Political News: ಬಿಜೆಪಿ ಶಾಸಕ, ಸಿನಿಮಾ ನಿರ್ಮಾಪಕ ಮುನಿರತ್ನ ವಿರುದ್ಧ ರೇಪ್ ಕೇಸ್ ಮತ್ತು ಜೀವ ಬೆದರಿಕೆ ಕೇಸ್ ಅಡಿಯಲ್ಲಿ ಜೈಲು ಸೇರಿದ್ದು, ಈ ಕೇಸ್ ತನಿಖೆ ಬಗ್ಗೆ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ.
ಇನ್ನು ಏಡ್ಸ್ ಇಂಜೆಕ್ಷನ್ ಬಳಸಿದ್ದಾರೆ ಎಂದು ಮುನಿರತ್ನ ಮೇಲೆ ಆರೋಪವಿದ್ದು, ಈ ಕಾರಣಕ್ಕೆ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು, ಮುನಿರತ್ನ ಹೆಸರಿಗೆ ಸಿಮೆಂಟ್ ಬಳಿದು ಆಕ್ರೋಶ ಹೊರಹಾಕಿದ್ದಾರೆ. ಮೋರಿ ಸ್ಲ್ಯಾಬ್ ಮೇಲಿದ್ದ ಮುನಿರತ್‌ನ ಹೆಸರಿನ ಮೇಲೆ ಸಿಮೆಂಟ್ ಬಳಿದಿದ್ದಾರೆ.
ಕೆಲವು ಕಾಂಗ್ರೆಸ್ ಕಾರ್ಯಕರ್ತರು, ಮುನಿರತ್ನ ವಿರುದ್ಧ ಧಿಕ್ಕಾರ ಕೂಗಿದ್ದು, ಮುನಿರತ್ನ ಹೆಸರಿರುವ ಮೋರಿ ಸ್ಲ್ಯಾಬ್ ಗಳನ್ನು ಸಿಮೆಂಟ್ ಮೂಲಕ ಕವರ್ ಮಾಡಿ, ತಮ್ಮ ಆಕ್ರೋಶ ತೋರಿಸಿದ್ದಾರೆ.
ಶಾಸಕ ಮುನಿರತ್ನ ಸೇರಿದಂತೆ ಒಟ್ಟು 7 ಆರೋಪಿಗಳ ವಿರುದ್ಧ ಬುಧವಾರ ಸಂಜೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಕಗ್ಗಲೀಪುರದ ಖಾಸಗಿ ರೆಸಾರ್ಟ್ ನಲ್ಲಿ ನನ್ನ ಮೇಲೆ ಅತ್ಯಾಚಾರ ನಡೆದಿರುವುದಾಗಿ 40 ವರ್ಷ ವಯಸ್ಸಿನ ಮಹಿಳೆಯೊಬ್ಬರು ದೂರು ನೀಡಿದ್ದರು. ಆ ಮಹಿಳೆ ನೀಡಿದ ದೂರು ಅನ್ವಯಿಸಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ದೂರಿನಲ್ಲಿ ಮುನಿರತ್ನ ನಾಯ್ಡು (ಎ1), ವಿಜಯ್ ಕುಮಾರ್ (ಎ2), ಸುಧಾಕರ (ಎ3), ಕಿರಣ್ ಕುಮಾರ್ (ಎ4), ಲೋಹಿತ್ ಗೌಡ (ಎ5), ಮಂಜುನಾಥ (ಎ6), ಲೋಕಿ (ಎ7) ಎಂದು ಉಲ್ಲೇಖಿಸಲಾಗಿತ್ತು. ಸದ್ಯ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಎಸ್‌ಐಟಿ ರಚನೆ ಮಾಡಿ ಆ ಮೂಲಕ ತನಿಖೆ ಚುರುಕುಗೊಳಿಸಿದೆ.