Wednesday, November 26, 2025

Latest Posts

ʼಕುಂದಾʼ ಕ್ಷಿಪ್ರ ಕ್ರಾಂತಿ: ಬೆಳಗಾವಿ ರಾಜಕೀಯ ಬೆಂಗಳೂರಿಗೆ ಶಿಫ್ಟ್!?

- Advertisement -

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಂಡಿದೆ. ಈ ಎಲ್ಲ ಗೊಂದಲಕ್ಕೆ ಯಾವಾಗ ತೆರೆ ಬಿಳಲಿದೆ ಅನ್ನೊದು ಕುತೂಹಲಗೊಂಡಿದೆ. ಈ ನಡುವೆ ಹಿರಿಯ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಸನ್ಯಾಸಿ ಅಲ್ಲ. ರಾಜಕಾರಣದಲ್ಲಿ ಯಾರನ್ನಾದರೂ ಸನ್ಯಾಸಿ ನೋಡಿದ್ದೀರಾ? ಅಂತ ಪ್ರಶ್ನೆ ಎಸಗಿದ್ದಾರೆ. ಬೆಳಗಾವಿ ಅಧಿವೇಶನದ ಬಳಿಕ ನಾಯಕತ್ವ ಗೊಂದಲಕ್ಕೆ ಪೂರ್ಣ ವಿರಾಮ ಬೀಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ರಾಜಕೀಯ ಅಂದ್ರೆ ಅದು ಬೆಳಗಾವಿ ರಾಜಕೀಯ. ಅದು ಯಾವಾಗ, ಹೇಗೆ ಟ್ವಿಸ್ಟ್ ಕೊಡತ್ತೋ ಗೊತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇದ್ದರು ಅದು ಬೆಳಗಾವಿ ರಾಜಕಿಯದಿಂದಲೇ, ಸರ್ಕಾರ ಬಿದ್ದರು ಅದು ಬೆಳಗಾವಿ ರಾಜಕಿಯದಿಂದಲೇ. ಹಿಗಿರೋವಾಗ ಕುಂದಾ ‘ಕ್ಷಿಪ್ರ ಕ್ರಾಂತಿ’ ಸೃಷ್ಟಿ ಮಾಡಲಿದ್ಯಾ ಅನ್ನೋ ನೇರ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ.

ಡಿಕೆಶಿಯ ಕಾರಣದಿಂದ ಹಿಂದಿನ ಸಮ್ಮಿಶ್ರ ಸರ್ಕಾರ ಬಿದ್ದಿತ್ತು ಎನ್ನುವ ರಮೇಶ್ ಜಾರಕಿಹೊಳಿ ಹೇಳಿಕೆಯ ಬಗ್ಗೆ ಪ್ರಶ್ನಿಸಿದಾಗ, ಬ್ರಹ್ಮ ಅವನೊಬ್ಬನಿಗೆ ಶಕ್ತಿ ಕೊಟ್ಟಿರಬೇಕು ಎಂದು ವ್ಯಂಗ್ಯವಾಡಿದರು. ಜೊತೆಗೆ ಬೆಳಗಾವಿ ರಾಜಕೀಯ ಎಲ್ಲಿದೆ? ಎಲ್ಲವೂ ಮುಗಿದು ಹೋಗಿದೆ. ರಾಜಕೀಯ ಈಗ ಬೆಂಗಳೂರಿಗೆ ಶಿಫ್ಟ್ ಆಗಿದೆ ಅಂತ ಗೂಢಾರ್ಥ ಹೇಳಿಕೆ ನೀಡಿದ್ದಾರೆ.

ಇನ್ನು ಪಕ್ಷದ ನಾಯಕತ್ವ ಬಿಕ್ಕಟ್ಟನ್ನು ರಾಷ್ಟ್ರೀಯ ನಾಯಕರು ಚುರುಕಾಗಿ ಗಮನಿಸುತ್ತಿದ್ದಾರೆ. ಬೇಗನೇ ಬಗೆಹರಿಯುತ್ತದೆ. ಇದಕ್ಕಾಗಿ ನಾನು ಕೂಡ ಹೈಕಮಾಂಡ್‌ಗೆ ವಿನಂತಿ ಮಾಡಲಿದ್ದೇನೆ ಎಂದು ಹೇಳಿದರು. ಈ ಗೊಂದಲದಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆ. ಆದ್ದರಿಂದ ಹೈಕಮಾಂಡ್ ತಕ್ಷಣವೇ ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿ ವಿಚಾರ ಬಗೆಹರಿಸಬೇಕು ಎಂದು ಒತ್ತಿಹೇಳಿದ್ದಾರೆ.

ಯಾರು ಪರ ಅಥವಾ ವಿರೋಧ ಅಲ್ಲ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂತ ಡಿಸಿಎಂ ಡಿ.ಕೆ. ಶಿವಕುಮಾರ್ ಪರವಾಗಿ ನಿಂತಿದ್ದಾರೆ ಎಂಬ ಆರೋಪಕ್ಕೆ ಸವದಿ ಸ್ಪಷ್ಟ ಉತ್ತರ ನೀಡಿದರು. ನನ್ನ ಸಿಕ್ಕಾ ಹೋಡಿತಾ ಇದ್ದೀರಾ? ನಾನು ಯಾರ ಪರ–ವಿರೋಧ ಅಂತಿಲ್ಲ. ಯಾರೂ ನನ್ನ ನೇತೃತ್ವದಲ್ಲಿ ದೆಹಲಿಗೆ ಹೋಗಿಲ್ಲ ಎಂದಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss