ಜಪಾನ್ ಆಡಳಿತ ಪಕ್ಷದ ಅಧ್ಯಕ್ಷ ಯೋಶಿಹಿಡೆ ಸುಗಾ ಜಪಾನ್ ದೇಶದ ಪ್ರಧಾನಿಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಬರೋಬ್ಬರಿ 8 ವರ್ಷಗಳ ಬಳಿಕ ಜಪಾನ್ನಲ್ಲಿ ಹೊಸ ಪ್ರಧಾನಿಯ ಆಯ್ಕೆಯಾಗಿದೆ.

ಎರಡು ದಿನಗಳ ಹಿಂದಷ್ಟೇ ಸುಗಾ ಲಿಬರಲ್ ಡೆಮೋಕ್ರಟಿಕ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ವೇಳೆಯೇ ಅವರು ಜಪಾನ್ ಪ್ರಧಾನಿಯಾಗೋದು ಕನ್ಫರ್ಮ್ ಆಗಿತ್ತು. ಆದರೆ ಅಧಿಕೃತವಾಗಿ ಸುಗಾ ಜಪಾನ್ನ ಪ್ರಧಾನಿಯಾಗಿದ್ದಾರೆ.
ಸರಿ ಸುಮಾರು 8 ವರ್ಷಗಳ ಕಾಲ ಜಪಾನ್ನ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಶಿಂಜೋ ಅಬೆ, ಅನಾರೋಗ್ಯ ಕಾರಣದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಹೀಗಾಗಿ ಈ ಸ್ಥಾನಕ್ಕೆ ಇದೀಗ ಶಿಂಜೋ ಅಬೆಯವರ ಬಲಗೈ ಬಂಟನಂತಿದ್ದ 71 ವರ್ಷದ ಸುಗಾ ನೇಮಕವಾಗಿದ್ದಾರೆ.

ಫೋನಿನ ಮೂಲಕವೇ ನಿಮ್ಮ ಸಮಸ್ಯೆಗೆ ಪರಿಹಾರ
7483025648




