Bollywood News: ಹಿಂದಿಯ ಪ್ರಸಿದ್ಧ ಯುಟ್ಯೂಬ್ ಚಾನೆಲ್ ಆಗಿರುವ ಬಿಯರ್ ಬೈಸೆಪ್ಸ್ ಎಂಬ ಚಾನೆಲ್ ಹ್ಯಾಕ್ ಆಗಿದೆ. ರಣ್ಬೀರ್ ಅಲ್ಲಾಬಾಡಿಯಾ ಎಂಬ ಯುಟ್ಯೂಬರ್ ಈ ಪಾಡ್‌ಕಾಸ್ಟ್ ಚಾನೆಲ್ ಆರಂಭಿಸಿದ್ದು, ಇದರಲ್ಲಿ ಮಹಾರಾಷ್ಟ್ರ ಸಿಎಂ ಆಗಿರುವಂಥ ಏಕನಾಥ್ ಶಿಂಧೆಯಿಂದ ಹಿಡಿದು, ದೊಡ್ಡ ದೊಡ್ಡ ಬಾಲಿವುಡ್ ಸೆಲೆಬ್ರಿಟಿಸ್. ರಾಜ ವಂಶಸ್ಥರೆಲ್ಲ ಸಂದರ್ಶನ ನೀಡಿದ್ದಾರೆ.
ಆದರೆ ಈ ಚಾನೆಲ್ ಇದೀಗ ಹ್ಯಾಕ್ ಆಗಿದ್ದು, ಹ್ಯಾಕರ್ಸ್ ಯೂಟ್ಯೂಬ್ ಹೆಸರನ್ನೂ ಬದಲಾಯಿಸಿದ್ದಾರೆ. ಅಲ್ಲದೇ ಅದರಲ್ಲಿದ್ದ ಎಲ್ಲ ವೀಡಿಯೋ ಡಿಲೀಟ್ ಮಾಡಿದ್ದಾರೆ. ರಣವೀರ್‌ಗೆ ಈ ವರ್ಷ ಬೆಸ್ಟ್ ಯೂಟ್ಯೂಬರ್ ಎಂದು ಪ್ರಧಾನಿ ನರೇಂದ್ರ ಮೋದಿಯವರು ಪ್ರಶಸ್ತಿ ನೀಡಿದ್ದರು. ಭಾರತದ ಸೆಲೆಬ್ರಿಟಿ ಯೂಟ್ಯೂಬರ್ಸ್‌ನಲ್ಲಿ ರಣವೀರ್ ಕೂಡ ಒಬ್ಬರಾಗಿದ್ದು, ಈ ಚಾನೆಲ್ 1 ಕೋಟಿಗೂ ಅಧಿಕ ಸಬ್‌ಸ್ಕ್ರೈಬರ್ಸ್ ಹೊಂದಿತ್ತು.
ರಣವೀರ್ ಅವರ ಚಾನೆಲ್‌ನನ್ನು ಟೆಸ್ಲಾ ಎಂದು ಬದಲಾಯಿಸಲಾಗಿದೆ. ಇವರ ಇನ್ನೊಂದು ಚೆನಲ್ ಕೂಡ ಹ್ಯಾಕ್ ಆಗಿದ್ದು, ಅದರ ಹೆಸರನ್ನು ಎಲಾನ್ ಟ್ರಂಪ್ ಟೆಸ್ಲಾ ಎಂದು ಬದಲಾಯಿಸಲಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಣವೀರ್, ತಮ್ಮ ಚಾನೆಲ್ ಹ್ಯಾಕ್ ಆಗಿರುವ ಬಗ್ಗೆ ಹೇಳಿದ್ದು, ನೀವೆಲ್ಲರೂ ತಾಳ್ಮೆಯಿಂದ ಬೆಂಬಲಿಸಬೇಕು ಎಂದು ಕೇಳಿಕೊಂಡಿದ್ದಾರೆ.
ರಣವೀರ್ ಸಾಮಾನ್ಯ ಯೂಟ್ಯೂಬರ್ ಏನಲ್ಲ. ಇವರು 7 ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. 60 ಕೋಟಿ ರೂಪಾಯಿ ಆಸ್ತಿಯ ಒಡೆಯನಾಗಿದ್ದಾರೆ. ಇನ್ನು ಇವರ ಯೂಟ್ಯೂಬ್ ಚಾನೆಲ್ ಹ್ಯಾಕ್ ಆದ ಬಗ್ಗೆ ವೀಡಿಯೋ ಮಾಡಿರುವ ಬಾಕಿ ಯೂಟ್ಯೂಬರ್ಸ್, ಇಷ್ಟು ಪ್ರಸಿದ್ಧ ವ್ಯಕ್ತಿಯ ಚಾನೆಲ್ ಹ್ಯಾಕ್ ಆಗಿದೆ ಎಂದರೆ, ಇನ್ನು ನಮ್ಮ ಚಾನೆಲ್ ಗತಿ ಏನು ಎಂದು ಭಯಪಟ್ಟಿದ್ದಾರೆ.