Monday, December 23, 2024

Latest Posts

ಮಾಡು ಇಲ್ಲವೆ ಮಡಿ, ಇವತ್ತು ಯುಪಿ ವಿರುದ್ದ ಗೆದ್ದರೆ ಪ್ಲೆ ಅಫ್ ಗೆ ಅರ್ಸಿಬಿ

- Advertisement -

sprts news

ಇದೇ ಮೊದಲ ಬಾರಿ ಮಹಿಳಾ  ಐಪಿಎಲ್ ಮೊದಲ  ಆವೃ​ತ್ತಿಯ ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​ನಲ್ಲಿ ಇನ್ನಷ್ಟೇ ಗೆಲು​ವಿನ ಖಾತೆ ತೆರೆ​ಯ​ಬೇ​ಕಿರುವ ​ರಾಯಲ್‌ ಚಾಲೆಂಜ​ರ್ಸ್‌ ಬೆಂಗ​ಳೂ​ರು​(​ಅ​ರ್‌​ಸಿ​ಬಿ) ಮೊದಲ ಪಂದ್ಯದಿಂದ ಇಲ್ಲಿಯವರೆಗೂ ಒಂದು ಪಂದ್ಯವನ್ನು ಗೆಲ್ಲದ ಆರ್ಸಿಬಿ  ಬುಧ​ವಾರ ಮಾಡು ಇಲ್ಲವೇ ಮಡಿ ಪಂದ್ಯ​ದಲ್ಲಿ ಯುಪಿ ವಾರಿ​ಯರ್ಸ್‌ ವಿರುದ್ಧ ಸೆಣ​ಸಾ​ಡ​ಲಿದೆ. ಈಗಾ​ಗಲೇ ಆಡಿ​ರುವ 5 ಪಂದ್ಯ​ಗ​ಳಲ್ಲೂ ಸೋತಿ​ರುವ ಸ್ಮೃತಿ ಮಂಧನಾ ಪಡೆ ಈ ಪಂದ್ಯ​ದಲ್ಲಿ ಗೆಲ್ಲ​ದಿ​ದ್ದ​ರೆ ತಂಡದ ಪ್ಲೇ-ಆಫ್‌ ಹಾದಿ ಸಂಪೂ​ರ್ಣ​ವಾಗಿ ಮುಚ್ಚ​ಲಿದೆ.

ಆರ್‌​ಸಿಬಿ ಸದ್ಯ ಕೊನೆ ಸ್ಥಾನ​ದಲ್ಲೇ ಬಾಕಿ​ಯಾ​ಗಿದ್ದು, ಇನ್ನು ಉಳಿದಿರುವುದು ಕೇವಲ ಮೂರು ಪಂದ್ಯ  ಮಾತ್ರ   ಇನ್ನು​ಳಿದ 3 ಪಂದ್ಯ​ಗ​ಳಲ್ಲಿ ಗೆದ್ದರೂ ಕಳಪೆ ನೆಟ್‌ ರನ್‌​ರೇಟ್‌ ಹೊಂದಿ​ರುವ ಕಾರಣ ಪ್ಲೇ-ಆಫ್‌​ಗೇ​ರುವುದು ಅನು​ಮಾ​ನ​ ಎಂದಿದ್ದಾರೆ. ಹಾಗಾಗಿ ಇಂದು ನಡೆಯುವ ಆರ್ಸಿಬಿ ವಿರುದ್ದ ಯುಪಿ ವಾರಿಯರ್ಸ ನಡುವೆ ಪಂದ್ಯ ನಡೆಯಲಿದ್ದು  ಈ ಪಂದ್ಯ ಬೆಂಗಳೂರು ತಂಡದ ಪಾಲಿಗೆ ಮಾಡು ಇಲ್ಲವೆ ಮಡಿ ಎನ್ನುವಂತಾಗಿದೆ.   ಹೀಗಿ​ದ್ದರೂ ಇನ್ನು​ಳಿದ ಎಲ್ಲಾ ಪಂದ್ಯ​ಗ​ಳಲ್ಲಿ ಬೃಹತ್‌ ಗೆಲುವು ಸಾಧಿಸಿ, ಇತರೆ ತಂಡ​ಗಳ ಫಲಿ​ತಾಂಶ ಆರ್‌​ಸಿಬಿ ಪರ​ವಾಗಿ ಬಂದರೆ ತಂಡಕ್ಕೆ ಪ್ಲೇ-ಆಫ್‌​ಗೇ​ರಲು ಸಾಧ್ಯ​ವಿದೆ. ತಂಡ ಈಗಾ​ಗಲೇ ಯುಪಿ ವಿರುದ್ಧ ಒಂದು ಪಂದ್ಯ​ವ​ನ್ನಾ​ಡಿದ್ದು, 10 ವಿಕೆ​ಟ್‌​ಗ​ಳಿಂದ ಹೀನಾ​ಯ​ವಾಗಿ ಸೋಲ​ನು​ಭ​ವಿ​ಸಿತ್ತು. ಬ್ಯಾಟಿಂಗ್‌​, ಬೌಲಿಂಗ್‌ ಹಾಗೂ ಫೀಲ್ಡಿಂಗ್‌​ನಲ್ಲಿ ಅತ್ಯಂತ ಕಳಪೆ ಪ್ರದ​ರ್ಶನ ನೀಡು​ತ್ತಿ​ರುವ ಆರ್‌​ಸಿಬಿ ಅಸಾ​ಧಾ​ರಣ ಪ್ರದ​ರ್ಶನ ನೀಡಿ​ದ​ರಷ್ಟೇ ಗೆಲುವು ನಗೆ ಬೀರಲಿದೆ  ಅತ್ತ ಯುಪಿ ವಾರಿಯರ್ಸ್‌ 5 ಪಂದ್ಯ​ಗ​ಳಲ್ಲಿ 2ರಲ್ಲಿ ಗೆದ್ದಿ​ದ್ದು, ಮತ್ತೊಂದು ಗೆಲು​ವಿನ ಮೂಲಕ ಪ್ಲೇ-ಆಫ್‌ಗೆ ಮತ್ತಷ್ಟು ಹತ್ತಿ​ರ​ವಾ​ಗುವ ನಿರೀ​ಕ್ಷೆ​ಯ​ಲ್ಲಿ​ದೆ.

ಬೆಂಗಳೂರು ಮಹಿಳಾ ಕ್ರಿಕೇಟ್ ತಂಡಕ್ಕೆ ಎರಡನೆ ಬಾರಿಯೂ ಸೋಲು

ಗುಜರಾತ್ ಕ್ರಿಕೇಟ್ ಕ್ರೀಡಾಂಗಣದ ಕಿರು ಪರಿಚಯ

ಶಾರ್ದೂಲ್ ಮದುವೆಯಲ್ಲಿ ಹಾಡಿ ಕುಣಿದಾಡಿದ ಕ್ರಿಕೇಟ್ ಆಟಗಾರರು

- Advertisement -

Latest Posts

Don't Miss