ಡಿ ಬಾಸ್ ಮನೆ ಮುಂದೆ ಅಭಿಮಾನೋತ್ಸವ
ಕ್ರಾಂತಿ’ ಸಿನಿಮಾ ಬಿಡುಗಡೆಗೆ 2 ದಿನ ಮಾತ್ರ ಬಾಕಿಯಿದೆ. ಕ್ರಾಂತಿ’ ಚಿತ್ರದ ಸಾಂಗ್ ರಿಲೀಸ್‌ಗಾಗಿ ಚಿತ್ರತಂಡ ರಾಜ್ಯದ 4 ಜಿಲ್ಲೆಗಳಿಗೆ ಭೇಟಿ ನೀಡಿತ್ತು. ಎಲ್ಲಾ ಕಡೆ ಅಭಿಮಾನಿಗಳು ಸಾಗರದಂತೆ ಜಮಾಯಿಸಿ ಚಿತ್ರಕ್ಕೆ ಬೆಂಬಲ ಸೂಚಿಸಿದ್ದರು.
ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.
ಸ್ಯಾಂಡಲ್‌ವುಡ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಬಹಳ ದೊಡ್ಡ ಅಭಿಮಾನಿ ಬಳಗ ಇದೆ.ಪ್ರತಿದಿನ ಅಭಿಮಾನಿಗಳು ದರ್ಶನ್ ನೋಡಲು ನಗರದ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸಕ್ಕೆ ಬರುತ್ತಾರೆ. ಗಂಟೆಗಟ್ಟಲೆ ಕಾಯುತ್ತಾರೆ. ತಮ್ಮ ಹೊಸ ಕಾರ್, ಬೈಕ್ ತಂದು ಆಟೋಗ್ರಾಫ್ ತೆಗೆದುಕೊಂಡು ಹೋಗುತ್ತಾರೆ
ಕಳೆದೆರಡು ದಿನಗಳಿಂದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ದರ್ಶನ್ ನಿವಾಸಕ್ಕೆ ಬರುತ್ತಿದ್ಧಾರೆ.ಕಿಲೋ ಮೀಟರ್ ದೂರಕ್ಕೆ ಸಾಲು ನಿಂತು ಕಾಯುತ್ತಿದ್ದಾರೆ. ದರ್ಶನ್ ಕೂಡ ಅಭಿಮಾನಿಗಳಿಗೆ ಬೇಸರ ಮಾಡದೇ ಎಲ್ಲರನ್ನು ಭೇಟಿ ಮಾಡಿ, ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.