ಇವತ್ತು ನಾವು ಕೂದಲು ಉದುರುವ ಸಮಸ್ಯೆಗೆ ಒಂದು ಹೂವಿನ ಮೂಲಕ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋ ಬಗ್ಗೆ ಹೇಳಲಿದ್ದೇವೆ. ಯಾವುದು ಆ ಹೂವು..? ಆ ಹೂವಿನಿಂದಾಗುವ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗಬೇಕು. ನಿಮ್ಮ ಕೂದಲು ಉದ್ದ ಬರಬೇಕು, ಸಧೃಡವಾಗಿರಬೇಕು ಅಂದ್ರೆ, ನೀವು ದಾಸವಾಳ ಹೂವಿನ ಬಳಕೆ ಮಾಡಬೇಕು. ತಿಂಗಳಲ್ಲಿ ಎರಡು ಬಾರಿಯಾದ್ರೂ ದಾಸವಾಳ ಹೂವಿನ ಬಳಕೆ ಮಾಡಬೇಕು. ದಾಸವಾಳ ಹೂವಿನ ಎಣ್ಣೆ ಮಾಡಿ, ತಲೆ ಸ್ನಾನ ಮಾಡುವ ಒಂದು ಗಂಟೆ ಮೊದಲು ಆ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಬೇಕು. ಕೆಂಪು ದಾಸವಾಳವನ್ನು ಪೇಸ್ಟ್ ಮಾಡಿ, ಅದರ ರಸ ತೆಗೆದು ಆಲಿವ್ ಎಣ್ಣೆಗೆ ಮಿಕ್ಸ್ ಮಾಡಿ, ಎಣ್ಣೆಯ ಕಲರ್ ಚೇಂಜ್ ಆಗುವವರೆಗೂ ಕುದಿಸಿ. ಈಗ ದಾಸವಾಳ ಹೂವಿನ ಎಣ್ಣೆ ರೆಡಿ. ಈ ಎಣ್ಣೆಯನ್ನು ಆರಿಸಿ, ಸೋಸಿ ಬಾಟಲಿಗೆ ತುಂಬಿಸಿಡಿ. ನೀವು ತಲೆ ಸ್ನಾನ ಮಾಡುವ 2 ಗಂಟೆ ಮುನ್ನ ಈ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ, ನಂತರ ಉಗುರು ಬೆಚ್ಚು ನೀರಿನಿಂದ ಸ್ನಾನ ಮಾಡಿ. ಸ್ನಾನಕ್ಕೆ ಕ್ಯಾಮಿಕಲ್ ಯುಕ್ತ ಶ್ಯಾಂಪೂ ಬದಲು, ಶಿಗೇಕಾಯಿ ಪುಡಿ ಬಳಸಿ ಸ್ನಾನ ಮಾಡಿದರೆ ಉತ್ತಮ.
ಇನ್ನು ಎರಡನೇಯ ಟಿಪ್ಸ್ ಅಂತಾ ಹೇಳಿದ್ರೆ, ದಾಸವಾಳದ ಹೂವನ್ನು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಗೋಮೂತ್ರದೊಂದಿಗೆ ಸೇರಿಸಿ, ಹೇರ್ ಪ್ಯಾಕ್ ಹಾಕಬೇಕು. ಇದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಕೂದಲು ಬೆಳೆಯಲು ಶುರುವಾಗುತ್ತದೆ. ಡ್ಯಾಂಡ್ರಫ್ ಸಮಸ್ಯೆ ಇದ್ದಲ್ಲಿ ಅದಕ್ಕೂ ಮುಕ್ತಿ ಸಿಗುತ್ತದೆ. ಇನ್ನು ನಿಮಗೆ ಹೇರ್ ಪ್ಯಾಕ್ ಹಾಕಿದ್ರೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರಲ್ಲಿ ವಿಚಾರಿಸಿ, ನಂತರ ಬಳಸುವುದು ಒಳಿತು.