Sunday, December 22, 2024

Latest Posts

ಶಮಿ ಹ್ಯಾಟ್ರಿಕ್ ಸಾಧನೆ, 32 ವರ್ಷ ಗಳ ದಾಖಲೆ ಸರಿಗಟ್ಟಿದ ವೇಗಿ

- Advertisement -

ಕ್ರೀಡೆ : ಭಾರತದ ವೇಗಿ ಮೊಹಮ್ಮದ್ ಶಮಿ, ನಿನ್ನೆ ಅಫ್ಘಾನಿಸ್ತಾನ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ರು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಭಾರತದ ಎರಡನೇ ಬೌಲರ್ ಅನ್ನೋ ಹಿರಿಮೆಯನ್ನ ತಮ್ಮದಾಗಿಸಿಕೊಂಡ್ರು.

ಈ ಹಿಂದೆ ಅಂದರೆ 1987ರ ವಿಶ್ವಕಪ್ ಟೂರ್ನಿಯಲ್ಲಿ, ಭಾರತದ ಮಾಜಿ ವೇಗಿ ಚೇತನ್ ಶರ್ಮಾ ಹ್ಯಾಟ್ರಿಕ್ ಪಡೆದು ಸಾಧನೆ ಮಾಡಿದ್ರು. 32 ವರ್ಷಗಳ ನಂತರ ಈಗ ಶಮಿ, ಆ ದಾಖಲೆಯನ್ನ ಸರಿಗಟ್ಟಿದಾರೆ. ನಿನ್ನೆ ಸೌತ್ ಹ್ಯಾಂಪ್ಟನ್ ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಅಂತಿಮ ಓವರ್ ನ ಮೂರನೇ ಎಸೆತದಲ್ಲಿ, ಮೊಹಮ್ಮದ್ ನಬಿ ವಿಕೆಟ್ ಪಡೆದ ಶಮಿ, ನಂತರ ನಾಲ್ಕು ಮತ್ತು ಐದನೇ ಎಸೆತದಲ್ಲಿ ಕ್ರಮವಾಗಿ ಅಫ್ತಾಬ್ ಆಲಮ್ ಮತ್ತು ಮುಜೀಬ್ ಉರ್ ರೆಹಮಾನ್ ರನ್ನ ಕ್ಲೀನ್ ಬೌಲ್ಡ್ ಮಾಡಿದ್ರು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಸಾಧನೆ ಮಾಡಿದ್ರು. ಅಂತಿಮವಾಗಿ ಶಮಿ 9.5 ಓವರ್ ಗಳಲ್ಲಿ ಒಂದು ಮೇಡಿನ್ ಸೇರಿದಂತೆ 40 ರನ್ ನೀಡಿ 4 ವಿಕೆಟ್ ಪಡೆದುಕೊಂಡ್ರು. ಪರಿಣಾಮವಾಗಿ ಇನ್ನು ಒಂದು ಎಸೆತ ಬಾಕಿ ಇರುವಂತೆ ಅಫ್ಘಾನ್ ಇನಿಂಗ್ಸ್ ಗೆ ತೆರೆ ಬಿತ್ತು.

ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss