National News:
ಜನಪ್ರಿಯ ಥಾಯ್ಲೆಂಡ್ ಯೂಟ್ಯೂಬರ್ ಒಬ್ಬರು ತನ್ನ ಸಾವಿರಾರು ಅನುಯಾಯಿಗಳಿಗೆ ವಿದೇಶಿ ವಿನಿಮಯ ವ್ಯಾಪಾರ ಹಗರಣದ ಮೂಲಕ ಸುಮಾರು 55 ಮಿಲಿಯನ್ ಡಾಲರ್ ವಂಚನೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಹಣ ಹೂಡಿಕೆಯ ಮೇಲೆ ಆಕರ್ಷಕ ಬಡ್ಡಿ ನೀಡುವುದಾಗಿ ಹಾಗೂ ಹೆಚ್ಚು ಆದಾಯದ ಭರವಸೆ ನೀಡಿ ತನ್ನ ಫಾಲೋವರ್‌ಗಳಿಗೆ ಈಕೆ ವಂಚಿಸಿದ್ದಾಳೆ ಎಂದು ವರದಿಯಾಗಿದೆ.
ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭವಿಷ್ಯದ ವಿದೇಶಿ ವಿನಿಮಯ ವ್ಯಾಪಾರಿಗಳಿಗಾಗಿ ಖಾಸಗಿ ಕೊರ್ಸ್‌ಗಳ ಬಗ್ಗೆ ಜಾಹೀರಾತುಗಳನ್ನು ನೀಡಿದ್ದಾಳೆ. ಅಲ್ಲದೆ, ಈ ವ್ಯಾಪಾರದಿಂದ ನನಗಾದ ಲಾಭಗಳು ಎಂದು ಹೇಳಿಕೊಂಡು ಆಕೆ ಅನೇಕ ಫೋಟೋಗಳನ್ನು ಪೋಸ್ಟ್ ಮಾಡಿದ್ದಳು ಎಂದು ತಿಳಿದುಬಂದಿದೆ. ನಂತರ ಈ ಪೋಸ್ಟ್‌ಗಳನ್ನು ನಂಬಿದ 6,000 ಕ್ಕೂ ಹೆಚ್ಚು ಜನರು ಹೂಡಿಕೆ ಮಾಡಲು ನಟ್ಟಮನ್ ಖೊಂಗ್‌ಚಾಕ್‌ಗೆ ಹಣವನ್ನು ನೀಡಿದರು ಎಂದು ಡಜನ್‌ಗಟ್ಟಲೆ ಸಂತ್ರಸ್ತರಿಗೆ ಥಾಯ್ ಪೋಲಿಸ್‌ನಲ್ಲಿ ದೂರುಗಳನ್ನು ಸಲ್ಲಿಸಲು ಸಹಾಯ ಮಾಡಿದ ವಕೀಲರನ್ನು ಉಲ್ಲೇಖಿಸಿ ನೇಷನ್ ಪತ್ರಿಕೆ ವರದಿ ಮಾಡಿದೆ.
ಸೈಬರ್ ಕ್ರೈಮ್ ಇನ್ವೆಸ್ಟಿಗೇಶನ್ ಬ್ಯೂರೋದ) ಪೊಲೀಸ್ ಅಧಿಕಾರಿ ವಟ್ಟಾನಾ ಕೇತುಂಪೈ ಪ್ರಕಾರ, ಕಳೆದ ವಾರ ಇಂಟರ್ನೆಟ್ ಅಪರಾಧಗಳಲ್ಲಿ ಭಾಗಿಯಾಗಿರುವ ಥೈಲ್ಯಾಂಡ್ ಪೊಲೀಸ್ ಘಟಕವು ನಟ್ಟಮನ್ ವಿರುದ್ಧ ವಂಚನೆಗಾಗಿ ಬಂಧನ ವಾರಂಟ್ ಹೊರಡಿಸಿದೆ.
ಭಾರತದ ಜಿಡಿಪಿ ಬೆಳವಣಿಗೆ ಏಪ್ರಿಲ್-ಜೂನ್ನಲ್ಲಿ ಶೇ.13.5ಕ್ಕೆ ಏರಿಕೆಯಾಗಿದೆ – ಕೇಂದ್ರ ಸರ್ಕಾರದ ದತ್ತಾಂಶ