರು ಹೇಳದೇ, ವಾಗ್ದಾಳಿ ನಡೆಸಿದ್ದಾರೆ.


