Thursday, March 13, 2025

Latest Posts

ಸಾಹುಕಾರ್ ಗೈರಿನಲ್ಲಿ ಸಾಹೇಬರ ಮೀಟಿಂಗ್

- Advertisement -

ಬೆಳಗಾವಿ: ಉತ್ತರ ಕರ್ನಾಟಕದ ಜನ-ಜಾನುವಾರುಗಳ ಕುಡಿಯೋ ನೀರಿನ ಬವಣೆ ತಪ್ಪಿಸಲು ಮಹಾರಾಷ್ಟ್ರದ ಕೊಯ್ನಾದಿಂದ ಕರ್ನಾಟಕದ ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಬಿಡುಗಡೆ ಸಂಬಂಧ ರಾಜ್ಯ ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಬೆಳಗಾವಿಯಲ್ಲಿ ಇಂದು ಸಭೆ ನಡೆಸಿದರು. ಸಭೆಯಲ್ಲಿ ಬೆಳಗಾವಿ ಜಿಲ್ಲೆ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಚಿವ ಆರ್.ಬಿ. ತಿಮ್ಮಾಪುರ, ಸಂಸದರಾದ ಪ್ರಕಾಶ್ ಹುಕ್ಕೇರಿ, ಪಿ.ಸಿ. ಗದ್ದೀಗೌಡರ,  ರಾಜ್ಯಸಭೆ ಸದಸ್ಯರಾದ ಪ್ರಭಾಕರ ಕೋರೆ, ಶಾಸಕರಾದ ಸಿದ್ದು ಸವದಿ, ಶ್ರೀಮಂತ ಪಾಟೀಲ, ಮಹೇಶ್ ಕುಮಟಳ್ಳಿ, ಎಂಎಲ್ ಸಿ ಎಸ್.ಆರ್. ಪಾಟೀಲ, ಸಿಎಂ ಸಂಸದೀಯ ಗಣೇಶ್ ಹುಕ್ಕೇರಿ, ಕಾರ್ಯದರ್ಶಿ ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಮಹಂತೇಶ ಕವಟಗಿಮಠ, ಬೆಳಗಾವಿ ಉತ್ತರ ವಲಯ ನೀರಾವರಿ ಮುಖ್ಯ ಎಂಜಿನಿಯರ್ ಅರವಿಂದ ಕೂಗಲಿ ಭಾಗವಹಿಸಿದ್ದರು. ಸಭೆಗೆ  ಶಾಸಕರುಗಳಾದ ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ ಗೈರಾಗಿದ್ರು.  

ಕೆಲ ದಿನಗಳ ಹಿಂದೆ ಜಾರಕಿಹೊಳಿ ಸಹೋದರರ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯದಿಂದಲೇ ರಮೇಶ್ ಜಾರಕಿಹೊಳಿ ಸಭೆಗೆ ಗೈರಾಗಿದ್ರು ಅನ್ನೋ ಮಾತುಗಳು ಕೇಳಿಬರುತ್ತಿವೆ.

- Advertisement -

Latest Posts

Don't Miss