ಹಾವೇರಿ:ಬಿತ್ತನೆಗೆಂದು ಹೊಲಕ್ಕೆ ಎತ್ತಗಳನ್ನು ತೆಗೆದುಕೊಂಡು ಹೋದ ಯುವ ರೈತ ಎತ್ತುಗಳನ್ನು ಪ್ರಾಣಾಪಾಯದಿಂದ ರಕ್ಷಿಸಲು ಹೋಗಿ ತನ್ನ ಪ್ರಾಣವನ್ನು ಕಳೆದುಕೊಂಡು ಹೆಣವಾಗಿ ವಾಪಾಸಾಗಿರುವ ಕಣ್ಣಿರಿನ ಕಥೆ ಇಲ್ಲಿದೆ ನೋಡಿ.
ಹೌದು ಸ್ನೇಹಿತರೆ ಮನುಷ್ಯನಿಗೆ ಸಾವು ಯಾವಾಗ ಬರುತ್ತದೆಂದು ಗೊತ್ತಾಗುವುದಿಲ್ಲ ಮನೆಯಿಂದ ಎಲ್ಲಿಗಾದರೂ ಹೋದರೆ ಕ್ಷೇಮವಾಗಿ ವಾಪಸ್ಸು ಮನೆಗೆ ಬರುತ್ತಾನೆ ಎಂಬ ನಂಬಿಕೆ ಇಲ್ಲದಂತಾಗಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದ ಸಂತೋಷ್ ಹೊಮ್ಮರಡಿ ಎನ್ನು 21 ವರ್ಷದ ಯುವ ರೈತ ಹೊಲದಲ್ಲಿ ಉಳುಮೆ ಮಾಡಲು ಎರಡು ಲಕ್ಷ ಕೊಟ್ಟು ಎತ್ತುಗಳನ್ನು ತಂದಿದ್ದರು. ಇಂದು ಬೆಳಿಗ್ಗೆ ಹೊಲವನ್ನು ಹದ ಮಾಡಲು ಎತ್ತುಗಳನ್ನು ಕರೆದುಕೊಂಡು ಹೋಗಿದ್ದರು. ಹೊಲದಲ್ಲಿ ಕೆಲಸ ಮಾಡುವಾಗ ಹೊಲದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ಎತ್ತುಗಳಿಗೆ ತಗಲಿತ್ತಿತ್ತು. ಅದರಿಂದ ಎತ್ತಗಳನ್ನು ರಕ್ಷಿಸಲು ಹೋಗಿ ವಿದ್ಯುತ್ ತಗುಲಿ ತನ್ನ ಪ್ರಾಣವನ್ನು ಬಲಿಕೊಟ್ಟಿದ್ದಾನೆ. ಸ್ಥಳಕ್ಕೆ ಬ್ಯಾಡಗಿ ಪೋಲಿಸ್ ಠಾಣ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.