ತಟ್ಟಂತ ಸುಳ್ಳು ಹೇಳಿ..!! ಹೀಗೊಂದು ಪ್ರಶಸ್ತಿ ಇದ್ರೆ ಅದಕ್ಕೆ ಸೂಕ್ತ ಪಕ್ಷ ‘ಒನ್ ಅಂಡ್ ಒನ್ಲೀ ಪಾರ್ಟಿ’ ಬಿಜೆಪಿ: ಗುಂಡೂರಾವ್

Political News: ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲವೆಂದು ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ಈ ಬಗ್ಗೆ ಆರೋಗ್ಯ ಸಚಿವರಾದ ಗುಂಡೂರಾವ್ ಅವರು ಸರಿಯಾಗಿ ರಿಪ್ಲೈ ನೀಡಿದ್ದಾರೆ.

ತಟ್ಟಂತ ಸುಳ್ಳು ಹೇಳಿ..!! ಹೀಗೊಂದು ಪ್ರಶಸ್ತಿ ಇದ್ರೆ ಅದಕ್ಕೆ ಸೂಕ್ತರು, ಹಕ್ಕುದಾರರು ಹಾಗೂ ವಿಜೇತರು ಅಂದ್ರೆ, ‘ಒನ್ ಅಂಡ್ ಒನ್ಲೀ ಪಾರ್ಟಿ’ ಬಿಜೆಪಿ. ಯಾಕಂದ್ರೆ, ದಿನಕ್ಕೊಂದು ಸುಳ್ಳು ಹೇಳದಿದ್ದರೆ ತಿಂದದ್ದು ಜೀರ್ಣವಾಗುವುದಿಲ್ಲ ಅಲ್ವಾ ಬಿಜೆಪಿ..? ಎಂದು ಎಕ್ಸ್ ಖಾತೆಯಲ್ಲಿ ಸಚಿವರು ಪ್ರಶ್ನಿಸಿದ್ದಾರೆ.

ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಅಮಾಯಕರನ್ನು ನೀವು ಬಲಿಪಡೆದಿರಿ. ಕನಿಷ್ಠ ಸೌಜನ್ಯಕ್ಕೂ ಆ ಕುಟುಂಬಗಳಿಗೆ ಪರಿಹಾರ ನೀಡಲಿಲ್ಲ. ನಿಮ್ಮ ಪಾಪವನ್ನು ನಾವು ತೊಳೆಯುವ ಪ್ರಯತ್ನ ಮಾಡಿದ್ದೇವೆ. ಸತ್ತವರ ಕುಟುಂಬಕ್ಕೆ ಪರಿಹಾರ ಹಾಗೂ ಮೃತರ ಅವಲಂಭಿತರಿಗೆ ಉದ್ಯೋಗ ನೀಡಿದ್ದೇವೆ.
ಅಂದು ಹೆಣಗಳ ಮೇಲೆ ರಾಜಕಾರಣ ಮಾಡಿದ ನಿಮಗೆ, ಇಂದು ಬಡವರ ಆರೋಗ್ಯದ ಬಗ್ಗೆ ಮಾತನಾಡುವ ನೈತಿಕತೆ ಉಳಿದಿದೆಯೇ? ಮನುಕುಲದ ದ್ರೋಹಿಗಳಾದ ನಿಮಗೆ ಕನಿಷ್ಠ ಆತ್ಮವಿಮರ್ಶೆ ಮಾಡಿಕೊಳ್ಳುವ ಸೌಜನ್ಯವಾದರೂ ಬೇಡವೇ? ಎಂದು ಸಚಿವ ಗುಂಡೂರಾವ್ ಆಕ್ರೋಶ ಭರಿತರಾಗಿ ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿಯವರು ಬಂದಾಗ ರಾಜ್ಯದ ಪರಿಸ್ಥಿತಿಯನ್ನು 18 ಅಂಶಗಳ ಮೂಲಕ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿವರಿಸಿ ಬಾಕಿ ಅನುದಾನ ಬಿಡುಗಡೆ ಮಾಡುವಂತೆ ಕೇಳಬೇಕಾಯಿತು. ವಾಸ್ತವದಲ್ಲಿ ಈ ಕರ್ತವ್ಯ ನಿಭಾಯಿಸಬೇಕಾಗಿದ್ದದ್ದು ರಾಜ್ಯದಿಂದ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ಹಾಗೂ ರಾಜ್ಯ ಬಿಜೆಪಿ ನಾಯಕರು. ಅಂದು, ಮೂಕನಾಯಕರಂತಿದ್ದವರು‌ ಇಂದು ಜನಹಿತಕಾರಿಗಳಂತೆ ನಾಟಕ ಮಾಡುತ್ತಿದ್ದೀರಿ. ಕಿಂಚಿತ್ತಾದರೂ ಮನುಷ್ಯತ್ವ ಅನ್ನೋದು‌ ಉಳಿದಿದ್ದರೆ ರಾಜ್ಯದ ಪರವಾದ 18 ಅಂಶಗಳ ಈಡೇರಿಕೆಗೆ ನೀವೇನು ಕ್ರಮವಹಿಸಿದ್ದೀರಿ ತಿಳಿಸುವಿರಾ? ಎಂದು ಪ್ರಶ್ನೆಗಳನ್ನು ಕೇಳುವ ಮೂಲಕ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿಗೆ ತಿವಿದಿದ್ದಾಾರೆ.
https://twitter.com/dineshgrao/status/2049108967234900405

 

About The Author