Saturday, December 21, 2024

Latest Posts

‘ಮಮ್ಮಿ’ಯಾದ ಸ್ಯಾಂಡಲ್ ವುಡ್ ನ ಚೆಲುವೆ ಮೇಘನಾ ರಾಜ್..!

- Advertisement -

ಚಂದನವನದ ಚೆಂದುಳ್ಳಿ ಚೆಲುವೆ ಮೇಘನಾ ರಾಜ್ ತಾಯಿಯು ಆಗ್ತಿದ್ದಾರೆ.‌ ಕಳೆದ ವರ್ಷ ಚಿರು ಜೊತೆ ಸಪ್ತಪದಿ ತುಳಿದಿದ್ದ ರಾಜಾಹುಲಿ ಬೆಡಗಿ ಮಮ್ಮಿಯಾಗೋ ಖುಷಿಯಲ್ಲಿದ್ದಾರೆ. ಅರೇ ಮೇಘನಾ ತಾಯಿ ಆಗ್ತಿರೋದು ರಿಯಲ್ ಲೈಫ್ ನಲ್ಲಿ ಅಲ್ಲ ರಿಲ್ ನಲ್ಲಿ.

ಮೇಘನಾ ಕುರುಕ್ಷೇತ್ರ ಸಕ್ಸಸ್ ಬಳಿಕ ಈಗ ಹೊಸ ಸಿನಿಮಾದಲ್ಲಿ ಅಭಿನಯಿಸ್ತಿದ್ದಾರೆ. ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಹಾಗೂ ಮೇಘನಾ ಒಟ್ಟಿಗೆ ತೆರೆ ಹಂಚಿಕೊಳ್ತಿದ್ದಾರೆ. ಸೆಲ್ಪಿ‌ ಮಮ್ಮಿ ಗೂಗಲ್ ಡ್ಯಾನಿ ಅಂತಾ ಚಿತ್ರಕ್ಕೆ ಟೈಟಲ್ ಇಡಲಾಗಿದೆ.

ಈ ಚಿತ್ರದಲ್ಲಿ‌ ಮೇಘನಾ ಸೆಲ್ಪಿ ಮಮ್ಮಿಯಾಗಿ ಅಭಿನಯಿಸಿದ್ರೆ, ಸೃಜನ್ ಗೂಗಲ್ ಡ್ಯಾಡಿಯಾಗಿ ಅಭಿನಯಿಸ್ತಿದ್ದಾರೆ. ಈಗಾಗ್ಲೇ ಶೂಟಿಂಗ್‌ ಕಂಪ್ಲೀಟ್ ಮಾಡಿರೋ ಚಿತ್ರತಂಡ ಈಗ ಟೈಟಲ್ ಫಿಕ್ಸ್ ಮಾಡಿದೆ. ಅಂದಹಾಗೇ ಚಿತ್ರಕ್ಕೆ ಮಧುಚಂದ್ರ ಆ್ಯಕ್ಷನ್ ಕಟ್ ಹೇಳಿದ್ದಾರೆ.

- Advertisement -

Latest Posts

Don't Miss