- Advertisement -
ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಸೂಪರ್ ಸ್ಟಾರ್ ಸಿನಿಮಾ ಮೂಲಕ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿರೋದು ಗೊತ್ತೇ ಇದೆ. ಕಟ್ಟುಮಸ್ತಾದ ದೇಹ, ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿರುವ ನಿರಂಜನ್ ಗೆ ಜೋಡಿಯಾಗಿ ಬಾಲಿವುಡ್ ಗ್ಲಾಮರ್ ಬ್ಯೂಟಿ ಎಂಟ್ರಿ ಕೊಟ್ಟಿದ್ದಾರೆ. ಮಾಡೆಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಜಾರಾ ಯಸ್ಮಿನ್ ಸೂಪರ್ ಸ್ಟಾರ್ ಸಿನಿಮಾದಲ್ಲಿ ಹೆಜ್ಜೆ ಹಾಕಲಿದ್ದಾರೆ.

ಈಗಾಗ್ಲೇ ಹಲವು ಮ್ಯೂಸಿಕ್ ವಿಡಿಯೋ, ಪ್ರತಿಷ್ಟಿತ ಸಂಸ್ಥೆಯ ಜಾಹೀರಾತುಗಳು, ಸಿನಿಮಾಗಳಲ್ಲಿ ನಟಿಸಿರುವ ಜಾರಾ ಯಸ್ಮಿನ್ ಸೂಪರ್ ಸ್ಟಾರ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ. ಇನ್ನೂ ಸಿನಿಮಾ ನಿರ್ದೇಶಕ ರಮೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

- Advertisement -