Friday, September 12, 2025

Latest Posts

ಬ್ಯಾಂಗಲ್‌ ಬಂಗಾರಿಗೆ ಯುವ-ಅಮೃತ ಸ್ಟೆಪ್ಸ್‌! : ಮಳೆಯಲ್ಲೂ ಕಿಚ್ಚೆಬ್ಬಿಸಿದ ಯುವ ಸಂಭ್ರಮ

- Advertisement -

ನಾಡಹಬ್ಬ ದಸರಾ ಸಂಭ್ರಮದ ಅಂಗವಾಗಿ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ತುಂತುರು ಮಳೆಯ ನಡುವೆಯೇ ಯುವ ಸಂಭ್ರಮ ಅದ್ಧೂರಿಯಾಗಿ ಜರಗಿತು. ಇದು ಸಾಂಸ್ಕೃತಿಕ ದಸರೆಯ ವೈಭವಕ್ಕೆ ಸುಂದರ ಮುನ್ನುಡಿಯಾಯಿತು.

ಯುವ ಸಮುದಾಯದಿಂದ ಕಂಗೊಳಿಸಿದ್ದ ವೇದಿಕೆಗೆ ಚಲನಚಿತ್ರ ನಟರು ಯುವ ರಾಜ್‌ಕುಮಾರ್ ಮತ್ತು ಅಮೃತಾ ಅಯ್ಯಂಗಾರ್ ಕಾಲಿಟ್ಟ ಕ್ಷಣದಲ್ಲಿ ಶಿಳ್ಳೆ–ಚಪ್ಪಾಳೆಗಳ ಘೋಷಣೆ ಮುಗಿಲು ಮುಟ್ಟಿತು. ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಸ್ಪರ್ಧಿಗಳು ಮತ್ತು ಪ್ರೇಕ್ಷಕರಾದ ಯುವಜನತೆ ಹರ್ಷೋದ್ದಾರದಿಂದ ಮೈಮರೆತರು.

‘ಬ್ಯಾಂಗಲ್ ಬಂಗಾರಿ’ ಹಾಡಿಗೆ ಇಬ್ಬರೂ ನೀಡಿದ ನೃತ್ಯ ಪ್ರದರ್ಶನವೇ ಆ ಕ್ಷಣದ ಸಂಚಲನ. ಮಳೆಯ ಸಿಂಚನದಲ್ಲೇ ಯುವಕರ ಕುಣಿತವೂ ಉತ್ಸಾಹವೂ ಹೆಚ್ಚಾಯ್ತು. ಶಾಲಾ–ಕಾಲೇಜು ದಿನಗಳಲ್ಲಿ ಇದೇ ಬಯಲು ರಂಗಮಂದಿರದಲ್ಲಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ನೃತ್ಯ ಮಾಡಿದ್ದೆ. ಇಂದು ಇದೇ ವೇದಿಕೆಯಲ್ಲಿ ನಿಮ್ಮ ಮುಂದೆ ಮಾತನಾಡುತ್ತಿರುವುದು ನನ್ನಿಗೆ ಅಪೂರ್ವ ಕ್ಷಣ ಎಂದು ಅಮೃತ ಅಯ್ಯಂಗಾರ್‌ ಹೇಳಿದರು.

ಮೈಸೂರು ನನಗೆ ಹತ್ತಿರದ ಊರು. ಅರಮನೆ ಕಂಡಾಗ ಕುವೆಂಪು, ನಾಲ್ವಡಿ, ಸರ್ ಎಂ.ವಿ. ನೆನಪಾಗುತ್ತಾರೆ. ನಮ್ಮ ನಾಡಿನ ಕಲೆ–ಸಂಸ್ಕೃತಿಯನ್ನು ಸಂಭ್ರಮಿಸುವ ಹಬ್ಬವೇ ದಸರಾ. ಅದಕ್ಕೆ ಚೈತನ್ಯ ತುಂಬುವುದು ಯುವ ಸಂಭ್ರಮವೇ. ಈ ವೇದಿಕೆಯೇ ನಿಮ್ಮದು ಎಂದು ಯುವ ರಾಜ್‌ಕುಮಾರ್ ಯುವಕರನನು ಹುರಿದುಂಬಿಸಿದರು.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss