Friday, April 25, 2025

Latest Posts

ಶೋಕದಲ್ಲಿರುವ ಭಾರತೀಯರನ್ನ ಮತ್ತಷ್ಟು ಕೆರಳಿಸಿದ ಪಾಪಿಗಳು..! : ಪಾಕ್‌ ಹೈಕಮಿಷನ್‌ನಲ್ಲಿ ಕೇಕ್‌ ಕಟ್‌ ಮಾಡಿದ್ರಾ ದುಷ್ಟರು..?

- Advertisement -

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ 26 ಭಾರತೀಯರನ್ನು ಪಾಕಿಸ್ತಾನದ ಉಗ್ರರು ಬಲಿ ಪಡೆದಿದ್ದಾರೆ. ಆದರೆ ಈ ಆಘಾತ, ನೋವಿನಲ್ಲಿರುವ ಇಡೀ ಭಾರತೀಯರನ್ನು ಮತ್ತಷ್ಟು ಕೆರಳಿಸುವ ಕೆಲಸಕ್ಕೆ ಪಾಕಿಸ್ತಾನ ಮುಂದಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್‌ ಕಚೇರಿಯಲ್ಲಿ ಕೇಕ್‌ ಕಟ್‌ ಮಾಡಿ ಸಂಭ್ರಮಿಸಿತಾ ಎನ್ನುವ ಪ್ರಶ್ನೆಗಳು ಮೂಡುತ್ತಿವೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋ..!

ಇನ್ನೂ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಇದರಿಂದ ಭಾರತೀಯರು ಮತ್ತಷ್ಟು ಆಕ್ರೋಶಿತರಾಗುವಂತೆ ಆಗಿದೆ. ಕಳೆದ ಬುಧವಾರವಷ್ಟೇ ಕೇಂದ್ರ ಸರ್ಕಾರ ಐದು ಮಹತ್ವದ ನಿರ್ಧಾರಗಳನ್ನು ಕೈಗೊಂಡಿತ್ತು. ಅದರಲ್ಲಿ ಪಾಕಿಸ್ತಾನದ ಹೈಕಮಿಷನ್‌ ಅನ್ನು ಬಂದ್‌ ಮಾಡುವಂತೆಯೂ ಸೂಚಿಸಿತ್ತು. ಆದರೆ ಇಂದು ಪಾಕಿಸ್ತಾನದ ಈ ಹೈಕಮಿಷನ್‌ ಕಚೇರಿಯಲ್ಲಿ ನಿಯೋಜಿತರಾಗಿದ್ದ ಸಿಬ್ಬಂದಿಯೊಬ್ಬ ಕಚೇರಿಯ ಒಳಗೆ ಕೇಕ್‌ ತೆಗೆದುಕೊಂಡು ಹೋಗುತ್ತಿದ್ದಾಗ ಮಾಧ್ಯಮಗಳಿಗೆ ಸಿಕ್ಕಿಹಾಕಿಕೊಂಡಿದ್ದಾನೆ.

ಪ್ರತಿಕ್ರಿಯೆಗೆ ನಿರಾಕರಣೆ..

ಬಳಿಕ ಈ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಯಾವುದೇ ಉತ್ತರವನ್ನು ನೀಡದೇ ಆತ ಮುಂದೆ ಹೋಗಿದ್ದಾನೆ. ಎಷ್ಟೇ ಕೇಳಿದರೂ ಆತ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾನೆ. ಈ ಮೂಲಕ ಪಹಲ್ಗಾಮ್‌ನಲ್ಲಿ ನಡೆದ ದಾಳಿಯನ್ನು ಸಂಭ್ರಮಿಸಲು ಪಾಕಿಸ್ತಾನ ಮುಂದಾಯಿತೇ..? ಎನ್ನುವ ಹಲವಾರು ಪ್ರಶ್ನೆಗಳು ಹುಟ್ಟುಕೊಂಡಿವೆ. ಅಲ್ಲಿ ಬೇರೆ ಏನಾಗಿದ್ದರೂ ಸಹ ಆತ ಪ್ರತಿಕ್ರಿಯೆ ನೀಡುತ್ತಿದ್ದನೇನೋ.. ಆದರೆ ಯಾವುದನ್ನೂ ಹೇಳದೆ ಇರುವುದು ಪಾಪಿಸ್ತಾನದ ನಡೆಯ ಕುರಿತು ಅನುಮಾನ ಮೂಡಿಸಿದೆ. ಅಲ್ಲದೆ ನವದೆಹಲಿಯಲ್ಲಿ ಪಾಕಿಸ್ತಾನದ ಹೈಕಮಿಷನ್‌ ಕಚೇರಿಯ ಎದುರು ದೆಹಲಿಯಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ.

ಭದ್ರತೆ ವಾಪಸ್..!

ಜೊತೆಗೆ ಪಾಕಿಸ್ತಾನದ ರಾಯಭಾರ ಕಛೇರಿಗೆ ನೀಡಿದ್ದ ಭದ್ರತೆಯನ್ನ ಭಾರತ ಸರ್ಕಾರ ವಾಪಾಸ್ ಪಡೆದಿದ್ದು. ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಪಾಕ್​ನ ನಾಗರಿಕರಿಗೆ ದೇಶ ತೊರೆಯಲು 48 ಗಂಟೆಗಳ ಗಡುವು ನೀಡಲಾಗಿದೆ. ಅಟಾರಿ-ವಾಘಾ ಗಡಿಯನ್ನು ಬಂದ್ ಮಾಡಲಾಗಿದೆ. ಜೊತೆಗ ಪಾಕಿಸ್ತಾನದ ಇಸ್ಲಾಮಾಭಾದ್​ನಲ್ಲಿರುವ ಭಾರತದ ರಾಯಭಾರಿಗಳನ್ನು ವಾಪಾಸ್ ಪಡೆಯಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಭಾರತ ಸರ್ಕಾರದ ಈ ನಡೆಯಿಂದ ಪಾಕಿಸ್ತಾನಕ್ಕೆ ಆತಂಕ ಶರುವಾಗಿದೆ. ಹತಾಶವಾಗಿ ಭಾರತದ ವಿರುದ್ಧ ಈಗ ಬೆಂಕಿಯುಗುಳುತ್ತಿದೆ.

- Advertisement -

Latest Posts

Don't Miss