Tuesday, October 15, 2024

Latest Posts

ಜೂನಿಯರ್ ರೆಬಲ್ ಸ್ಟಾರ್ ಮುಂದಿನ ಸಿನಿಮಾ ಯಾವುದು ಗೊತ್ತಾ..?

- Advertisement -

ಅಮರ್​ ಸಕ್ಸಸ್ ಬಳಿಕ ಅಭಿಷೇಕ್ ಅಂಬರೀಷ್​ ಏನ್ ಮಾಡ್ತಿದ್ದಾರೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡಿದ್ದಂತು ಸುಳ್ಳಲ್ಲ. ಇತ್ತೀಚೆಗೆ ಜೂನಿಯರ್ ರೆಬಲ್ ಸ್ಟಾರ್ ಗಡ್ಡ ಬಿಟ್ಟು ಡಿಫರೆಂಟ್ ಲುಕ್​ನ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ಅಭಿಯ ಮುಂದಿನ ಸಿನಿಮಾದ ಬಗ್ಗೆ ಗಾಂಧಿನಗರದಲ್ಲಿ ಚರ್ಚೆ ಶುರುವಾಗಿಬಿಟ್ಟಿತ್ತು. ಆದ್ರೆ ಅಭಿಷೇಕ್ ಎರಡನೇ ಸಿನಿಮಾ ಯಾವುದು ಅನ್ನೋದು ಇನ್ನು ಸಸ್ಪೆನ್ಸ್ ಆಗಿಯೇ ಉಳಿದಿದೆ. ಜೂನಿಯರ್ ರೆಬಲ್ ಸ್ಟಾರ್ ಎರಡನೇ ಸಿನಿಮಾ ಬೆನ್ನತ್ತಿ ಹೊರಟಾಗ ಸುಳಿವು ಸಿಕ್ಕಿದ್ದು ಮಾತ್ರ ಮೂರನೇ ಚಿತ್ರದ ಬಗ್ಗೆ.

https://www.instagram.com/p/B2Ec6AqAo6n/?utm_source=ig_web_copy_link

ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ನಿರ್ದೇಶಕ ರವಿ ಗಾಣಿಕ ಜೂನಿಯರ್ ರೆಬಲ್ ಸ್ಟಾರ್​ ಮೂರನೇ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಈಗಾಗ್ಲೇ ಕಥೆ ರೆಡಿಯಿದ್ದು, ಸುಮಲತಾ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಅಂದಹಾಗೇ ರವಿ ಗಾಣಿಕ ನಿರ್ದೇಶಿಸ್ತಿರೋ ಸಿನಿಮಾ ಸೆಂಟಿಮೆಂಟಲ್ ಸ್ಟೋರಿಯಂತೆ. ಅಲ್ಲದೇ ಅಭಿ ಜೊತೆ ಸ್ಯಾಂಡಲ್​ವುಡ್​ ಹಿರಿಯ ಕಲಾವಿದರೊಬ್ಬರು ಅಭಿನಯಿಸಲಿದ್ದಾರೆ. ಹಾಗಾದ್ರೆ ಅಭಿಷೇಕ್ ಎರಡನೇ ಸಿನಿಮಾ ಯಾವುದು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ

- Advertisement -

Latest Posts

Don't Miss