Vastu:
ಅನೇಕ ಜನರು ವಾಸ್ತುವನ್ನು ನಂಬುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ಪ್ರಾಣಿ, ಪಕ್ಷಿಗಳನ್ನು ಸಾಕುವುದು ಉತ್ತಮ. ಅವುಗಳನ್ನು ಮನೆಯಲ್ಲಿಟ್ಟರೆ ಮನೆಯಲ್ಲಿ ಒಳ್ಳೆಯದಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಮನೆಯಲ್ಲಿ ಏನನ್ನು ಇಟ್ಟರೆ ಉತ್ತಮ ಎಂದು ತಿಳಿದುಕೊಳ್ಳೋಣ .
ಮೀನು
ಮನೆಯಲ್ಲಿ ಮೀನು ಸಾಕುವುದು ಒಳ್ಳೆಯದು. ಮನೆಯಲ್ಲಿ ಮೀನು ಇದ್ದರೆ ಎಲ್ಲಾ ರೀತಿಯ ತೊಂದರೆಗಳು ದೂರವಾಗುತ್ತವೆ. ಭಗವಾನ್ ವಿಷ್ಣುವು ಮೀನಿನ ಅವತಾರವಾಗಿರುವುದರಿಂದ, ಮನೆಯಲ್ಲಿ ಮೀನುಗಳನ್ನು ಇಡುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ.
ಆಮೆ
ಮನೆಯಲ್ಲಿ ಆಮೆಯನ್ನು ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆಮೆಯನ್ನು ಮನೆಯಲ್ಲಿಟ್ಟರೆ ರೋಗಗಳು ಗುಣವಾಗುತ್ತವೆ. ನಿಜವಾದ ಆಮೆಯ ಬದಲು ಹಿತ್ತಾಳೆ ಅಥವಾ ಗಾಜಿನ ಆಮೆಯನ್ನೂ ಮನೆಯಲ್ಲಿ ಇಟ್ಟುಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಮನೆಯಲ್ಲಿ ಆಮೆ ಇದ್ದರೆ ಸಂಪತ್ತು ಹೆಚ್ಚುತ್ತದೆ.
ನಾಯಿ
ಹಿಂದೂ ಧರ್ಮದ ಪ್ರಕಾರ, ನಾಯಿಯನ್ನು ಭೈರವ ಬಾಬಾನ ಸವಾರಿ ಎಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ, ನಾಯಿಗೆ ರೊಟ್ಟಿಯನ್ನು ತಿನ್ನಿಸುವುದರಿಂದ, ಎಲ್ಲಾ ರೀತಿಯ ದೋಷಗಳಳು ದೂರವಾಗುತ್ತದೆ .
ಕುದುರೆ
ಕುದುರೆಯನ್ನು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿಟ್ಟರೆ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ನೀವು ಮನೆಯಲ್ಲಿ ಕುದುರೆಯ ಚಿತ್ರವನ್ನು ಸಹ ಇರಿಸಬಹುದು.