ತನ್ನ ಬೋಲ್ಡ್ ಕ್ಯಾರೆಕ್ಟರ್ ಮೂಲಕವೇ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಡ್ರಗ್ ಮಾಫಿಯಾ ವಿರುದ್ಧ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಡ್ರಗ್ ಮಾಫಿಯಾ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿ ಇರೋ ನಟಿ ರಿಯಾ ಚಕ್ರಬೋರ್ತಿ ಪರ ಬ್ಯಾಟ್ ಬೀಸಿದ ನಟಿ ಸೋನಮ್ ಕಪೂರ್ರನ್ನ ಕಂಗನಾ ಮಾಫಿಯಾ ದಡ್ಡಿ ಅಂತಾ ಜರಿದಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಕೇಸ್ ವಿಚಾರಣೆ ಎದುರಿಸುತ್ತಿದ್ದ ನಟಿ ರಿಯಾ ಡ್ರಗ್ ಪ್ರಕರಣದಡಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿಯೇ ಬಾಲಿವುಡ್ನ ಡ್ರಗ್ ವ್ಯಸನಿಗಳು ಇದೀಗ ರಿಯಾ ಪರ ಮಾತನಾಡೋಕೆ ಶುರುವಿಟ್ಟಿದ್ದಾರೆ. ಜನತೆಗಾಗಿ ನನ್ನ ಹೋರಾಟ ಎಂದಿಗೂ ಮುಂದುವರೆಯುತ್ತೆ. ಸ್ವಯಂ ಬಲದಿಂದ ಇಷ್ಟು ಮೇಲೆ ಬಂದಿರೋ ನನ್ನ ಹೋರಾಟವನ್ನ ಇಂತ ಸಣ್ಣ ಡ್ರಗ್ ವ್ಯಸನಿಗಳಿಗೆ ಹೋಲಿಸಬೇಡಿ ಅಂತಾ ಗುರುವಾರ ಟ್ವೀಟ್ ಮಾಡಿದ್ದಾರೆ.




