- Advertisement -
ಲೋಕೋಪಯೋಗಿ ಇಲಾಕೆಯ ಅಧಿಕಾರಿಗಳನ್ನು ಟೆಂಡರ್ ವಿಷಯವಾಗಿ ಸಂಸದ ಡಾ,ಉಮೇಶ್ ಜಾಧವ್ ತರಾಟೆಗೆ ತೆಗೆದುಕೊಂಡಿದ್ದಾರೆ .
ಲೋಕೋಪಯೋಗಿ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿ ನಿಯಮ ಉಲ್ಲಂಘಿಸಿ ಟೆಂಡರ್ ಕರೆಯಲಾಗುತ್ತಿದೆ. ಇದೆಲ್ಲ ನೋಡಿದರೆ ಲೋಕೋಪಯೋಗಿ ಇಲಾಖೆ ಪ್ರೈವೇಟ್ ಕಂಪನಿ ಹಂಗ ಕೆಲಸಾ ಮಾಡುತ್ತಿದೆಯಾ? ಎಂದು ಸಂಸದ ಡಾ. ಉಮೇಶ ಜಾಧವ್ ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೇಂದ್ರದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿ ಎಲ್ಲ ಟೆಂಡರ್ ಗಳ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದರು.
- Advertisement -