Beauty tips:
ರಸಭರಿತ ಕಿತ್ತಳೆ ಹಣ್ಣನ್ನು ಸೇವನೆ ಮಾಡಿದ ನಂತರ ಸಿಪ್ಪೆಯನ್ನು ಕಸಕ್ಕೆ ಎಸೆಯಬೇಡಿ, ಸಿಪ್ಪೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ ,ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಸಿಪ್ಪೆಯಲ್ಲಿ ವಿಟಮಿನ್ ಸಿ ಅಧಿಕವಾಗಿದೆ ಈ ಕಾರಣದಿಂದ ಹೊಳೆಯುವ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.ಹಾಗಾದರೆ ಕಿತ್ತಳೆ ಸಿಪ್ಪೆಯನ್ನು ತ್ವಚೆಗೆ ಬಳಸುವುದರಿಂದ ಆಗುವ ಸೌಂದರ್ಯ ಲಾಭಗಳ ಮಾಹಿತಿ ತಿಳಿದು ಕೊಳ್ಳೋಣ.
ವಿಟಮಿನ್”ಸಿ”ಹಣ್ಣುಗಳು ನೈಸರ್ಗಿಕವಾಗಿ ಬ್ಲೀಚಿಂಗ್ ಏಜೆಂಟ್‌ಗಳಾಗಿ ಕಾರ್ಯ ನಿರ್ವಹಿಸುತ್ತದೆ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಫೇಸ್ ಪ್ಯಾಕ್‌ಗಳಲ್ಲಿ ಬಳಸುವುದರಿಂದ ಸ್ಪಷ್ಟವಾದ ಮತ್ತು ಯೌವನದಿಂದ ಕೂಡಿದ ಚರ್ಮದ ಕಾಂತಿಯನ್ನು ನೀವು ಪಡೆಯಬಹುದು.ಮೊಡವೆ ಮತ್ತು ಎಣ್ಣೆಯುಕ್ತ ಚರ್ಮಕ್ಕೆ ಚಿಕಿತ್ಸೆ ನೀಡಲು ಕಿತ್ತಳೆಯ ಸಿಪ್ಪೆಗಳು ಸಹಕಾರಿಯಾಗಿದೆ. ಅಲ್ಲದೆ, ಚರ್ಮದ ಮೇಲಿರುವ ಕಲೆಗಳನ್ನು ಹೋಗಲಾಡಿಸಲು ಹಾಗೂ ಪಿಗ್ಮೆಂಟೇಶನ್‌ಗೆ ಇದು ಸಹಕಾರಿಯಾಗಿದೆ .ಕಿತ್ತಳೆ ಹಣ್ಣಿನ ಸಿಪ್ಪೆ ಬಹಳಷ್ಟು ಉತ್ತಮ ಮೂಲವನ್ನು ಹೊಂದಿದ್ದು, ಚರ್ಮದ ನೈಸರ್ಗಿಕ ಬಣ್ಣವನ್ನು ಪುನಃಸ್ಥಾಪಿಸಲು ಸಹಾಯಕಾರಿಯಾಗಿದೆ ,ನಿಮ್ಮ ಚರ್ಮವನ್ನು ಕಿತ್ತಳೆಯ ಸಿಪ್ಪೆಯ ಪುಡಿಯು ಬಿಳುಪಾಗಿಸುತ್ತದೆ.ವಾರಕ್ಕೆ 2 ಅಥವಾ 3 ಬಾರಿ ಕಿತ್ತಳೆ ಸಿಪ್ಪೆಯ ಪುಡಿಯ ಫೇಸ್ ಪ್ಯಾಕ್ ಬಳಕೆ ಮಾಡುವುದರಿಂದ ಯೌವನಯುತವಾದ ಚರ್ಮ ಕಾಂತಿಯನ್ನು ಪಡೆಯಬಹುದು .
ಇದು ಚರ್ಮದ ಕಾಲಜನ್ ಮತ್ತು ಎಲಾಸ್ಟಿನ್ ಅನ್ನು ರೂಪಿಸಲು ಉತ್ತೇಜಿಸುತ್ತದೆ. ಕಿತ್ತಳೆ ಸಿಪ್ಪೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ, ಇದು ನಿಮಗೆ ಮೊಡವೆಗಳನ್ನು ರೂಪಿಸುವ ಬ್ಯಾಕ್ಟೀರಿಯಾಗಳ ಮೇಲೆ ಹೋರಾಡುತ್ತದೆ. ಮೊಡವೆಗಳಿಂದ ಉಂಟಾದ ಕಲೆಗಳಿಗೆ ಗುಡ್ ಬೈ ಹೇಳುತ್ತದೆ. ಹಾಗಾಗಿ ಕಿತ್ತಳೆ ಹಣ್ಣು ತಿಂದ ನಂತರ ಸಿಪ್ಪೆ ಎಸೆಯದೆ ಸಂಗ್ರಹಿಸಿ.
ಹಾಗಾದರೆ ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಯನ್ನು ಹೇಗೆ ತಯಾರಿಸಬೇಕು…?
ಕಿತ್ತಳೆ ಹಣ್ಣು ತಿಂದ ಬಳಿಕ ಸಿಪ್ಪೆಯನ್ನು ಎಸೆಯದೆ ಸಂಗ್ರಹಿಸಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಸುಮಾರು 1ವಾರಗಳ ಕಾಲ ಒಣಗಿಸಿ ಅದು ಸಂಪೂರ್ಣವಾಗಿ ಒಣಗಿದಾಗ ,ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡು ಆ ಪುಡಿಯನ್ನು ಒಂದು ಬಾಕ್ಸ್‌ನಲ್ಲಿ ಶೇಖರಿಸಿಡಿ.
ನಂತರ 1ಚಮಚ ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಯನ್ನು ತೆಗೆದುಕೊಂಡು ,ಕಾಲ್ ಚಮಚ ಹರಿಶಿಣ, 2 ರಿಂದ 3 ಚಮಚ ಮೊಸರು ಬೆರಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.ಈಮಿಶ್ರಣವನ್ನು ನಿಮ್ಮ ಕುತ್ತಿಗೆ ಹಾಗೂ ತ್ವಚೆಗೆ ಹಚ್ಚಿಕೊಳ್ಳಿ. 15 ರಿಂದ 20 ನಿಮಿಷಗಳ ನಂತರ ತಣ್ಣೀರಿನಲ್ಲಿ ತೊಳೆಯಿರಿ.ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ 2 ರಿಂದ 3ಬಾರಿ ಬಳಸಿ.ಇದರಿಂದ ನಿಮ್ಮ ಚರ್ಮಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ, ಬದಲಾಗಿ ಯೌವನ ಮತ್ತು ಆರೋಗ್ಯಕರವಾದ ಚರ್ಮ ಸೌಂದರ್ಯವನ್ನು ಪಡೆಯುತ್ತೀರಿ.