- Advertisement -
state news:
ಬೆಂಗಳೂರಲ್ಲಿ ಮಂಡ್ಯ ಮೂಲದ ಯುವಕ ಶ್ರೀಧರ್ ಎಂಬಾತನನ್ನು ಮತಾಂತರ ಹಾಗೂ ಕತ್ನಾ ಮಾಡಲಾಗಿದೆ ಎಂಬ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಹುಬ್ಬಳ್ಳಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ಬನಶಂಕರಿ ಠಾಣೆಗೆ ವರ್ಗಾವಣೆಯಾಗಿತ್ತು. ಕತ್ನಾ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ನಿನ್ನೆ ರಾತ್ರಿ(ಅ.12) ನಯಾಜ್ ಪಾಷಾ, ಹಾಜಿ ಸಾಬ್ ಬಂಧಿಸಲಾಗಿತ್ತು ಇಂದು (ಅಕ್ಟೋಬರ್. 13) ತಮಿಳುನಾಡಿನಲ್ಲಿ ಮಾಜಿ ಕಾರ್ಪೊರೇಟರ್ ಅನ್ಸರ್ ಪಾಷಾನನ್ನು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸರು ಈ ಹಿಂದೆ ಅತಾವುರ್ ರೆಹಮಾನ್, ಶೊಯೇಬ್ನನ್ನ ಬಂಧಿಸಿದ್ದರು. ಈ ಮೂಲಕ ಇದುವರೆಗೆ ಐವರ ಬಂಧನವಾದಂತಾಗಿದೆ.
- Advertisement -