Bollywood News: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಬಾಲಿವುಡ್ ನಟಿ ಖುಷಿ ಮುಖರ್ಜಿ, ಎರಡನೇಯ ಊರ್ಫಿ ಜಾವೇದ್ ಎನ್ನಿಸಿಕ“ಂಡಿದ್ದಾರೆ. ಏಕೆಂದರೆ ಈ ಮುಂಚೆ ನಟಿ ಊರ್ಫಿ ಜಾವೇದ್ ದೇಹ ತೋರಿಸುವ ವಿಚಿತ್‌ರ ಉಡುಪಿನಿಂದಲೇ, ಟ್ರೋಲ್ ಆಗುತ್ತಿದ್ದರು. ಇದೀಗ ಆ ಪ್ಲೇಸ್‌ಗೆ ಖುಷಿ ರಿಪ್ಲೇಸ್ ಆಗಿದ್ದಾರೆ. ಈಕೆಯ ಉಡುಪು ನೋಡಿ ಜನ ವಾವ್ ಅನ್ನೋದಕ್ಕಿಂತ ಹೆಚ್ಚು ಛೀ ಅಂತಿದ್ದಾರೆ. ಟ್ರೋಲ್ ಮಾಡ್ತಿದ್ದಾರೆ.
ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಶೇರ್ ಮಾಡಿರುವ ನಟಿ ಖುಷಿ ಮುಖರ್ಜಿ, ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿದ್ದಾರೆ. ನಾನು ಬೆಂಗಾಲಿ ಬ್ರಾಹ್ಮಣತಿ. ನನಗೆ ಸಂಸ್ಕಾರದ ಬಗ್ಗೆ ಯಾರೂ ಹೇಳಬೇಕಿಲ್ಲ. ಎಲ್ಲ ವಿಷಯಗಳ ಬಗ್ಗೆ ಸ್ವಲ್ಪವಾದರೂ ಜ್ಞಾನವಿರಬೇಕು. ಅದು ನನಗಿದೆ ಎಂದಿರುವ ಖುಷಿ, ಹನುಮಾನ ಚಾಲೀಸಾದ 4 ದೋಹಾಗಳನ್ನು ಪಠಿಸಿದ್ದಾರೆ.
ಅಲ್ಲದೇ, ನನ್ನ ಉಡುಪು ನೋಡಿ ನೀವು ನಾನು ಸಂಸ್ಕಾರ ಅಳೆಯಬೇಕೆಂದಿಲ್ಲ. ನಾನು ಎಲ್ಲಿಂದ ಬಂದಿದ್ದೀನಿ ಅಂತಾ ಮರೆತಿದ್ದೇನೆ ಅಂತಲ್ಲ. ಅದು ನನ್ನ ಫ್ಯಾಷನ್ ಅಷ್ಟೇ ಎಂದು ಖುಷಿ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಖುಷಿ ಬಂಗಾರದ ಬಣ್ಣದ ಉಡುಪು ಧರಿಸಿದ್ದರು. ಇದನ್ನು ನೋಡಿ ಓರ್ವ ವೃದ್ಧ ಆಕೆಗೆ ಒಳ ಉಡುಪು ನೀಡಿ ಎಂದು ಗೇಲಿ ಮಾಡಿದ್ದರು. ಇದು ಟ್ರೋಲ್ ಆಗಿತ್ತು. ಆಗ ವೀಡಿಯೋ ಮಾಡಿದ್ದ ಖುಷಿ, ನಾನು ಅಂಡರ್ ವೀಯರ್ ಧರಿಸಿದ್ದೇನೋ ಇಲ್ಲವೋ ಅಂತಾ ನೀವು ನೋಡಿದ್ದೀರಾ..? ಎಂದು ಖಾರವಾಗಿ ಪ್ರಶ್ನಿಸಿದ್ದರು.