Wednesday, June 7, 2023

Latest Posts

ನಾನೂ ಸಿಎಂ ಸ್ಥಾನದ ಆಕಾಂಕ್ಷಿ, ಮತ್ತೆ ಸಿಎಂ ಆಗೋ ಅರ್ಹತೆ ಸಿದ್ದರಾಮಯ್ಯಗಿದೆ- ಸಿದ್ದು ಪರ ಹೋಂ ಮಿನಿಸ್ಟರ್ ಬ್ಯಾಟಿಂಗ್

- Advertisement -

ಬೆಂಗಳೂರು: ನಾನು ಕೂಡಾ ಸಿಎಂ ಸ್ಥಾನದ ಆಕಾಂಕ್ಷಿ. ಆದ್ರೆ ಸಿದ್ದರಾಮಯ್ಯ ಸಿಎಂ ಆಗ್ತಾರೆ ಅಂದ್ರೆ ನಾನು ಬೇಕಾದ್ರೆ ಕಾಯ್ತೇನೆ ಅಂತ ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಅನ್ನೋ ಶಾಸಕ ಸುಧಾಕರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವ್ರು, ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದರಲ್ಲಿ ತಪ್ಪೇನಿದೆ..? ನಾನು ಕೂಡ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಅಂತ ಹೇಳ್ತೀನಿ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಒಳ್ಳೇ ಕೆಲಸಗಳನ್ನ ಮಾಡಿದ್ದಾರೆ. ಅನ್ನಭಾಗ್ಯ, ಕ್ಷೀರ ಭಾಗ್ಯದಂತಹ ಅನೇಕ ಮಹತ್ವದ ಯೋಜನೆಗಳನ್ನ ಕೊಡೋ ಮೂಲಕ ಬಡವರ ಪರ ಕೆಲಸ ಮಾಡಿದ್ದಾರೆ. ಅವ್ರು ಎರಡನೇ ಬಾರಿ ಸಿಎಂ ಆಗಬೇಕಿತ್ತು. ಆದ್ರೆ ಜನರ ತೀರ್ಪನ್ನೂ ನಾವು ಗೌರವಿಸಬೇಕು. ಸಿದ್ದರಾಮಯ್ಯ ಅವ್ರಿಗೆ ಮತ್ತೊಮ್ಮೆ ಸಿಎಂ ಆಗೋ ಎಲ್ಲಾ ಅರ್ಹತೆ ಇದೆ ಅಂತ ಹೋಂ ಮಿನಿಸ್ಟರ್ ಎಂ.ಬಿ.ಪಾಟೀಲ್ ಹೇಳಿದ್ದಾರೆ.

- Advertisement -

Latest Posts

Don't Miss