Thursday, November 30, 2023

Latest Posts

ನಿತ್ಯಾ ಮೆನನ್‌ ಕುಟುಂಬದಲ್ಲಿ ಕಣ್ಣೀರು. ಈ ಮಧ್ಯೆ ನಟಿಗೆ ಬಹಿಷ್ಕಾರದ ಬೆದರಿಕೆ..!

- Advertisement -

 ಬಹು ಬಾಷಾ ನಟಿ ನಿತ್ಯಾ ಮೆನನ್ ಕೆಲ ದಿನಗಳಿಂದ ಕಾಂಟ್ರೊವರ್ಸಿಯಲ್ಲಿ ಸಿಲುಕಿದ್ದಾರೆ. ಚಿತ್ರರಂಗದಿಂದಲೇ ಬ್ಯಾನ್ ಮಾಡ್ತೀವಿ ಅಂತ ಮಳಯಾಳಂ ನಿರ್ಮಾಪಕರ ಸಂಘ ಹೊರಟಿದೆ. ಅಸಲಿಗೆ ನಿತ್ಯಾ ಮೆನನ್ ಗೆ ಈ ಸಂಕಷ್ಚ ಎದುರಾಗಿರೋದು ಯಾವ ವಿಷ್ಯಕ್ಕೆ ಅಂತ ಹೇಳ್ತೀವಿ ಕೇಳಿ.

ಕೆಲ ನಟ ನಟಿಯರಿಗೆ ಚಿತ್ರರಂಗದಲ್ಲಿ ಸ್ವಲ್ಪ ಏನಾದ್ರೂ ಮಿಂಚ್ ಬಿಟ್ರೆ ಸಾಕು ಅಹಂಕಾರ ನೆತ್ತಿಗೇರುತ್ತೆ , ಅವ್ರ ಕಾಲು ಭೂಮಿ ಮೇಲೆ ನಿಲ್ಲಲ್ಲ, ಯಾರಿಗೂ ಮುಲಾಜೇ ಕೊಡಲ್ಲ ಅನ್ನೋ ಮಾತನ್ನ ನಾವು ಕೇಳಿದ್ದೀವಿ. ಈ ಸಾಲಿಗೇ ನಿತ್ಯಾ ಮೆನನ್ ಕೂಡ ಸೇರಿಬಿಟ್ರಾ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ಬಟ್ ನಿತ್ಯಾ ಮೆನನ್ ಸ್ಟೋರಿನೇ ಬೇರೆ.  ಮಳಯಾಳಂ ಚಿತ್ರವೊಂದರ ಸೆಟ್ ನಲ್ಲಿ ನಿತ್ಯಾ ಆಕ್ಟ್ ಮಾಡ್ತಿದ್ದು ಅಲ್ಲಿಗೆ ಕೆಲ ನಿರ್ಮಾಪಕರು ನಟಿ ಬಳಿ ಮತ್ತೊಂದು ಸಿನಿಮಾ ಬಗ್ಗೆ ಮಾತನಾಡಲು ಬಂದಿದ್ರು. ಆದ್ರೆ ನಿತ್ಯಾ ಮೆನನ್ ಮಾತ್ರ ಇಲ್ಲ ಸಲ್ಲದ ಕಾರಣಗಳನ್ನ ಹೇಳಿ ನಿರ್ಮಾಪಕರನ್ನ ಮೀಟ್ ಮಾಡ್ಲಿಲ್ಲ. ಇದ್ರಿಂದ ಕೋಪಗೊಂಡ ನಿರ್ಮಾಪಕರು ಈ ಹುಡುಗೀಗೆ ತಲೇನೇ ನಿಲ್ಲಲ್ಲ, ತುಂಬಾ ಜಂಭ, ಈ ನಟಿಯನ್ನ ಮಳಯಾಳಂ ಚಿತ್ರರಂಗದಿಂದ ಬ್ಯಾನ್ ಮಾಡ್ತೀವಿ ಅಂತ ಎಚ್ಚರಿಕೆ ನೀಡಿದ್ರು. ಆದ್ರೆ ಪಾಪ ನಿತ್ಯಾ ಮೆನನ್ ಈ ರೀತಿ  ಮಾಡಿದ್ದಕ್ಕೆ ನೀಡದ ರೀಸನ್ ಏನಪ್ಪಾ ಅಂದ್ರೆ, ನನ್ನ ತಾಯಿ 3ನೇ ಹಂತದ ಕ್ಯಾನ್ಸರ್ ನಿಂದ ನರಳಾಡ್ತಿದ್ದಾರೆ, ನಾನು ಅವರ ಬಗ್ಗೇನೇ ಯೋಚ್ನೆ ಮಾಡ್ತಾ ಕ್ಯಾರಾವಾನ್ ನಲ್ಲಿ ಅಳುತ್ತಾ ಕುಳಿತ್ತಿದ್ದೆ. ಇಷ್ಚೆಲ್ಲಾ ನೋವಿನ ಮಧ್ಯೆನೂ ನಾನು ಶೂಟಿಂಗ್  ಗೆ ಬರ್ತೇನೆ. ನನ್ನ ನೋವು ನನಗೇ ಗೊತ್ತು ಅಂತ ಹೇಳಿದ್ದಾರೆ. ಫಿಲ್ಮ್ ಗಳಲ್ಲಿ ಶೈನ್ ಆಗಿ , ಆಕ್ಟಿಂಗ್ ನಲ್ಲಿ ಎಲ್ಲರನ್ನೂ ಖುಷಿಪಡಿಸೋವ್ರಿಗೇನು ಲೈಫ್ ತುಂಬಾ ಈಸಿಯಾಗಿರೋಲ್ಲ ಅನ್ನೋದಕ್ಕೆ ಈ ಘಟನೆ ಸಾಕ್ಷಿ.

- Advertisement -

Latest Posts

Don't Miss