ಇವರು ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ.. ಬೆಂಗಳೂರು ಭಾಷೆ ಗೊತ್ತಿಲ್ಲ. ಬಣ್ಣದ ಜಗತ್ತಿನಲ್ಲಿ ಗಾಢ್ ಫಾದರ್ ಅಂತಾ ಇಲ್ವೇ ಇಲ್ಲ. ಬಟ್ ಈ ಕಲರ್ ಫುಲ್ ಜಗತ್ತಿನಲ್ಲಿ ಹೀರೋ ಆಗಿ ಮಿಂಚಬೇಕು.. ಗಾಂಧಿನಗರದಲ್ಲಿ ನನ್ನದು ಒಂದು ಕಟೌಟ್ ನಿಲ್ಲಬೇಕು ಅನ್ನೋ ಕನಸು ಹೊತ್ತು ಬಂದ ಕಲಬುರಗಿ ಯುವಕ ರಾಕೇಶ್ ಬಿರಾದರ್ ಇಂದು ಕನ್ನಡ ಚಿತ್ರರಂಗದ ಯುವನಾಯಕ ನಟ.

ರಾಕೇಶ್ ಇಂದು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹೀರೋ ಆಗಿ ಮಿಂಚುತ್ತಿದ್ದಾರೆ. ಹಾಗಂತ ರಾಕೇಶ್ ಬಣ್ಣದ ಜಗತ್ತಿನ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಅವಕಾಶಕ್ಕಾಗಿ ಇವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮನೆಯವರಿಗೆ ಇಷ್ಟವಿಲ್ಲದಿದ್ದರೂ ಒಂದೊಳ್ಳೆ ಅವಕಾಶಕ್ಕಾಗಿ ಗಾಂಧಿನಗರದ ಗಲ್ಲಿ-ಗಲ್ಲಿ ಅಲೆದಾಡಿದ್ರು. ಅಲೆದಾಟ-ಸುತ್ತಾಟದ ನಡುವೆ ರಾಕೇಶ್ ಗೆ ಅದೃಷ್ಟ ಕೈ ಬಿಡಲಿಲ್ಲ. ಧಾರಾವಾಹಿವೊಂದರ ಅವಕಾಶ ಹರಸಿ ಬಂತು. ಸಣ್ಣ ಪಾತ್ರವೊಂದರಲ್ಲಿ ಮಿಂಚಿ ಮನೆಯವರ ಪ್ರೀತಿಗೆ ಪಾತ್ರರಾದರು.

ಹೀಗಿರುವಾಗ್ಲೇ ರಿಯಾಲಿಟಿ ಶೋ, ನಾಟಕ ಹೀಗೆ ಸಿಕ್ಕ ಒಂದೊಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಹಿರಿಯ ನಿರ್ದೇಶಕ ದೊರೆ ಭಗವಾನ್ ಬಳಿ ನಟನೆ ಕಲಿತ್ರು. ನಟನೆ ತರಬೇತಿ ಪಡೆದ ರಾಕೇಶ್ ಗೆ ಸಿನಿಮಾವೊಂದರ ಅವಕಾಶ ಒಲಿದು ಬಂತು. ಅದರಂತೆ ಕನ್ನಡ ಚಿತ್ರರಂಗಕ್ಕೆ ರಾಕೇಶ್ ಲಾಂಚ್ ಮಾಡಿದ್ದು ನಿರ್ದೇಶಕ ಡಾ.ದೇವರಾಜ್ ಹಾಗೂ ನಿರ್ಮಾಪಕ ಗುರು ಬಂಡಿ. ಇವರಿಬ್ಬರ ಕಾಂಬಿನೇಷನಲ್ಲಿ ಬಂದ ‘ಸಪ್ಲಿಮೆಂಟರಿ’ ಸಿನಿಮಾ ಮೂಲಕ ನಾಯಕ ನಟನಾಗಿ ರಾಕೇಶ್ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟರು. ಅಣ್ಣನ ಸ್ಥಾನದಲ್ಲಿ ನಿಂತುಕೊಂಡು ಡಾ.ದೇವರಾಜ್ ಮತ್ತು ಗುರುಬಂಡಿ ರಾಕೇಶ್ ಪ್ರತಿಯೊಂದು ಹಂತದಲ್ಲೂ ಬೆಂಬಲವಾಗಿ ನಿಂತುಕೊಂಡ್ರು. ಇದಾದ ನಂತ್ರ ರಾಕೇಶ್ ಹೀರೋ ಆಗಿ ಮತ್ತೊಂದು ಅವಕಾಶ ಒಲಿದು ಬಂತು. ನಿರ್ದೇಶಕ ಪವನ್ ಕುಮಾರ್ ಹಾಗೂ ನಿರ್ಮಾಪಕ ಗುರು ಬಂಡಿ ನಿರ್ಮಾಣದ ಧೀರ ಸಾಮ್ರಾಟ್ ಸಿನಿಮಾದಲ್ಲಿ ರಾಕೇಶ್ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಈಗಾಗ್ಲೇ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ರಿಲೀಸ್ ಗೆ ಎದುರು ನೋಡ್ತಿದ್ದಾರೆ.



ಧೀರ ಸಾಮ್ರಾಟ್ ನಾಗಿ ತೆರೆಮೇಲೆ ಮಿಂಚಲು ರೆಡಿಯಾಗಿರೋ ರಾಕೇಶ್ ಬಿರಾದರ್ ಗೆ ಈ ಸಿನಿಮಾ ರಿಲೀಸ್ ಗೂ ಮೊದ್ಲೆ ಒಳ್ಳೆ ಒಳ್ಳೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ವೀರಪುತ್ರ ಅನ್ನೋ ಸಿನಿಮಾಕ್ಕೆ ಈಗಾಗ್ಲೇ ಸಹಿ ಹಾಕಿರೋ ಈ ಉತ್ತರ ಕರ್ನಾಟಕದ ಪ್ರತಿಭೆಯ ಮತ್ತೊಂದು ಸಿನಿಮಾದ ಮಾತುಕತೆ ಕೂಡ ನಡೆಸುತ್ತಿದ್ದಾರಂತೆ.

ಪ್ರಜ್ವಲ್ ದೇವರಾಜ್ ಅಪ್ಪಟ ಅಭಿಮಾನಿಯಾಗಿರೋ ರಾಕೇಶ್ ಡೈನಾಮಿಕ್ ಪ್ರಿನ್ಸ್ ಸಿನಿಮಾ, ದಚ್ಚು-ಕಿಚ್ಚ ಸೇರಿ ಯಾರೇ ಸ್ಟಾರ್ ನಟರ ಸಿನಿಮಾಗಳಲ್ಲಿ ಅವಕಾಶ ಬಂದ್ರು ನಟಿಸೋದಿಕ್ಕೆ ರೆಡಿಯಾಗಿದ್ದಾರೆ. ಎನೀ ವೇ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹೀರೋಗಳು ಬರ್ತಾರೆ. ಹೋಗ್ತಾರೆ. ಬಟ್ ರಾಕೇಶ್ ಆಗಲ್ಲ. ಕನ್ನಡ ಸಿನಿದುನಿಯಾದಲ್ಲಿ ಏನಾದ್ರೂ ಸಾಧಿಸಲುವ ಛಲ ಹೊತ್ತಿದ್ದು, ಮುಂದಿನ ದಿನಗಳಲ್ಲಿ ಸ್ಟಾರ್ ಹೀರೋಗಳ ಪಟ್ಟಿಯಲ್ಲಿ ಮಿಂಚಿದ್ರು ಅಚ್ಚರಿಪಡಬೇಕಿಲ್ಲ.

