Political News: ದೇಶದ ವಿಚಾರ ಬಂದಾಗ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಬೇಕು. ಆದರೆ, ಭಾರತದ ನೆಲದಲ್ಲೇ ನಿಂತು ವಿದೇಶಿ ರಾಜಕಾರಣಿಯೊಬ್ಬರು ದೇಶದ ಪ್ರಜಾಪ್ರಭುತ್ವದ ಬಗ್ಗೆ ಟೀಕೆ ಮಾಡುತ್ತಿದ್ದಾಗ ರಾಹುಲ್ ಗಾಂಧಿ ಚಪ್ಪಾಳೆ ತಟ್ಟಿ ನಕ್ಕಿದ್ದೇಕೆ? ಇದೀಗ ಇದೇ ವಿಚಾರವಾಗಿ ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ವೀಡಿಯೋ ಶೇರ್ ಮಾಡಿರುವ ಜಗ್ಗೇಶ್, ಯಾರೋ ಪರಕೀಯ ಭಾರತ ದೇಶ ಅದರ ಸಂವಿಧಾನ ಅಪಮಾನ ಮಾಡೋವಾಗ ಚಪ್ಪಾಳೆ ತಟ್ಟಿ ಸಂಭ್ರಮ ಮಾಡೋ ಮಂದಿ ನೋಡಿದಾಗ ರಕ್ತ ಕುದಿಯಲ್ಲಿಲ್ಲಾ ಎಂದರೆ ಅಂತವರು ಭಾರತೀಯರೆ ಎಂಬ ಪ್ರಶ್ನೆ ಮೂಡುತ್ತದೆ…!!! ರಾಜಕೀಯ ವ್ಯತ್ಯಾಸ ಕೋಟಿ ಇರಲಿ, ಪಕ್ಷದ ಸಿದ್ಧಾಂತ ಅನ್ಯವಿರಲಿ ಭಾರತ ಎಂದಾಗ ನಾವೆಲ್ಲಾ ಭಾರತಮಾತೆ ಮಕ್ಕಳು ಅಲ್ಲವೆ!!!!! ಮುಂದೆ ದೇಶದ ಜನ ನಿರ್ಣಯಿಸುತ್ತಾರೆ. ಜೈ ಹಿಂದ ಎಂದು ಜಗ್ಗೇಶ್ ಹೇಳಿದ್ದಾರೆ.
ಅಷ್ಟಕ್ಕೂ ಈ ವಿವಾದಕ್ಕೆ ಕಾರಣವಾಗಿದ್ದು ಹೈದರಾಬಾದ್‌ನಲ್ಲಿ ನಡೆದ ಭಾರತ್ ಸಮ್ಮಿಟ್ ೨೦೨೬ ಸಮಾವೇಶ. ಇಲ್ಲಿ ಯುರೋಪಿಯನ್ ಸೋಷಿಯಲಿಸ್ಟ್‌ಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿಯಾಕೊಮೊ ಫಿಲಿಬೆಕ್, ಭಾರತದ ಆಂತರಿಕ ರಾಜಕೀಯ ವಿಚಾರ ಪ್ರಸ್ತಾಪಿಸಿ ‘ವೋಟ್ ಚೋರ್, ಗದ್ದಿ ಛೋಡ್’ ಘೋಷಣೆ ಕೂಗಿದ್ದರು. ಈ ವೇಳೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಚಪ್ಪಾಳೆ ತಟ್ಟಿದ ವಿಡಿಯೋ ವೈರಲ್ ಆಗಿತ್ತು.




