ತಾಯಿ ಸೋನಿಯಾ ಗಾಂಧಿ ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ಹಾರಿರೋ ಸಂಸದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಪ್ರಧಾನಿ ವಿರುದ್ಧದ ಪ್ರಹಾರವನ್ನ ಮುಂದುವರಿಸಿದ್ದಾರೆ.

ಇಂದು ಪಾರ್ಲಿಮೆಂಟ್ನಲ್ಲಿ ಮಾತನಾಡಿದ ಕೇಂದ್ರ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಲಾಕ್ಡೌನ್ ಸಮಯದಲ್ಲಿ ಮೃತರಾದ ವಲಸಿಗರ ಲೆಕ್ಕ ಹಿಡಿದಿಲ್ಲ ಅಂತಾ ಹೇಳಿದ್ರು. ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ರಾಹುಲ್ ಗಾಂಧಿ , ದೇಶದಲ್ಲಿ ಕಠಿಣ ಲಾಕ್ಡೌನ್ ತಂದಂತಹ ಸಂದರ್ಭದಲ್ಲಿ ಎಷ್ಟು ಜನ ಕೆಲಸ ಕಳೆದುಕೊಂಡ್ರು ಅದೆಷ್ಟು ವಲಸಿಗರು ತಮ್ಮ ಪ್ರಾಣ ಕಳೆದುಕೊಂಡ್ರು ಅನ್ನೋದು ಮೋದಿ ಸರ್ಕಾರಕ್ಕೆ ಗೊತ್ತೇ ಇಲ್ಲ. ನೀವು ಲೆಕ್ಕ ಇಟ್ಟುಲ್ಲ ಅಂದ ಮಾತ್ರಕ್ಕೆ ಯಾರೂ ಸಾವನ್ನೊಪ್ಪಿಲ್ಲ ಅಂತಾ ಅರ್ಥ ಅಲ್ಲ. ನಾವು ಜನರು ಸತ್ತಿದ್ದನ್ನ ನೋಡಿದ್ದೇವೆ. ಆದರೆ ಇದು ಮೋದಿ ಸರ್ಕಾರದ ಮೇಲೆ ಪ್ರಭಾವವನ್ನೇ ಬೀರಿಲ್ಲ ಎಂಬ ದುಃಖವಿದೆ ಅಂತಾ ಟ್ವೀಟಾಯಿಸಿದ್ದಾರೆ.
